
ICC T20 World Cup 2026 : ಕ್ರಿಕೆಟ್ ಪ್ರಿಯರಿಗೆ ಸಾಲು ಸಾಲು ಹಬ್ಬ ಎಂಬಂತೆ ಒಂದಾದರ ಮೇಲೊಂದರಂತೆ ಕ್ರಿಕೆಟ್ ಪಂದ್ಯಗಳು ಆಯೋಜನೆಗೊಳ್ಳುತ್ತಲೇ ಇವೆ. ಈ ಬಾರಿ ವಿವಾದಗಳ ಮೂಲಕವೇ ಸುದ್ದಿಯಾಗಿರುವ ಐಸಿಸಿ ಟಿ 20 ವಿಶ್ವಕಪ್ ಇಂದಿನಿಂದ ಚಾಲನೆ ಪಡೆದುಕೊಳ್ಳಲಿದೆ. ಶ್ರೀಲಂಕಾ ಹಾಗೂ ಭಾರತ ಜಂಟಿ ಅತಿಥ್ಯದಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ.
ಭಾರತದಲ್ಲಿ 5 ಹಾಗೂ ಶ್ರೀಲಂಕಾದ 3 ನಗರಗಳಲ್ಲಿ ಟಿ 20 ವಿಶ್ವಕಪ್ ನಡೆಯಲಿದೆ. ಈ ಬಾರಿಯ ಟಿ 20 ವಿಶ್ವಕಪ್ ಆಯೋಜನೆಗೆ ಶ್ರೀಲಂಕಾ ಆಸಕ್ತಿ ತೋರಿತ್ತು. ಆದರೆ ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ ಐಸಿಸಿ ಭಾರತ ಹಾಗೂ ಶ್ರೀಲಂಕಾದಲ್ಲಿ ಜಂಟಿಯಾಗಿ ಪಂದ್ಯ ಆಯೋಜನೆಗೆ ನಿರ್ಧರಿಸಿದ ಹಿನ್ನೆಲೆಯಲ್ಲಿ ಈ ಬಾರಿ 2 ದೇಶಗಳ ಆತಿಥ್ಯ ಈ ಚುಟುಕು ಪಂದ್ಯಗಳಿಗೆ ಇರಲಿದೆ.
Aslo Read : ವಿಶ್ವಕಪ್ ಫೈನಲ್ನಲ್ಲಿ 175 ರನ್ ಸಿಡಿಸಿದರೂ ವೈಭವ್ ಸೂರ್ಯವಂಶಿ ಸದ್ಯಕ್ಕೆ ಟೀಮ್ ಇಂಡಿಯಾಕ್ಕೆ ಸೇರುವಂತಿಲ್ಲ! ಯಾಕೆ ಗೊತ್ತೇ?
ಈ ಬಾರಿ ಐಸಿಸಿ ಟಿ 20 ವಿಶ್ವಕಪ್ ಪಂದ್ಯ ಆರಂಭಕ್ಕೂ ಮುನ್ನವೇ ಸಾಕಷ್ಟು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದೆ. ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ರನ್ನು ಐಪಿಎಲ್ನ ಕೋಲ್ಕತಾ ತಂಡದಿಂದ ಹೊರಗಿಟ್ಟಿದ್ದಕ್ಕೆ ಪ್ರತಿಯಾಗಿ ಭಾರತದಲ್ಲಿ ಪಂದ್ಯ ಆಡುವುದಿಲ್ಲ ಎಂದು ಬಾಂಗ್ಲಾ ಹೊಸ ಬೇಡಿಕೆಯನ್ನು ಇಟ್ಟಿತ್ತು, ನಮ್ಮೆಲ್ಲ ಪಂದ್ಯವನ್ನು ಶ್ರೀಲಂಕಾದಲ್ಲಿ ಮಾತ್ರ ಇಡಬೇಕು ಎಂದು ತಾಕೀತು ಮಾಡಿತ್ತು.
ಆದರೆ ಈ ಷರತ್ತುಗಳನ್ನು ಒಪ್ಪದ ಐಸಿಸಿ ಬಾಂಗ್ಲಾವನ್ನು ಈ ಸರಣಿಯಿಂದ ಹೊರಗಿಟ್ಟು ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಿದೆ. ಇನ್ನು ಬಾಂಗ್ಲಾ ದೇಶವನ್ನು ಈ ಸರಣಿಯಿಂದ ಹೊರಗಿಟ್ಟ ಹಿನ್ನೆಲೆ ಯಲ್ಲಿ ಪಾಕಿಸ್ತಾನವು ಭಾರತದೊಂದಿಗೆ ಆಯೋಜನೆಗೊಂಡಿರುವ ಪಂದ್ಯವನ್ನು ಬಹಿಷ್ಕರಿಸಿದೆ. ಇದು ಈ ಸರಣಿಯ ಆದಾಯದ ಮೇಲೆ ಭಾರೀ ದೊಡ್ಡ ಮಟ್ಟದ ಪೆಟ್ಟು ನೀಡಿದೆ.
Aslo Read : India vs England, U19 World Cup 2026 Final: ಭಾರತಕ್ಕೆ ಐತಿಹಾಸಿಕ ಜಯ, 6ನೇ ಬಾರಿ ಚಾಂಪಿಯನ್ ಪಟ್ಟ!
ಈ ಬಾರಿ ಒಟ್ಟೂ 20 ತಂಡಗಳು ಈ ಹಣಾಹಣಿಯಲ್ಲಿ ಇರಲಿದ್ದು 5 ತಂಡಗಳ 4 ಗುಂಪುಗಳನ್ನು ಮಾಡಲಾಗಿದೆ. ಪ್ರತಿ ಗುಂಪಿನ ಟಾಪ್ 2 ತಂಡಗಳು ಸೂಪರ್8ನಲ್ಲಿ ಸ್ಥಾನ ಪಡೆಯಲಿವೆ. ಈ 8 ತಂಡಗಳನ್ನು ಮತ್ತೆ 2 ಗುಂಪುಗಳನ್ನಾಗಿ ಪ್ರತ್ಯೇಕಿಸಲಾಗುತ್ತದೆ. ಈ ಗುಂಪುಗಳಲ್ಲಿ ಟಾಪ್ 2 ಸ್ಥಾನದ ಪಡೆದ ತಂಡಗಳು ಸೆಮಿಫಿನಾಲೆಯಲ್ಲಿ ಸ್ಥಾನ ಪಡೆಯಲಿದೆ. ಸೆಮಿಫೈನಲ್ನಲ್ಲಿ ಗೆದ್ದ ತಂಡ ಫೈನಲ್ನಲ್ಲಿ ಕಾದಾಟ ನಡೆಸಲಿದೆ.
ICC T20 World Cup 2026 begins today India vs USA


