ಇರಾನ್‌ಗೆ ಟ್ರಂಪ್‌ ಡೆಡ್‌ಲೈನ್‌, 24 ಗಂಟೆ ಬಾಕಿ

ನೀರು, ವಿದ್ಯುತ್ ಘಟಕಗಳ ಟಾರ್ಗೆಟ್

 

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮುಗಿಯುವ ಲಕ್ಷಣ ಕಾಣುತ್ತಿಲ್ಲ.. 24ನೇ ದಿನವೂ ಇರಾನ್‌ ಹಾಗೂ ಇಸ್ರೇಲ್‌, ಅಮೆರಿಕಾ ಯುದ್ಧ ಮುಂದುವರಿದಿದೆ. ಈಗಾಗಲೇ ಉಭಯ ದೇಶಗಳಿಗೂ
ಭಾರೀ ನಷ್ಟವಾಗಿದ್ದು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿವೆ. ವಿಶ್ವದ ದೊಡ್ಡಣ್ಣ ಅಮೆರಿಕಾಗೂ ಸಡ್ಡು ಹೊಡೆದಿರೋ ಇರಾನ್‌ ಏಟಿಗೆ ಏಟು ಎಂಬಂತೆ ಪ್ರತಿದಾಳಿ ಮಾಡುತ್ತಿದೆ. ಈ ನಡುವೆ ಇರಾನ್‌ಗೆ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹರ್ಮುಜ್‌ ಜಲಸಂಧಿ ಮುಕ್ತಕ್ಕೆ 48 ಗಂಟೆಗಳ ಡೆಡ್‌ಲೈನ್‌ ಕೊಟ್ಟಿದ್ರು.. ಅದ್ರಲ್ಲಿ 24 ಗಂಟೆ ಮುಗಿದಿದ್ದು ಕೇವಲ 24 ಗಂಟೆ ಬಾಕಿ ಇದೆ.

ಕ್ಷಣ ಕ್ಷಣಕ್ಕೂ ಇರಾನ್ ಮೇಲೆ ಮಿಸೈಲ್ ಉಡಾಯಿಸುತ್ತಿರುವ ಇಸ್ರೇಲ್ ಹಾಗೂ ಅಮೆರಿಕಾ ಸಂಪೂರ್ಣ ನಾಶ ಮಾಡುವ ಶಪಥ ಮಾಡಿವೆ. ಆದ್ರೆ ಇರಾನ್ ಇದ್ಯಾವುದಕ್ಕೂ ಸೊಪ್ಪು ಹಾಕ್ತಿಲ್ಲ. ಟ್ರಂಪ್‌ ಡೆಡ್‌ಲೈನ್‌ಗೂ
ಕ್ಯಾರೆ ಎನ್ನದ ಇರಾನ್‌ ಶತ್ರು ದೇಶಗಳಿಗೆ ಹರ್ಮುಜ್‌ ಮುಕ್ತ ಮಾಡಲ್ಲ ಎಂದಿದೆ. ಹೀಗಾಗಿ ಅಮೆರಿಕಾ ಅಧ್ಯಕ್ಷ ಟ್ರಂಪ್‌ 24 ಗಂಟೆ ಬಳಿಕ ಏನ್ ಮಾಡ್ತಾರೆ ಎಂಬುದು ಆತಂಕ ಮೂಡಿಸಿದೆ. ಹಲವು ದೇಶಗಳಿಗೆ ಹರ್ಮುಜ್‌
ಜಲಸಂಧಿ ಮೂಲಕವೇ ಕಚ್ಚಾತೈಲ, ಗ್ಯಾಸ್‌ ಹೋಗಬೇಕು. ಹೀಗಾಗಿ ಹರ್ಮುಜ್‌ ಜಲಸಂಧಿಯನ್ನೇ ಟಾರ್ಗೆಟ್ ಮಾಡಿದ್ದಾರೆ ಟ್ರಂಪ್

ಟ್ರಂಪ್‌ ವಾರ್ನಿಂಗ್

ವಿಶ್ವದ ಪ್ರಮುಖ ಹಡಗು ಮಾರ್ಗವಾಗಿರುವ ಹೊರ್ಮುಜ್‌ ಜಲಸಂಧಿ ಮೂಲಕ ಭಾರತ, ಚೀನಾ ಹಾಗೂ ರಷ್ಯಾದಂಥ ಮಿತ್ರ ರಾಷ್ಟ್ರಗಳ ಹಡಗುಗಳಿಗಷ್ಟೇ ಈ ಜಲಸಂಧಿಯಲ್ಲಿ ಓಡಾಡಲು ಇರಾನ್ ಅವಕಾಶ ನೀಡಿದೆ.
ವೈರಿಗಳಿಗೆ ಹರ್ಮುಜ್‌ ಮುಕ್ತ ಇಲ್ಲ ಎಂದಿರೋದು ಟ್ರಂಪ್‌ ಕಣ್ಣನ್ನ ಕೆಂಪಾಗಿಸಿದೆ. ಹೀಗಾಗಿ ಅಮೆರಿಕಾ ಹಾಗೂ ಇಸ್ರೇಲ್‌ ಇರಾನ್‌ನಾ ನೀರು, ವಿದ್ಯುತ್ ಘಟಕಗಳ ಮೇಲೆ ದಾಳಿ ಮಾಡುವ ಎಚ್ಚರಿಕೆ ನೀಡಿವೆ.
ಇಷ್ಟು ದಿನ ಒಂದು ಲೆಕ್ಕ ಇನ್ಮುಂದೆ ಒಂದು ಲೆಕ್ಕ ಅನ್ನೋ ಹಾಗೇ ಮೂಲ ಅಗತ್ಯಗಳನ್ನೇ ಟಾರ್ಗೆಟ್ ಮಾಡುವ ಎಚ್ಚರಿಕೆ ನೀಡಿವೆ. ಇರಾನ್‌ ಬುಶಹೆರ್‌ ಘಟಕದಲ್ಲಿ ವಿದ್ಯುತ್ ಉತ್ಪಾದಿಸುತ್ತಿದೆ. ಇಲ್ಲಿ ದಾಳಿಯಾದ್ರೆ ವಿಕರಣ ಸೋರಿಕೆಯಾಗುವ ಭೀತಿ ಇದೆ. ವಿಕಿರಣ ಸೋರಿಕೆ ಇರಾನ್ ಅಷ್ಟೇ ಅಲ್ಲದೇ ಅಕ್ಕಪಕ್ಕದ ದೇಶಗಳಿಗೂ ಹರಡುವ ಆತಂಕವಿದೆ. ನೀರಿನ ಘಟಕಗಳ ಮೇಲೆ ದಾಳಿ ಮಾಡಿದ್ರೆ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ.

ಇರಾನ್‌ ತಿರುಗೇಟು:

ಇರಾನ್ ಸೇನೆಯ ಆಪರೇಷನಲ್‌ ಕಮಾಂಡರ್ ಟ್ರಂಪ್‌ಗೆ ತಿರುಗೇಟು ನೀಡಿದ್ದಾರೆ. ಟ್ರಂಪ್‌ ನಮ್ಮ ವಿದ್ಯುತ್‌ ಘಟಕಗಳ ಮೇಲೆ ದಾಳಿ ನಡೆಸಿದ್ರೆ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಇಂಧನ, ತಂತ್ರಜ್ಞಾನ ಮತ್ತು ನೀರು ಶುದ್ಧೀಕರಣ
ಮೂಲಸೌಲಭ್ಯಗಳನ್ನು ಗುರಿಯಾಗಿರಿಸಿ ದಾಳಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ:

ಐಪಿಎಲ್‌ನಲ್ಲಿ ಅಬ್ಬರಿಸಲು ರೆಡಿಯಾದ ಆರ್‌ಸಿಬಿ ಸಿಡಿಲಮರಿ

ಕೊಲ್ಲಿ ದೇಶಗಳು ಶೇ.80ರಷ್ಟು ಜಲ ಶುದ್ಧೀಕರಣ ಅವಲಂಬಿಸಿವೆ. ಕುವೈತ್‌ 90%, ಸೌದಿ 70%, ಒಮಾನ್ 80% ಅವಲಂಬಿಸಿವೆ. ಇಲ್ಲಿ ದಾಳಿ ಮಾಡಿದ್ರೆ ಕುಡಿಯೋ ನೀರಿಗೆ ಸಂಕಷ್ಟ ಗ್ಯಾರೆಂಟಿ. ಅಮೆರಿಕಾ ಬೆದರಿಕೆಗಳಿಗೆ ಬಗ್ಗದ ಇರಾನ್‌
ಪ್ರತಿದಾಳಿಯ ವಾರ್ನಿಂಗ್‌ ನೀಡಿದ್ದು ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories