ಕಿಯಾ ಸೆಲ್ಟೋಸ್‌ Vs ಮಾರುತಿ ವಿಕ್ಟೋರಿಸ್‌ : ಮೈಲೇಜ್‌ನಲ್ಲಿ ಯಾವುದು ಬೆಸ್ಟ್?

ಮೈಲೇಜ್‌ ನೋಡಿ ಕಾರು ಖರೀದಿಸುವುದಿದ್ದರೆ ಕಿಯಾ ಸೆಲ್ಟೋಸ್‌ ಮತ್ತು ಮಾರುತಿ ವಿಕ್ಟೋರಿಸ್‌ ಇವೆರೆಡು ಕಾರುಗಳಲ್ಲಿ ಯಾವುದು ಬೆಸ್ಟ್‌? ಇಲ್ಲಿದೆ ಓದಿ.

Kia Seltos Vs Maruti Victoris: ಆಟೋಮೊಬೈಲ್‌ ಮಾರುಕಟ್ಟೆಯಲ್ಲಿ ವಾಹನ ತಯಾರಕರು ವಿವಿಧ ವಿಭಾಗಗಳಲ್ಲಿ ತಮ್ಮ ವಾಹನಗಳನ್ನು ಮಾರಾಟಮಾಡುತ್ತಾರೆ. ಎಸ್‌ಯುವಿ, ಮಿಡ್‌ ಎಸ್‌ಯುವಿ, ಹ್ಯಾಚ್‌ಬ್ಯಾಕ್‌, ಸೆಡಾನ್‌ ಇತ್ಯಾದಿ ವಿಭಾಗಗಳಲ್ಲಿ ಜನಪ್ರಿಯ ಕಂಪನಿಗಳ ಹೊಸ ಹೊಸ ಕಾರುಗಳನ್ನು ಇಂದು ಕಾಣಬಹುದಾಗಿದೆ. ಮಿಡ್‌ ಎಸ್‌ಯುವಿ ವಿಭಾಗದಲ್ಲಿ ಕಿಯಾ ಮತ್ತು ಮಾರುತಿ ಕಂಪನಿಗಳು ಸೆಲ್ಟೋಸ್ ಮತ್ತು ವಿಕ್ಟೋರಿಸ್‌ ಅನ್ನು ಮಾರಾಟಮಾಡುತ್ತಿವೆ. ಮಾರುಕಟ್ಟೆಯಲ್ಲಿ ಈ ಎರಡೂ ಕಾರುಗಳು ನೇರ ಪ್ರತಿಸ್ಪರ್ಧಿಗಳಾಗಿವೆ. ಕಿಯಾ ಸೆಲ್ಟೋಸ‌್ ಮತ್ತ ಮಾರುತಿ ವಿಕ್ಟೋರಿಯಾಸ್‌ ಕಾರುಗಳಲ್ಲಿ ಯಾವುದು ಹೆಚ್ಚು ಮೈಲೇಜ್‌ ನೀಡುತ್ತದೆ? ಗ್ರಾಹಕರ ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕಿಯಾ ಸೆಲ್ಟೋಸ್‌

ಕಿಯಾ ಸೆಲ್ಟೋಸ್‌ ಇದು ಮಿಡ್‌ ಎಸ್‌ಯುವಿ ವಿಭಾಗಕ್ಕೆ ಸೇರಿದ ಕಾರಾಗಿದೆ. ಕಂಪನಿಯು ಈ ಕಾರನ್ನು ಮೂರು ಎಂಜಿನ್ಗಳ ಆಯ್ಕೆಯೊಂದಿಗೆ ನೀಡುತ್ತದೆ. 2 ಪೆಟ್ರೋಲ್‌ ಮತ್ತು ಡೀಸಲ್‌ ಎಂಜಿನ್‌ಗಳು. ಇದರ ಪೆಟ್ರೋಲ್‌ ಕಾರು ಮ್ಯಾನುವಲ್‌ ಮತ್ತು ಸಿವಿಟಿ ಟ್ರಾನ್ಸ್‌ಮಿಷನ್‌ನೊಂದಿಗೆ ಪ್ರತಿ ಲೀಟರ್‌ಗೆ 16.5 ಕಿಮೀ. ಗಳವರೆಗೆ ಮೈಲೇಜ್ ನೀಡಬಲ್ಲದು. ಇದರ ಡೀಸೆಲ್ ಮ್ಯಾನುವಲ್ ಕಾರು 19.4 ಕಿಲೋಮೀಟರ್ ಮೈಲೇಜ್ ನೀಡಬಲ್ಲದು, ಡೀಸೆಲ್ ಆಟೋಮ್ಯಾಟಿಕ್ 17.8 ಕಿಲೋಮೀಟರ್ ಮೈಲೇಜ್ ನೀಡಬಲ್ಲದು. ಟರ್ಬೊ ಪೆಟ್ರೋಲ್ DCT ಕಾರು 17.5 ಕಿಲೋಮೀಟರ್ ಮೈಲೇಜ್ ನೀಡಬಲ್ಲದು ಮತ್ತು IMT ಟ್ರಾನ್ಸ್‌ಮಿಷನ್‌ ನ ಟರ್ಬೊ ಪೆಟ್ರೋಲ್ ಕಾರು 15.6 ಕಿಲೋಮೀಟರ್ ಮೈಲೇಜ್ ನೀಡಬಲ್ಲದು.

ಇದನ್ನೂ ಓದಿ: ಹೊಸ ತಲೆಮಾರಿನ BYD Atto 3 ಕಾರ್‌ ಅನಾವರಣ: ಕೇವಲ 9 ನಿಮಿಷಗಳಲ್ಲಿ ಚಾರ್ಜಿಂಗ್!

ಮಾರುತಿ ವಿಕ್ಟೋರಿಸ್

ಕಿಯಾದ ಸ್ಪರ್ಧಿಯಾದ ಮಾರುತಿ ವಿಕ್ಟೋರಿಸ್ ಕೂಡಾ ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಮಾರಾಟವಾಗುವ ಕಾರಾಗಿದೆ. ತಯಾರಕರು ಈ ಎಸ್‌ಯುವಿಯನ್ನು ಪೆಟ್ರೋಲ್, ಸಿಎನ್‌ಜಿ ಮತ್ತು ಹೈಬ್ರಿಡ್ ಎಂಜಿನ್‌ಗಳ ಆಯ್ಕೆಯೊಂದಿಗೆ ಮಾರಾಟಮಾಡುತ್ತಾರೆ. ಮಾರುತಿಯ ಈ ಕಾರು ಬೈ-ಪೆಟ್ರೋಲ್ ಎಂಜಿನ್ ಮತ್ತು ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಪ್ರತಿ ಲೀಟರ್‌ಗೆ 21.18 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಸ್ವಯಂಚಾಲಿತ ಟ್ರಾನ್ಸ್‌ಮಿಷನ್‌ ಕಾರು 21.06 ಕಿಲೋಮೀಟರ್ ನೀಡಿದರೆ, ಸಿಎನ್‌ಜಿ ಆಧಾರಿತ ಕಾರು 27.02 ಕಿಲೋಮೀಟರ್ ನೀಡುತ್ತದೆ. ಆಲ್‌ಗ್ರಿಪ್ ಸ್ವಯಂಚಾಲಿತ ಕಾರು 19.07 ಕಿಲೋಮೀಟರ್ ಮತ್ತು ಸ್ಟ್ರಾಂಗ್ ಹೈಬ್ರಿಡ್‌ ಕಾರು 28.65 ಕಿಲೋಮೀಟರ್‌ ನೀಡುತ್ತದೆ.

ಬೆಲೆ ಎಷ್ಟು?

ಹೊಸ ತಲೆಮಾರಿನ ಕಿಯಾ ಸೆಲ್ಟೋಸ್ ಬೆಲೆ ₹10.99 ಲಕ್ಷ (ಎಕ್ಸ್ ಶೋ ರೂಂ). ಇದರ ಟಾಪ್-ಸ್ಪೆಕ್ ರೂಪಾಂತರದ ಬೆಲೆ ₹19.99 ಲಕ್ಷ (ಎಕ್ಸ್ ಶೋ ರೂಂ).

ಇನ್ನು ಮಾರುತಿ ವಿಕ್ಟೋರಿಸ್ ಕಾರಿನ ಆರಂಭಿಕ ಬೆಲೆ ₹10.49 ಲಕ್ಷ (ಎಕ್ಸ್ ಶೋ ರೂಂ) ಆಗಿದೆ. ಇದರ ಟಾಪ್ ಸ್ಪೆಕ್ ರೂಪಾಂತರದ ಬೆಲೆ ₹19.99 ಲಕ್ಷ (ಎಕ್ಸ್ ಶೋ ರೂಂ) ಆಗಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories