ಬಜೆಟ್ ಮಾರನೆ ದಿನವೇ ಚಿನ್ನದ ದರದಲ್ಲಿ ಭಾರೀ ಇಳಿಕೆ : ಆಭರಣ ಪ್ರಿಯರು ಫುಲ್ ಖುಷ್
ಚಿನ್ನದ ದರದಲ್ಲಿ ಇಳಿಕೆ ಕಾಣಬಹುದು ಎಂದು ನಿರೀಕ್ಷಿಸಿದ್ದವರು ಕಾಯುತ್ತಿದ್ದ ದಿನ ಕೊನೆಗೂ ಬಂದಿದೆ. ಕೇಂದ್ರ ಬಜೆಟ್ ಮಂಡನೆಯಾದ ಮರುದಿನವೇ ಚಿನ್ನದ ದರದಲ್ಲಿ ಗಮನಾರ್ಹ ಕುಸಿತ ಕಂಡಿದ್ದು ಜನತೆ ಫುಲ್ ಖುಷ್ ಆಗಿದ್ದಾರೆ.
24 ಕ್ಯಾರೆಟ್ ಶುದ್ಧ ಚಿನ್ನದ ದರ ಒಂದು ಗ್ರಾಂಗೆ ನಿನ್ನೆ 16,058 ರೂಪಾಯಿ ಆಗಿತ್ತು. ಆದರೆ ಇಂದು ಇದರ ಬೆಲೆ 15,153 ರೂಪಾಯಿ ಆಗಿದ್ದು ಬರೋಬ್ಬರಿ 905 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ 8 ಗ್ರಾಂ 24 ಕ್ಯಾರಟ್ ಚಿ್ನನದ ದರ 1,21,224 ರೂಪಾಯಿ ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದರೆ 8 ಗ್ರಾಂ 24 ಕ್ಯಾರಟ್ ಚಿನ್ನದ ದರದಲ್ಲಿ ಬರೋಬ್ಬರಿ 7240 ರೂಪಾಯಿ ಇಳಿಕೆ ಕಂಡಿದೆ. ಅದೇ ರೀತಿ 10 ಗ್ರಾಮ ಚಿನ್ನದ ದರದಲ್ಲಿ 9050 ರೂಪಾಯಿ ವ್ಯತ್ಯಾಸ ಕಂಡುಬಂದಿದ್ದು ಇಂದು 10 ಗ್ರಾಂ ಚಿನ್ನದ ದರ ₹1,51,530 ರೂ. ಆಗಿದೆ.
ಅದೇ ರೀತಿ 22 ಕ್ಯಾರೆಟ್ ಚಿನ್ನದ ದರದಲ್ಲಿಯೂ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. 1 ಗ್ರಾಂ ಚಿನ್ನದ ಬೆಲೆ ಇಂದು 13,890 ರೂಪಾಯಿ ಆಗಿದೆ. ನಿನ್ನೆ ಈ ದರ 14,720 ರೂಪಾಯಿ ಆಗಿತ್ತು. ಇನ್ನು ಅದೇ ರೀತಿ 8 ಗ್ರಾಂ ಚಿನ್ನದ ದರ 1,11,120 ರೂಪಾಯಿ ಆಗಿದೆ.
ಇದನ್ನೂ ಓದಿ: Gold Silver Price: ಚಿನ್ನ- ಬೆಳ್ಳಿ ಬೆಲೆ ಭಾರೀ ಇಳಿಕೆ!
ಚಿನ್ನದ ದರ ಮಾತ್ರವಲ್ಲದೇ ಬೆಳ್ಳಿಯ ದರದಲ್ಲಿಯೂ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಒಂದು ಗ್ರಾಂ ಬೆಳ್ಳಿದರದಲ್ಲಿ 50 ರೂಪಾಯಿ ಇಳಿಕೆ ಇಂಡಿದ್ದು ಪ್ರತಿ ಗ್ರಾಂ ಬೆಳ್ಳಿ ದರ 300 ರೂಪಾಯಿ ಆಗಿದೆ. 8 ಗ್ರಾಂ ಬೆಳ್ಳಿ ದರ 2400 ರೂಪಾಯಿ ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದರೆ 8 ಗ್ರಾಂ ಬೆಳ್ಳಿ ದರದಲ್ಲಿ 400 ರೂಪಾಯಿ ಇಳಿಕೆ ಕಂಡುಬಂದಿದೆ.



