ಬಾರ್ಡರ್‌ ರೋಡ್ಸ್‌ ಆರ್ಗನೈಸೇಶನ್‌ನಲ್ಲಿ 899 ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

ಬಾರ್ಡರ್ ರೋಡ್ಸ್‌ ಆರ್ಗನೈಸೇಶನ್‌ (BRO) ನ ಜನರಲ್‌ ರಿಸರ್ವ್‌ ಎಂಜಿನಿಯರ್‌ ಫೋರ್ಸ್‌ (GREF) 899 ವಿವಿಧ ಹುದ್ದೆಗಳ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕಟಣೆಯ ಪ್ರಕಾರ ಬಿಆರ್‌ಓ ಭಾರತೀದ ಯುವಕರಿಗೆ ದೇಶ ರಕ್ಷಣೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನೀಡಿದೆ. ಇದರಲ್ಲಿ ಡ್ರಾಟ್ಸಮನ್‌, ಹಿಂದಿ ಟೈಪಿಸ್ಟ್‌ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಏಪ್ರಿಲ್‌ನಲ್ಲಿ ಪ್ರಾರಂಭವಾಗಿ ಮೇ 2026 ವರೆಗೆ ಮುಂದುವರಿಯಲಿದೆ. ಅರ್ಜಿ ಸಲ್ಲಿಕೆ ಪ್ರಾರಂಭದ ಅಧಿಕೃತ ದಿನಾಂಕವನ್ನು ಸದ್ಯದಲ್ಲೇ ಬಹಿರಂಗಪಡಿಸಲಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಬಿಆರ್‌ಓದ ಅಧಿಕೃತ ವೆಬ್‌ಸೈಟ್‌ bro.gov.in ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ

ಬಿಆರ್‌ಓ ಹೊರಡಿಸಿದ ಜಿಆರ್‌ಇಎಫ್‌ ಅಧಿಸೂಚನೆಯಲ್ಲಿ 6 ವಿಭಿನ್ನ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅದರಲ್ಲಿ ಸ್ಟೋರ್‌ ಕೀಪರ್‌ ಟೆಕ್ನಿಕಲ್‌ ಹುದ್ದೆಯಲ್ಲಿ ಅತಿ ಹೆಚ್ಚು ಖಾಲಿ ಹುದ್ದೆಗಳಿವೆ. ಅದರಲ್ಲಿ ಒಟ್ಟು 300 ಹುದ್ದೆಗಳಿಗೆ ಭರ್ತಿ ನಡೆಯಲಿದೆ. ನಂತರ 261 ಆಪರೇಟರ್‌ ಕಮ್ಯುನಿಕೇಷನ್‌ ಹುದ್ದೆ, 207 ಎಕ್ಸ್‌ವೇಟಿಂಗ್‌ ಮಷಿನರಿ ಹುದ್ದೆ, 42 ಡ್ರಾಫ್ಟ್ಸ್‌ಮನ್‌ ಹುದ್ದೆ, ಮತ್ತು 10 ಹಿಂದಿ ಟೈಪಿಸ್ಟ್‌ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅಧಿಸೂಚನೆಯು ಮಾಜಿ ಸೈನಿಕರಿಗೆ (ESM) ಮತ್ತು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ (PwBD) ಮೀಸಲಾತಿಯನ್ನು ಒದಗಿಸುತ್ತದೆ. ಸ್ಟೋರ್ ಕೀಪರ್ ತಾಂತ್ರಿಕ ವಿಭಾಗದಲ್ಲಿ ESM ಗೆ 45 ಮತ್ತು PwBD ಗೆ 12 ಹುದ್ದೆಗಳನ್ನು ಕಾಯ್ದಿರಿಸಿದೆ. ಆಪರೇಟರ್ ಕಮ್ಯುನಿಕೇಶನ್‌ ಹುದ್ದೆಗೆ, ESM ನವರಿಗೆ 39 ಹುದ್ದೆಗಳು ಮತ್ತು ಆಪರೇಟರ್ ಎಕ್ಸಾವೇಟಿಂಗ್‌ ಗೆ 31 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.

ಇದನ್ನೂ ಓದಿ: ಪದವೀಧರರಿಗೆ ಜೂನಿಯರ್‌ ಅಸಿಸ್ಟೆಂಟ್‌ ಆಗುವ ಸುರ್ಣಾವಕಾಶ: ಎಲ್‌ಐಸಿ ಹೆಚ್‌ಎಫ್‌ಎಲ್‌ ಗೆ ಅರ್ಜಿ ಹಾಕಿ

ಡ್ರಾಫ್ಟ್ಸ್‌ಮನ್ ಹುದ್ದೆಯು ESM ಗೆ ಆರು ಮತ್ತು PwBD ಗೆ ಮೂರು ಹುದ್ದೆಗಳನ್ನು ಹಾಗೂ ಎಲೆಕ್ಟ್ರಿಷಿಯನ್ ಹುದ್ದೆಯು ESM ಗೆ 12 ಹುದ್ದೆಗಳನ್ನು ಮೀಸಲಿಟ್ಟಿದೆ. ಇನ್ನು ಹಿಂದಿ ಟೈಪಿಸ್ಟ್ ಹುದ್ದೆಯು ESM ನವರಿಗೆ ಒಂದು ಹುದ್ದೆಯನ್ನು ಮೀಸಲಿಟ್ಟಿದೆ.

ಅರ್ಜಿ ಸಲ್ಲಿಕೆ ಹೇಗೆ?

ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ವಿವರಿಸಿದಂತೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಇದರಲ್ಲಿ ಅರ್ಹತೆಗೆ ಅನುಗುಣವಾಗಿ ಅರ್ಜಿಯನ್ನು ಭರ್ತಿ ಮಾಡಬೇಕು. ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ, ಅರ್ಜಿ ಶುಲ್ಕ ಪಾವತಿಸುವುದು ಅರ್ಜಿ ಸಲ್ಲಿಕೆಯ ಭಾಗವಾಗಿದೆ. ಅತಿ ಮುಖ್ಯವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯ ಪ್ರಿಂಟ್‌ಔಟ್‌ ತೆಗೆದುಕೊಳ್ಳಬೇಕು.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories