ಪದವೀಧರರಿಗೆ ಜೂನಿಯರ್ ಅಸಿಸ್ಟೆಂಟ್ ಆಗುವ ಸುರ್ಣಾವಕಾಶ: ಎಲ್‌ಐಸಿ ಹೆಚ್‌ಎಫ್‌ಎಲ್ ಗೆ ಅರ್ಜಿ ಹಾಕಿ
ಎಲ್‌ಐಸಿ ಹೆಚ್‌ಎಫ್‌ಎಲ್ 2026ನೇ ಸಾಲಿನ ಜೂನಿಯರ್ ಅಸಿಸ್ಟಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಯಾರು ಈ ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದು? ಇಲ್ಲಿದೆ ಓದಿ.
ಬ್ಯಾಂಕಿಂಗ್ ಅಥವಾ ಹಣಕಾಸು ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನ ನಡೆಸಬೇಕೆಂಬ ಕನಸು ಕಂಡು ಅದಕ್ಕೆ ತಯಾರಿ ನಡೆಸುತ್ತಿರುವ ಯುವಕರಿಗೆ ಸುವರ್ಣಾವಕಾಶ. ಎಲ್‌ಐಸಿ (LIC) ಹೌಸಿಂಗ್ ಫೈನಾನ್ಸ್ ಲಿಮಿಟೆಡ್ 2026 ನೇ ಸಾಲಿನ ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ನೇಮಕಾತಿ ಪ್ರಕಟಣೆಯ ಪ್ರಕಾರ ಎಲ್‌ಐಸಿ ದೇಶಾದ್ಯಂತ ಒಟ್ಟು 180 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಏಪ್ರಿಲ್ 30, 2026ರ ಒಳಗೆ ಆನ್‌ಲೈನ್ ಮೂಲಕ ತಮ್ಮ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯಲ್ಲಿ ಯಾವ ಅರ್ಹತೆಗಳಿದ್ದವರು ಅರ್ಜಿ ಸಲ್ಲಿಸಬಹುದು ಎಂದು ತಿಳಿಯೋಣ.
ಶೈಕ್ಷಣಿಕ ಅರ್ಹತೆ
ಎಲ್‌ಐಸಿಯ ಈ ನೇಮಕಾತಿಯಲ್ಲಿ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 60% ಅಂಕಗಳೊಂದಿಗೆ ಪದವಿ ಪಡೆದಿರಬೇಕು.
ಕಂಪ್ಯೂಟರ್ ಜ್ಞಾನ
ಈ ಹುದ್ದೆಯು ಸಹಾಯಕ ಮಟ್ಟದ ಹುದ್ದೆಯಾಗಿದ್ದರಿಂದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ನಿರ್ವಹಿಸುವುದರ ಬಗ್ಗೆ ಮೂಲಭೂತ ಜ್ಞಾನ ಹೊಂದಿರುವುದು ಕಡ್ಡಾಯವಾಗಿದೆ.
ವಯೋಮಿತಿ
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 21 ರಿಂದ 30 ವರ್ಷ ವಯಸ್ಸಿನೊಳಗಿರಬೇಕು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ವೇತನ
ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ವಾರ್ಷಿಕ ವೇತನವನ್ನು 4 ರಿಂದ 5 ಲಕ್ಷ ರೂ. ನಿರೀಕ್ಷಿಸಬಹುದು. ಇದರಲ್ಲಿ ಮೂಲ ವೇತನ, ಹೆಚ್‌ಆರ್‌ಎ ಮತ್ತು ಇತರ ಸೌಲಭ್ಯಗಳು ಸೇರಿವೆ.
ಇದನ್ನೂ ಓದಿ: ಆರ್‌ಬಿಐನಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ: ಪರೀಕ್ಷೆ ದಿನಾಂಕ ಜೂನ್ 6
ಅರ್ಜಿ ಸಲ್ಲಿಕೆ ಹೇಗೆ?
* ಅಭ್ಯರ್ಥಿಗಳು ಎಲ್‌ಐಸಿಯ ಅಧಿಕೃತ ವೆಬ್‌ಸೈಟ್ lichousing.com ಗೆ ಭೇಟಿ ನೀಡಿ.
* ಹೋಮ್ ಪೇಜ್‌ನಲ್ಲಿರುವ ಕರಿಯರ್ ಟ್ಯಾಬ್ ಮೇಲೆ ಕ್ಕಿಕ್ಕಿಸಿ.
* ಅಲ್ಲಿ ರಿಕ್ರೂಟ್‌ಮೆಂಟ್ ಆಫ್ ಜೂನಿಯರ್ ಅಸಿಸ್ಟಂಟ್ – 2026 ಆಯ್ದು ಕೊಳ್ಳಿ.
* ಬಳಿಕ ಕ್ಲಿಕ್ ಹಿಯರ್ ಫಾರ್ ನ್ಯೂ ರೆಜಿಸ್ಟ್ರೇಷನ್ ಮೇಲೆ ಕ್ಲಿಕ್ಕಿಸಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ. ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.
* ತದನಂತರ ನಿಮ್ಮ ಭಾವಚಿತ್ರ, ಸೈನ್ ಮತ್ತು ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಿ.
* ಬಳಿಕ ಅರ್ಜಿ ಶುಲ್ಕ ಪಾವತಿಸಿ. ಮತ್ತೊಮ್ಮೆ ಅರ್ಜಿಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.
* ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯ ಪ್ರಿಂಟ್‌ಔಟ್ ತೆಗೆದುಕೊಳ್ಳಿ.



