ಇನ್ನೊಂದು ಯುದ್ಧ ಶುರು? ಉತ್ತರ ಕೊರಿಯಾದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ
North Korea vs Japan: ಉತ್ತರ ಕೊರಿಯಾ ಸುಮಾರು 10 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾವಣೆ ಮಾಡಿದೆ ಎಂದು ಯೋನಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಿಶ್ವದ ಗಮನವೆಲ್ಲಾ ಇಸ್ರೇಲ್-ಇರಾನ್ ಸಂಘರ್ಷದ (Iran Israel-US War) ಮೇಲಿರುವಾಗಲೇ, ಅತ್ತ ಉತ್ತರ ಕೊರಿಯಾ (North Korea) ಶನಿವಾರ ಸರಣಿ ಕ್ಷಿಪಣಿ ಉಡಾವಣೆಗಳನ್ನು ನಡೆಸಿದೆ ಎಂದು ದಕ್ಷಿಣ ಕೊರಿಯಾದ (South Korea) ಜಂಟಿ ಮುಖ್ಯಸ್ಥರು ವರದಿ ಮಾಡಿದ್ದಾರೆ.
-
ಕ್ಷಿಪಣಿಗಳ ಸಂಖ್ಯೆ
ಉತ್ತರ ಕೊರಿಯಾ ಸುಮಾರು 10 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾವಣೆ ಮಾಡಿದೆ ಎಂದು ಯೋನಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. -
ಜಪಾನ್ ಪ್ರತಿಕ್ರಿಯೆ
ಈ ಕ್ಷಿಪಣಿಗಳು ಜಪಾನ್ನ ವಿಶೇಷ ಆರ್ಥಿಕ ವಲಯದ (EEZ) ಹೊರಗಿನ ಸಮುದ್ರದಲ್ಲಿ ಬಿದ್ದಿವೆ ಎಂದು ಜಪಾನ್ ಕೋಸ್ಟ್ ಗಾರ್ಡ್ ತಿಳಿಸಿದೆ. ಜಪಾನ್ ಪ್ರಧಾನಿ ಸನಾ ತಕೈಚಿ ಅವರು ಮಾಹಿತಿ ಸಂಗ್ರಹಿಸಲು ಮತ್ತು ವಿಮಾನ ಹಾಗೂ ಹಡಗುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. -
ಕಾರಣವೇನು?
ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡುವೆ ಮಾರ್ಚ್ 9 ರಿಂದ 19 ರವರೆಗೆ ನಡೆಯುತ್ತಿರುವ ವಾರ್ಷಿಕ ಜಂಟಿ ಮಿಲಿಟರಿ ಸಮರಭ್ಯಾಸದ ವಿರುದ್ಧ ಉತ್ತರ ಕೊರಿಯಾ ಈ ಕ್ರಮ ಕೈಗೊಂಡಿದೆ. ಈ ಸಮರಭ್ಯಾಸವನ್ನು ಉತ್ತರ ಕೊರಿಯಾವು ‘ಯುದ್ಧದ ಪೂರ್ವಾಭ್ಯಾಸ’ ಎಂದು ಟೀಕಿಸುತ್ತಾ ಬಂದಿದೆ.ಆಂಡ್ರಾಯ್ಡ್ ಬಳಕೆದಾರರಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ: ಹ್ಯಾಕಿಂಗ್ ತಡೆಯಲು ತಕ್ಷಣವೇ ಹೀಗೆ ಮಾಡಿ
ರಾಜಕೀಯ ಸಂಚಲನ
ಈ ಕ್ಷಿಪಣಿ ಉಡಾವಣೆಯು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಅವರು ಅಮೆರಿಕವನ್ನು ‘ಪರಮಾಣು ರಾಷ್ಟ್ರ’ ಎಂದು ಮಾನ್ಯ ಮಾಡುವಂತೆ ಒತ್ತಾಯಿಸಿದ ಬೆನ್ನಲ್ಲೇ ನಡೆದಿದೆ. ಅಲ್ಲದೆ, ಇರಾನ್ ಮೇಲೆ ಅಮೆರಿಕ ನಡೆಸುತ್ತಿರುವ ದಾಳಿಯನ್ನು ಉತ್ತರ ಕೊರಿಯಾ ತೀವ್ರವಾಗಿ ಖಂಡಿಸಿದೆ.
ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಿಮ್ ಜೊಂಗ್ ಉನ್ ಅವರನ್ನು ಭೇಟಿಯಾಗುವ ಆಶಯ ಹೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ, ಪರಮಾಣು ಶಕ್ತಿಯಾಗಿ ತನ್ನನ್ನು ಗುರುತಿಸಿದರೆ ಮಾತ್ರ ಅಮೆರಿಕದೊಂದಿಗೆ ಸಂಬಂಧ ಸುಧಾರಿಸಲು ಸಾಧ್ಯ ಎಂದು ಕಿಮ್ ಈಗಾಗಲೇ ಷರತ್ತು ವಿಧಿಸಿದ್ದಾರೆ.
[youtube https://www.youtube.com/watch?v=ApMaJ-7pro4]



