ಸಿಗರೇಟ್ ಪ್ರಿಯರ ಜೇಬಿಗೆ ಕತ್ತರಿ: ಹೊಸ ಅಬಕಾರಿ ಸುಂಕ ಜಾರಿಯಿಂದ ಗಗನಕ್ಕೇರಿದ ಬೆಲೆ
Cigarette price hike: ಕೇಂದ್ರ ಸರ್ಕಾರದ ಬಜೆಟ್ ಬೆನ್ನಲ್ಲೇ ಧೂಮಪಾನಿಗಳಿಗೆ ದೊಡ್ಡ ಶಾಕ್ ಎದುರಾಗಿದೆ. ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಸಿಗರೇಟ್ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿವೆ. ಹೊಸ ನಿಯಮದ ಪ್ರಕಾರ, ತಂಬಾಕು ಉತ್ಪನ್ನಗಳಿಗೆ ಈಗ ಶೇಕಡಾ 40ರಷ್ಟು ಜಿಎಸ್‌ಟಿ ಜೊತೆಗೆ ಹೆಚ್ಚುವರಿ ಸುಂಕವನ್ನು ಅನ್ವಯಿಸಲಾಗುತ್ತಿದೆ. ಇದರಿಂದಾಗಿ ಪ್ರತಿ ಪ್ಯಾಕ್ ಸಿಗರೇಟ್ ಬೆಲೆಯಲ್ಲಿ ಸುಮಾರು 22 ರೂಪಾಯಿಯಿಂದ 55 ರೂಪಾಯಿವರೆಗೆ ಏರಿಕೆಯಾಗಿದ್ದು, ಫೆಬ್ರವರಿ 1ರಿಂದಲೇ ಹೊಸ ದರಗಳು ಜಾರಿಗೆ ಬಂದಿವೆ.
ಬೆಲೆ ಏರಿಕೆಯ ಪರಿಣಾಮವಾಗಿ ಪ್ರಮುಖ ಬ್ರ್ಯಾಂಡ್‌ಗಳಾದ ಐಟಿಸಿ ಕಿಂಗ್ ಮತ್ತು ಗೋಲ್ಡ್ ಫ್ಲೇಕ್ ಪ್ಯಾಕ್‌ಗಳ ಬೆಲೆ 170 ರೂಪಾಯಿಯಿಂದ 220-225 ರೂಪಾಯಿಗೆ ಏರುವ ನಿರೀಕ್ಷೆಯಿದೆ. ಅಂತೆಯೇ, ಸ್ಲಿಮ್ ಸಿಗರೇಟ್ ಮತ್ತು ನೇವಿಕಟ್ ಬ್ರ್ಯಾಂಡ್‌ಗಳ ಬೆಲೆಯಲ್ಲೂ ಗಣನೀಯ ಏರಿಕೆಯಾಗಲಿದೆ. ತಯಾರಕರು ಸೋಮವಾರದಿಂದಲೇ ಹೊಸ ಎಂಆರ್‌ಪಿ ಹೊಂದಿರುವ ಪ್ಯಾಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ವಿತರಕರು ಹಳೆಯ ಸ್ಟಾಕ್‌ಗಳಿಗೂ ಹೊಸ ದರದ ಲೇಬಲ್ ಅಂಟಿಸಿ ಮಾರಾಟ ಮಾಡುತ್ತಿದ್ದಾರೆ.
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿಯಾಗುತ್ತಲೇ ಪರಾಕ್ ’ : ವರ್ಷದ ಕಾರಣಿಕ ನುಡಿದ ಮೈಲಾರ ಮೈಲಾರಲಿಂಗೇಶ್ವರ
ಈ ಅನಿರೀಕ್ಷಿತ ಬೆಲೆ ಏರಿಕೆಯು ಸಣ್ಣ ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ. ದೇಶಾದ್ಯಂತ ಇರುವ ಕೋಟ್ಯಂತರ ಚಿಲ್ಲರೆ ವ್ಯಾಪಾರಿಗಳಿಗೆ ಸಿಗರೇಟ್ ಮಾರಾಟವೇ ಪ್ರಮುಖ ಜೀವನೋಪಾಯವಾಗಿದೆ. ಅತಿಯಾದ ತೆರಿಗೆಯಿಂದಾಗಿ ಮಾರುಕಟ್ಟೆಯಲ್ಲಿ ಕಳ್ಳಸಾಗಣೆ ಅಥವಾ ನಕಲಿ ಸಿಗರೇಟ್‌ಗಳ ಹಾವಳಿ ಹೆಚ್ಚಾಗಬಹುದು, ಇದು ಅಧಿಕೃತ ವ್ಯಾಪಾರಿಗಳ ಆದಾಯಕ್ಕೆ ಪೆಟ್ಟು ನೀಡಬಹುದು ಎಂದು ವಿತರಕರ ಒಕ್ಕೂಟ ಕಳವಳ ವ್ಯಕ್ತಪಡಿಸಿದೆ. ಸರ್ಕಾರವು ಸಿನ್ ಗೂಡ್ಸ್ (ಪಾಪದ ಸರಕು) ಎಂದು ಪರಿಗಣಿಸಿ ಈ ಕಠಿಣ ತೆರಿಗೆ ಕ್ರಮ ಕೈಗೊಂಡಿದೆ.



