ಬಾಲಿವುಡ್‌ನ ‘ಧುರಂಧರ್’ಗೆ ಪಾಕ್ ತಿರುಗೇಟು: ಲಿಯಾರಿಯ ಮಹಿಳಾ ಫುಟ್ಬಾಲ್ ಕಥೆ ಹೇಳಲಿದೆ ‘ಮೇರಾ ಲಿಯಾರಿ’
Dhurandhar vs Mera Lyari: ಬಾಲಿವುಡ್‌ನ ಸ್ಪೈ ಥ್ರಿಲ್ಲರ್ 'ಧುರಂಧರ್' ಚಿತ್ರವು ಕರಾಚಿಯ ಲಿಯಾರಿ ಪಟ್ಟಣವನ್ನು ಗ್ಯಾಂಗ್‌ಸ್ಟರ್‌ಗಳ ತಾಣವಾಗಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ ಕೇಂದ್ರವಾಗಿ ಚಿತ್ರಿಸಿದೆ ಎಂದು ಪಾಕಿಸ್ತಾನದ ಕಡೆಯಿಂದ ಅಸಮಾಧಾನ ವ್ಯಕ್ತವಾಗಿತ್ತು. ಭಾರತೀಯ ಚಿತ್ರರಂಗವು ಪಾಕಿಸ್ತಾನದ ಬಗ್ಗೆ "ನಕಾರಾತ್ಮಕ ಪ್ರಚಾರ" ಮಾಡುತ್ತಿದೆ ಎಂದು ಅಲ್ಲಿನ ಸಿಂಧ್ ಪ್ರಾಂತ್ಯದ ಮಾಹಿತಿ ಸಚಿವರು ಆರೋಪಿಸಿದ್ದರು.
ಭಾರತದ ಸೂಪರ್ ಹಿಟ್ ಸಿನಿಮಾ ‘ಧುರಂಧರ್’ (Dhurandhar) ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಪಾಕಿಸ್ತಾನವು ಇದಕ್ಕೆ ಪ್ರತಿಯಾಗಿ ‘ಮೇರಾ ಲಿಯಾರಿ’ (Mera Lyari) ಎಂಬ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಕರಾಚಿಯ ಲಿಯಾರಿ ಪಟ್ಟಣದ ಹಿನ್ನೆಲೆಯಲ್ಲಿ (Dhurandhar vs Mera Lyari) ಮೂಡಿಬರುತ್ತಿರುವ ಈ ಚಿತ್ರವು ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.
ವಿವಾದದ ಹಿನ್ನೆಲೆ:
ಬಾಲಿವುಡ್‌ನ ಸ್ಪೈ ಥ್ರಿಲ್ಲರ್ ‘ಧುರಂಧರ್’ ಚಿತ್ರವು ಕರಾಚಿಯ ಲಿಯಾರಿ ಪಟ್ಟಣವನ್ನು ಗ್ಯಾಂಗ್‌ಸ್ಟರ್‌ಗಳ ತಾಣವಾಗಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ ಕೇಂದ್ರವಾಗಿ ಚಿತ್ರಿಸಿದೆ ಎಂದು ಪಾಕಿಸ್ತಾನದ ಕಡೆಯಿಂದ ಅಸಮಾಧಾನ ವ್ಯಕ್ತವಾಗಿತ್ತು. ಭಾರತೀಯ ಚಿತ್ರರಂಗವು ಪಾಕಿಸ್ತಾನದ ಬಗ್ಗೆ “ನಕಾರಾತ್ಮಕ ಪ್ರಚಾರ” ಮಾಡುತ್ತಿದೆ ಎಂದು ಅಲ್ಲಿನ ಸಿಂಧ್ ಪ್ರಾಂತ್ಯದ ಮಾಹಿತಿ ಸಚಿವರು ಆರೋಪಿಸಿದ್ದರು.
‘ಮೇರಾ ಲಿಯಾರಿ’ ಚಿತ್ರದ ವೈಶಿಷ್ಟ್ಯಗಳು:
-
ಕಥಾವಸ್ತು: ಅಬು ಅಲೀಹಾ ನಿರ್ದೇಶನದ ಈ ಚಿತ್ರವು ಸ್ಪೋರ್ಟ್ಸ್ ಡ್ರಾಮಾ ಆಗಿದ್ದು, ಲಿಯಾರಿಯ ಮಹಿಳಾ ಫುಟ್ಬಾಲ್ ಆಟಗಾರ್ತಿಯರ ಹೋರಾಟ ಮತ್ತು ಸಾಧನೆಯ ಕಥೆಯನ್ನು ಹೊಂದಿದೆ.
-
ಉದ್ದೇಶ: ಲಿಯಾರಿ ಅಂದರೆ ಕೇವಲ ಅಪರಾಧ ಲೋಕವಲ್ಲ, ಅಲ್ಲಿ ಶಾಂತಿ, ಸಮೃದ್ಧಿ ಮತ್ತು ಕ್ರೀಡಾ ಪ್ರತಿಭೆಗಳೂ ಇವೆ ಎಂಬ ಪಾಸಿಟಿವ್ ಸಂದೇಶವನ್ನು ಜಗತ್ತಿಗೆ ನೀಡುವುದು ಈ ಚಿತ್ರದ ಮುಖ್ಯ ಉದ್ದೇಶವಾಗಿದೆ.
-
ತಾರಾಗಣ: ಚಿತ್ರದಲ್ಲಿ ಖ್ಯಾತ ನಟಿ ಆಯೆಶಾ ಓಮರ್ ಫುಟ್ಬಾಲ್ ಕೋಚ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದನನೀರ್ ಮೊಬೀನ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
ಬಿಡುಗಡೆ ವಿವರ:
‘ಮೇರಾ ಲಿಯಾರಿ’ ಚಿತ್ರವು ಮೊದಲು ಯುಕೆ ಏಷ್ಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಳ್ಳಲಿದ್ದು, ನಂತರ ಮೇ 8, 2026 ರಂದು ಪಾಕಿಸ್ತಾನದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.



