Sayali Surve: ಸಯಾಲಿ ಸುರ್ವೆ ಯಾರು? ಇಸ್ಲಾಂನಿಂದ ಮತ್ತೆ ಹಿಂದೂ ಧರ್ಮಕ್ಕೆ ಮಾತಾಂತರಗೊಂಡಿದ್ದೇಕೆ?

ಮನೆಯವರ ವಿರೋಧದ ನಡುವೆಯೂ ಮೀರಾ–ಭಯಂದರ್‌ ಮೂಲದ ಉದ್ಯಮಿ ಆತಿಫ್‌ ತಾಸೆಯನ್ನು ವಿವಾಹವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ 2019 ರ ಮಿಸ್‌ ಇಂಡಿಯಾ ಅರ್ಥ್‌ ವಿಜೇತೆ ಸಯಾಲಿ ಸುರ್ವೆ ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾದರೂ ಏಕೆ?

2019 ರ ಮಿಸ್‌ ಇಂಡಿಯಾ ಅರ್ಥ್‌ ವಿಜೇತೆ ಸಯಾಲಿ ಸುರ್ವೆ ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಪಿಂಪ್ರಿ–ಚಿಂಚ್‌ವಾಡ್‌ ನವರಾದ ಇವರು ಶುದ್ಧೀಕರಣ ಪ್ರಕ್ರಿಯೆ ಪೂರ್ಣಗೊಳಿಸುವ ಮೂಲಕ ಮತ್ತೆ ಹಿಂದೂ ಧರ್ಮಕ್ಕೆ 2019 ರಲ್ಲಿ ಮನೆಯವರ ವಿರೋಧದ ನಡುವೆಯೂ ಮೀರಾ–ಭಯಂದರ್‌ ಮೂಲದ ಉದ್ಯಮಿ ಆತಿಫ್‌ ತಾಸೆಯನ್ನು ವಿವಾಹವಾಗಿದ್ದರು. ಮದುವೆಯ ನಂತರ ಸುರ್ವೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಅಷ್ಟೇ ಅಲ್ಲದೇ ತಮ್ಮ ಹೆಸರನ್ನು ಅತೇಜಾ ತಾಸೆ ಎಂದು ಬದಲಿಸಿಕೊಂಡಿದ್ದರು. ಆದರೆ ಮದುವೆಯಾದ ಕೆಲ ದಿನಗಳಲ್ಲೇ ಪತಿಯಿಂದ ಮಾನಸಿಕ ಹಾಗೂ ಭಾವನಾತ್ಮಕ ಕಿರುಕುಳಕ್ಕೆ ಒಳಗಾಗಿದ್ದರು. ಈ ಕಾರಣಕ್ಕಾಗಿ ಹಲವು ಬಾರಿ ಪೊಲೀಸರನ್ನು ಸಂಪರ್ಕಿಸಿದ್ದರೂ ಸಮರ್ಪಕವಾದ ಸಹಾಯ ಸಿಗಲಿಲ್ಲ ಎಂದು ದೂರಿದ್ದಾರೆ. ತದನಂತರ ಕೆಲವು ಹಿಂದೂ ಸಂಘಟನೆಗಳ ಸಹಾಯದಿಂದ ಪುನಃ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ಸಯಾಲಿ ಸುರ್ವೆ ಯಾರು?

ಸಯಾಲಿ ಸುರ್ವೆ ಮಹಾರಾಷ್ಟ್ರದ ಪಿಂಪ್ರಿ–ಚಿಂಚ್‌ವಾಡ್‌ನವರು. ಏವಿಯೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಸಯಾಲಿ 2019 ರಲ್ಲಿ ಮಿಸ್‌ ಇಂಡಿಯಾ ಅರ್ಥ್‌ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ಕುಟುಂಬದವರ ಇಚ್ಛೆಯ ವಿರುದ್ಧ ಮೀರಾ–ಭಯಂದರ್‌ ಮೂಲದ ಉದ್ಯಮಿ ಸಯಾಲಿ ಆತಿಫ್‌ ತಾಸೆಯನ್ನು ವಿವಾಹವಾಗಿದ್ದರು. ವಿವಾಹದ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಇವರಿಗೆ 4 ಮಕ್ಕಳಿದ್ದಾರೆ. ಮದುವೆಯ ನಂತರ ತಮ್ಮ ಹೆಸರನ್ನು ಅತೇಜಾ ತಾಸೆ ಎಂದು ಬದಲಾಯಿಸಿಕೊಂಡಿದ್ದರು.

ಇದನ್ನೂ ಓದಿ: Viral Girl Monalisa: ಮುಸ್ಲಿಂ ಯುವಕನ ಕೈಹಿಡಿದ ‘ಕುಂಭಮೇಳ ಗರ್ಲ್’ ಮೋನಾಲಿಸಾ!

ಹಿಂದೂ ಧರ್ಮಕ್ಕೆ ಮತಾಂತಗೊಳ್ಳಲು ಕಾರಣವೇನು?

ಕುಟುಂಬದವರ ವಿರೋಧದ ನಡುವೆಯೂ 2019 ರಲ್ಲಿ ಮೀರಾ–ಭಯಂದರ್‌ನ ಉದ್ಯಮಿ ಆತಿಫ್‌ ತಾಸೆ ಅವರನ್ನು ವಿವಾಹವಾಗಿದ್ದ ಸಯಾಲಿ ‘ಆತಿಫ್‌ ತಾಸೆಯನ್ನು ಮದುವೆಯಾಗಿದ್ದು ನನ್ನ ಜೀವನದ ದೊಡ್ಡ ತಪ್ಪು’ ಎಂದು ಹೇಳಿದ್ದಾರೆ. ಮದುವೆಯ ಬಳಿಕ ಕಿರುಕುಳ ಪ್ರಾರಂಭವಾಯಿತು, ಇದರ ಬಗ್ಗೆ ಪೊಲೀಸರಿಂದ ಪರಿಹಾರ ಪಡೆಯಲು ಪದೇ ಪದೇ ಯತ್ನಿಸಿದ್ದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಗದಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ಹಲವಾರು ತಿಂಗಳುಗಳ ಕಾಲ ಕಿರುಕುಳವನ್ನು ಸಹಿಸಿಕೊಂಡ ನಂತರ, ಹಿಂದು ಸಂಘಟನೆಗಳನ್ನು ಸಂಪರ್ಕಿಸಿ, ಅವರ ಬೆಂಬಲ ಮತ್ತು ಮಾರ್ಗದರ್ಶನದೊಂದಿಗೆ, ತಮ್ಮ ಮೂಲ ಧರ್ಮಕ್ಕೆ ಮರಳಲು ನಿರ್ಧರಿಸಿದರು. ಅದರಂತೆಯೇ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ “ಶುದ್ಧೀಕರಣ ಪ್ರಕ್ರಿಯೆ” ಹವನ ಮತ್ತು ಮಂತ್ರಗಳನ್ನು ಪಠಿಸುವ ಮೂಲಕ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈಗ ಅವರು ತಮ್ಮ ಹೆಸರನ್ನು ಆದ್ಯ ಸುರ್ವೆ ಎಂದು ಬದಲಾಯಿಸಿಕೊಂಡಿದ್ದಾರೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories