ಮದುವೆ ಮನೆಯಲ್ಲಿ ಸೂತಕದ ಛಾಯೆ: ಕೂಲರ್ ಗಾಳಿಗಾಗಿ ನಡೆದ ಜಗಳಕ್ಕೆ ಓರ್ವ ಬಲಿ!

ಮದುವೆ ಮನೆಯಲ್ಲಿ ತಂಗಿದ್ದ ಅತಿಥಿಗಳು ರಾತ್ರಿ ಕೂಲರ್​ ಗಾಳಿಗಾಗಿ ಕಿತ್ತಾಡಿಕೊಂಡಿದ್ದು, ಈ ಜಗಳ ಓರ್ವನ ಸಾವಿನಲ್ಲಿ ಅಂತ್ಯಗೊಂಡಿದೆ

ದೇಶಾದ್ಯಂತ ಸೂರ್ಯನ ಪ್ರಖರತೆ ಮಿತಿಮೀರಿದೆ. ಹೀಗಾಗಿ ಇಡೀ ದಿನ ಸೆಖೆಯಲ್ಲಿ ಜನತೆ ಬೇಯುತ್ತಿದ್ದಾರೆ. ಆದರೆ ಇದೇ ಕಾರಣಕ್ಕೆ ಮದುವೆ ಮನೆಯೊಂದರಲ್ಲಿ ರಾದ್ಧಾಂತವೇ ನಡೆದು ಹೋಗಿದೆ. ಮದುವೆ ಮನೆಯಲ್ಲಿ ತಂಗಿದ್ದ ಅತಿಥಿಗಳು ರಾತ್ರಿ ಕೂಲರ್​ ಗಾಳಿಗಾಗಿ ಕಿತ್ತಾಡಿಕೊಂಡಿದ್ದು, ಈ ಜಗಳ ಓರ್ವನ ಸಾವಿನಲ್ಲಿ ಅಂತ್ಯಗೊಂಡಿದೆ. ಉತ್ತರ ಪ್ರದೇಶದ ಅಜಮ್​ಗಢದಲ್ಲಿ ಈ ಘಟನೆ ಸಂಭವಿಸಿದೆ. ಜಿಯಾನ್​ಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಮದುವೆ ಸಮಾರಂಭ ನಡೆಯುತ್ತಿತ್ತು, ರಾತ್ರಿ ವೇಳೆ ಕೂಲರ್​ ಗಾಳಿಗಾಗಿ ವಧು – ವರರ ಕುಟುಂಬಸ್ಥರ ನಡುವೆ ವಾಗ್ವಾದ ಏರ್ಪಟ್ಟಿದೆ ಎನ್ನಲಾಗಿದೆ .

ವಧು ಹಾಗೂ ವರ ಕಡೆಯವರು ಕೂಲರ್​ ಗಾಳಿ ತಾವು ಮಲಗಿರುವ ಕಡೆ ಜಾಸ್ತಿ ಬರಬೇಕು ಎಂದು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ಜಗಳ ತಾರಕಕ್ಕೇರಿದ್ದು ಪರಸ್ಪರ ಕೈ ಮಿಲಾಯಿಸುವ ಹಂತ ತಲುಪಿದೆ. ಈ ಘರ್ಷಣೆಯಲ್ಲಿ 26 ವರ್ಷದ ಅಮೀರ್ ಚಂದ್ರ ಸಹಾನಿ ಎಂಬ ವ್ಯಕ್ತಿ ಸಾವನ್ನಪ್ಪಿದ್ದು ನಾಲ್ವರು ಗಾಯಗೊಂಡಿದ್ದಾರೆ.

ಇದನ್ನೂ ಓದಿ : ಸಿಲಿಂಡರ್ ಬುಕ್ಕಿಂಗ್‌ಗೆ ಹೊಸ ರೂಲ್ಸ್: ಇಂದಿನಿಂದ ಜಾರಿಯಾಗಲಿರುವ ಈ 5 ನಿಯಮಗಳ ಬಗ್ಗೆ ನಿಮಗೆ ಗೊತ್ತಾ ?

ಈ ನಾಲ್ವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ . ಗಾಯಗೊಂಡವರನ್ನು ವರನ ಕಡೆಯವರಾದ ರಾಜ್‌ಕುಮಾರ್ ಸಹಾನಿ, ಅಭಿಲಾಷ್ ಸಹಾನಿ ಮತ್ತು ಸಾಹಿಲ್ ಯಾದವ್ ಎಂದು ಗುರುತಿಸಲಾಗಿದೆ.
ಅಜಮ್‌ಗಢ ಪೊಲೀಸರು ಈ ವಿಚಾರವಾಗಿ ಮಾತನಾಡಿದ್ದು, ಗಲಾಟೆಯಲ್ಲಿ ಭಾಗಿಯಾಗಿದ್ದ ಕೆಲವು ಜನರನ್ನು ಅವರು ಬಂಧಿಸಿದ್ದಾರೆ. ಮೃತರ ತಂದೆ ಕೂಡ ಎಫ್‌ಐಆರ್ ದಾಖಲಿಸಿದ್ದಾರೆ. ಈ ವಿಷಯದಲ್ಲಿ ತನಿಖೆ ನಡೆಯುತ್ತಿದೆ. ಸದ್ಯ ಘಟನಾ ಸ್ಥಳದಲ್ಲಿ ಪೊಲೀಸ್​ ಪಡೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories