ಮುಂಬೈ ಇಂಡಿಯನ್ಸ್​ ವಿರುದ್ಧ ಆರ್​ಸಿಬಿಗೆ ದಿಗ್ವಿಜಯ..!

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್​ ವರ್ಸಸ್​ ಆರ್​ಸಿಬಿ ಪಂದ್ಯದಲ್ಲಿ ಆರ್​ಸಿಬಿ ಅಮೋಘ ಗೆಲುವು ದಾಖಲಿಸುವ ಮೂಲಕ ಮತ್ತೊಮ್ಮೆ ತನ್ನ ಜಯದ ನಾಗಾಲೋಟದ ಲಯಕ್ಕೆ ಮರಳಿದೆ. ತವರು ಮೈದಾನದಲ್ಲಿಯೇ ಮುಂಬೈ ಇಂಡಿಯನ್ಸ್​ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದೆ. ಮುಂಬೈ ಇಂಡಿಯನ್ಸ್​ ತಂಡಕ್ಕೆ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಬರೋಬ್ಬರಿ 241 ರನ್​ಗಳ ಸವಾಲು ನೀಡಿತ್ತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್​ ಕೇವಲ 222 ರನ್​ಗಳನ್ನು ಮಾತ್ರ ಕಲೆ ಹಾಕುವಲ್ಲಿ ಶಕ್ತನಾಗುವ ಮೂಲಕಸೋಲು ಕಂಡಿದೆ. ಇದು ಈ ಆವೃತ್ತಿಯ ಐಪಿಎಲ್​ನಲ್ಲಿ ಮುಂಬೈಗೆ ದೊರೆತ ಮೂರನೇ ಸೋಲಾಗಿದೆ.

ಮೊದಲು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿಗೆ ಮೂರು ಅರ್ಧಶತಕಗಳು ದೊರೆತವು. ಫಿಲ್ ಸಾಲ್ಟ್ 36 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಸೇರಿ 78 ರನ್ ಗಳಿಸಿದರು. ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 50 ರನ್ ಕಲೆಹಾಕಿದರು. ತಂಡದ ನಾಯಕ ರಜತ್ ಪಾಟಿದಾರ್ ಕೇವಲ 20 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಸೇರಿಸೊ 53 ರನ್ ಬಾರಿಸಿದರು. ನಂತರ ಟಿಮ್ ಡೇವಿಡ್ ಕೂಡ ಅಜೇಯ 34 ರನ್ ಗಳಿಸಿದರು. ಒಟ್ಟೂ 241 ರನ್​ಗಳ ಸವಾಲನ್ನು ಮುಂಬೈಗೆ ನೀಡಿತ್ತು.

ಇದನ್ನೂ ಓದಿ: ಯಾರು ಈ ಮುಕುಲ್ ಚೌಧರಿ? IPL 2026ರಲ್ಲಿ ಅಬ್ಬರಿಸುತ್ತಿರುವ ಈ ಹೊಸ ‘ಫಿನಿಶರ್’ ಬಗ್ಗೆ ನಿಮಗೆ ಗೊತ್ತಾ?

ಈಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಆರಂಭಿಕ ಮುನ್ನಡೆ ಸಾಧಿಸಿತು, ಆದರೆ ಆರನೇ ಓವರ್‌ನಲ್ಲಿ ರೋಹಿತ್ ಶರ್ಮಾ ಗಾಯಗೊಂಡು ನಿವೃತ್ತರಾದರು. ರಯಾನ್ ರಿಕಲ್ಟನ್ 22 ಎಸೆತಗಳಲ್ಲಿ 37 ರನ್ ಗಳಿಸುವ ಮೂಲಕ ಗೆಲುವಿನ ಭರವಸೆ ಮೂಡಿಸಿದ್ದರು. ಸೂರ್ಯಕುಮಾರ್ ಯಾದವ್ 22 ಎಸೆತಗಳಲ್ಲಿ 33 ರನ್ ಗಳಿಸಿದರು, ಆದರೆ ತಿಲಕ್ ವರ್ಮಾ 1 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ನಂತರ ಹಾರ್ದಿಕ್ ಪಾಂಡ್ಯ 22 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರು.ಶೆರ್ಫೇನ್ ರುದರ್ಫೋರ್ಡ್ ಕೊನೆಯವರೆಗೂ ಹೋರಾಡಿ 31 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದರಾದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. 222 ರನ್​ಗಳೊಮದಿಗೆ ಆರ್​ಸಿಬಿ ಎದುರು ಮುಂಬೈ ಮಂಡಿಯೂರಿತು.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories