ಕರಾವಳಿಯ ಪ್ರವಾಸೋದ್ಯಮಕ್ಕೂ ತಟ್ಟಿದ ಎಲ್ಪಿಜಿ ಅಭಾವ : ಪ್ರವಾಸಿಗರಿಗೆ ಭಾರೀ ನಿರಾಸೆ
ಎಲ್‌ಪಿಸಿ ಅಭಾವದಿಂದ ಕರಾವಳಿ ಭಾಗಕ್ಕೆ ಪ್ರವಾಸಕ್ಕೆಂದು ಆಗಮಿಸುವ ಬಹುತೇಕರು ಇಲ್ಲಿನ ಖಾದ್ಯಗಳನ್ನು ಸವಿಯಲು ಸಿಗದೇ ನಿರಾಶೆಗೊಳಗಾಗುತ್ತಿದ್ದಾರೆ.
ಮಂಗಳೂರು : ರಾಜ್ಯದಲ್ಲಿ ಎಲ್ಪಿಜಿ ಸಿಲಿಂಡರ್ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಪರಿಣಾಮ ಇದೀಗ ಪ್ರವಾಸೋದ್ಯಮಕ್ಕೂ ತಟ್ಟಿದೆ. ಕರಾವಳಿ ಭಾಗಕ್ಕೆ ಪ್ರವಾಸಕ್ಕೆಂದು ಆಗಮಿಸುವ ಬಹುತೇಕರು ಇಲ್ಲಿನ ಖಾದ್ಯಗಳನ್ನು ಸವಿಯುವ ಅಭಿಲಾಷೆ ಹೊಂದಿರುತ್ತಾರೆ. ಆದರೆ ಎಲ್ಪಿಜಿ ಅಭಾವದಿಂದ ಕರಾವಳಿಯ ಬಹುತೇಕ ಹೋಟೆಲ್ಗಳಲ್ಲಿ ಇಲ್ಲಿನ ಜನಪ್ರಿಯ ಖಾದ್ಯಗಳ ತಯಾರಿಕೆಯನ್ನು ಹೋಟೆಲ್ಗಳು ನಿಲ್ಲಿಸಿದ್ದು ಪ್ರವಾಸಿಗರಿಗೆ ನಿರಾಶೆಯುಂಟು ಮಾಡಿದೆ. ಹೀಗಾಗಿ ಬಹುತೇಕರು ತಮ್ಮ ಬುಕ್ಕಿಂಗ್ಗಳನ್ನೇ ಕ್ಯಾನ್ಸಲ್ ಮಾಡುತ್ತಿದ್ದಾರೆ.
ನೂರಕ್ಕೂ ಅಧಿಕ ಪ್ರವಾಸಿ ತಾಣಗಳನ್ನು ಹೊಂದಿರುವ ಪ್ರವಾಸಿಗರ ಸ್ವರ್ಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ಯ ಈ ಪರಿಸ್ಥಿತಿ ತಲೆದೋರಿದೆ. ಇಲ್ಲಿ ರುಚಿಕರ ಮೀನಿನ ಖಾದ್ಯಗಳಿಗೆ ಭಾರೀ ಡಿಮ್ಯಾಂಡ್ ಇದೆ. ಆದರೆ ಈಗ ಎಲ್ಪಿಜಿ ಸಿಲಿಂಡರ್ ಅಭಾವದಿಂದಾಗಿ ಕೆಲ ಹೋಟೆಲ್ಗಳು ಬಂದ್ ಏ ಆಗಿದ್ದರೆ, ಇನ್ನೂ ಕೆಲವು ಹೋಟೆಲ್ಗಳಲ್ಲಿ ಫೇಮಸ್ ಖಾದ್ಯಗಳನ್ನು ಮೆನುವಿನಿಂದಲೇ ತೆಗೆದು ಹಾಕಲಾಗಿದೆ.
ಇದನ್ನೂ ಓದಿ: ಭಾರತಕ್ಕೆ ಮತ್ತಷ್ಟು ‘ಗ್ಯಾಸ್ ಸಂಕಷ್ಟ’ : ಕತಾರ್ನ ಪ್ರಮುಖ ನೈಸರ್ಗಿಕ ಅನಿಲ ಘಟಕದ ಮೇಲೆ ಇರಾನ್ ದಾಳಿ
ಏಪ್ರಿಲ್ – ಮೇ ಸಮೀಪಿಸುತ್ತಿದ್ದಂತೆ ಪ್ರವಾಸಿಗರ ದಂಡೇ ಹರಿದು ಬರ್ತಾ ಇತ್ತು. ಆದರೆ ಈ ಬಾರಿ ಹೋಟೆಲ್ ಬುಕ್ಕಿಂಗ್ ಮಾಡುವವರ ಸಂಖ್ಯೆಯೇ ಕಡಿಮೆಯಾಗಿದೆ. ಕರಾವಳಿಯ ದೇಸಿ ಫುಡ್ ಸವಿಯುವ ಅವಕಾಶ ಇಲ್ಲವೆಂದು ಪ್ರವಾಸಿಗರು ಈ ಕಡೆ ಮುಖ ಮಾಡುವುದನ್ನೇ ಕಡಿಮೆ ಮಾಡಿದ್ದಾರೆ ಎಂದು ಹೋಟೆಲ್ ಮಾಲೀಕರು ಅಸಮಾಧಾನ ಹೊರಹಾಕುತ್ತಿದ್ದಾರೆ.



