ಇಪಿಎಫ್ಓ ಡಿಜಿಟಲ್ ಕ್ರಾಂತಿ : ಎಟಿಎಂ, ಯುಪಿಐ ಮೂಲಕವೂ ಮಾಡ್ಬಹುದು ಭವಿಷ್ಯನಿಧಿ ವಿತ್ಡ್ರಾ
ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು ಡಿಜಿಟಲ್ ಕ್ರಾಂತಿ ಕೈಗೊಂಡಿದೆ. EPFO 3.0 ಭವಿಷ್ಯ ನಿಧಿ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ತರಲಾಗಿದೆ
ಭವಿಷ್ಯ ನಿಧಿ ಹಣವನ್ನು ವಿತ್ಡ್ರಾ ಮಾಡುವುದು ಇಲ್ಲಿಯವರೆಗೂ ಒಂದು ಸುದೀರ್ಘ ಪ್ರಕ್ರಿಯೆಯಾಗಿತ್ತು. ತುರ್ತು ಸಂದರ್ಭಗಳಲ್ಲಿ ಈ ಹಣವನ್ನು ಪಡೆಯುವುದು ಅಷ್ಟು ಸುಲಭದ ಮಾರ್ಗವಾಗಿರಲಿಲ್ಲ. ಆದರೆ ಇನ್ಮುಂದೆ ಹಾಗಲ್ಲ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು ಡಿಜಿಟಲ್ ಕ್ರಾಂತಿ ಕೈಗೊಂಡಿದೆ. EPFO 3.0 ಭವಿಷ್ಯ ನಿಧಿ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ತರಲಾಗಿದೆ.
ಮೊದಲೆಲ್ಲ ಪಿಎಫ್ ಹಣವನ್ನು ಪಡೆಯಬೇಕು ಎಂದರೆ ಅನುಮೋದನೆ ಪಡೆಯಲು ದಿನಗಟ್ಟಲೇ ಕಾಯಬೇಕಾದ ಅನಿವಾರ್ಯಕತೆ ಇತ್ತು. ಆದರೆ ಇದೀಗ ಇಪಿಎಫ್ಓಗೆ ಚುರುಕು ಮುಟ್ಟಿಸುವ ಉದ್ದೇಶದಿಂದ ಇದನ್ನು ಡಿಜಟಲೀಕರಣಗೊಳಿಸಲಾಗುತ್ತಿದೆ.ಹೊಸ ವ್ಯವಸ್ಥೆಯ ಮೂಲಕ ನೀವು ಇತರೆ ಬ್ಯಾಂಕ್ ವ್ಯವಹಾರಗಳಂತೆಯೇ ತ್ವರಿತವಾಗಿ ಹಣ ವಿತ್ಡ್ರಾ ಮಾಡಲು ಸಾಧ್ಯವಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ : 2 ಪರ್ಸೆಂಟ್ ತುಟ್ಟಿ ಭತ್ಯೆ ಹೆಚ್ಚಳಕ್ಕೆ
ಪಿಎಫ್ ಖಾತೆಯನ್ನು ಯುಪಿಐ ಖಾತೆಗೆ ಲಿಂಕ್ ಮಾಡುವ ಮೂಲಕ ನೀವು ಯುಪಿಐ ಆ್ಯಪ್ಗಳಲ್ಲಿ ಕ್ಷಣಾರ್ಧದಲ್ಲಿ ನಿಮ್ಮ ಪಿಎಫ್ ಹಣವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳಬಹುದಾಗಿದೆ. ಬ್ಯಾಂಕ್ ಡೆಬಿಟ್ ಕಾರ್ಡ್ಗಳಂತೆಯೇ, ಇನ್ಮುಂದೆ ಇಪಿಎಫ್ಒ ವಿಶೇಷ ‘ಪೀಎಫ್ ಎಟಿಎಂ ಕಾರ್ಡ್’ ನೀಡಲು ಯೋಜಿಸುತ್ತಿದೆ. ಇದರ ಮೂಲಕ ನೀವು ನೇರವಾಗಿ ಎಟಿಎಂ ಕೇಂದ್ರಗಳಿಗೆ ಹೋಗಿ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದಾಗಿದೆ.



