Shivamogga Air Quality :ಶಿವಮೊಗ್ಗದಲ್ಲಿ ಏರ್ ಕ್ವಾಲಿಟಿ ದಿಢೀರ್ ಕುಸಿತ : ಕರಾವಳಿಯಲ್ಲಿಯೂ ಮುಂದುವರಿದ ಆತಂಕ

Shivamogga Air Quality : ಶಿವಮೊಗ್ಗ : ಕಳೆದ ಕೆಲವು ದಿನಗಳಿಂದಲೂ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಗಾಳಿಯ ಗುಣಮಟ್ಟ ಕುಸಿತವಾಗುತ್ತಿರುವ ಬೆನ್ನಲ್ಲೇ ಮಲೆನಾಡು ಶಿವಮೊಗ್ಗದಲ್ಲಿಯೂ ಏರ್ಕ್ವಾಲಿಟಿ ಕುಸಿತ ಕಂಡಿದೆ. ಇದು ತಜ್ಞರ ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರಲ್ಲಿ ಏರ್ ಕ್ವಾಲಿಟಿ ಸದ್ಯ 177ರಷ್ಟಿದ್ರೆ, ಶಿವಮೊಗ್ಗದಲ್ಲಿ 190ಕ್ಕೆ ತಲುಪಿದೆ. ಉಳಿದಂತೆ ಮಂಗಳೂರಲ್ಲಿ 175, ಮೈಸೂರು 171 ರಷ್ಟಿದ್ದು, ಆತಂಕ ಮೂಡಿಸಿದೆ. ಅದ್ರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದಲೂ ಗಾಳಿಯ ಗುಣಮಟ್ಟದಲ್ಲಿ ಕುಸಿತ ಕಾಣ್ತಾ ಇರೋದು ಆತಂಕ ಮೂಡಿಸಿದೆ.
Also Read :ರಾಜ್ಯದ ಮಹಿಳೆಯರೇ ಗಮನಿಸಿ: ವರ್ಷಕ್ಕೊಮ್ಮೆ ನೀವು ಈ ಕೆಲಸ ಮಾಡಲೇಬೇಕು!
ದಿನದಿಂದ ದಿನಕ್ಕೆ AQI ಕುಸಿತ ಕಾಣ್ತಾ ಇರೋ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ಈಗಾಗಲೇ ಸಲಹೆ ನೀಇಡದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರ ಶಿವಮೊಗ್ಗದಲ್ಲಿ ಗಾಳಿಯ ಗುಣಮಟ್ಟ ಸದ್ಯ ಅರೋಗ್ಯಕ್ಕೆ ಹಾನಿಕಾರವಾಗಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ 100 ರ ಆಸುಪಾಸಿನಲ್ಲಿದ್ದ ಮಂಗಳೂರಿನ AQI 175ರ ಗಡಿ ದಾಟಿದೆ. ಗಾಳಿಯ ಗುಣಮಟ್ಟ ಕುಸಿತ ಆಗ್ತಾ ಇರುವುದರಿಂದಾಗಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ.
Also Read : ಕರ್ನಾಟಕದ ವಿಜಯಪುರದಲ್ಲಿ ವಿಮಾನ ಪತನ: ರೈತ ಉಮೇಶ್ ಜಮೀನಿಗೆ ಅಪ್ಪಳಿಸಿ ನಜ್ಜುಗುಜ್ಜು
Shivamogga Air Quality Drops Suddenly Pollution Concerns Rise Across Coastal Karnataka



