IPL 2026 Play-off : ಆರ್ಸಿಬಿ ಪ್ಲೇ-ಆಫ್ ಕನಸು ಜೀವಂತ! ಟೂರ್ನಿಯಿಂದ ಹೊರಬಿದ್ದ ಮುಂಬೈ, ಲಕ್ನೋ
ಆರ್ಸಿಬಿ ಒಟ್ಟು 11 ಪಂದ್ಯಗಳನ್ನು ಆಡಿದ್ದು, 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಉಳಿದ ಮೂರು ಪಂದ್ಯಗಳನ್ನು ಜಯಿಸಿದ್ರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದು ಖಚಿತ. ಸನ್ರೈಸಸ್ ಹೈದ್ರಾಬಾದ್, ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಆರ್ಸಿಬಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿವೆ.
ಬೆಂಗಳೂರು: ಐಪಿಎಲ್ 2026ರ ಹದಿನೆಂಟನೇ ಆವೃತ್ತಿಯು ಈಗ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬರುತ್ತಿದ್ದಂತೆ, ಪ್ಲೇ-ಆಫ್ (Play-offs) ರೇಸ್ ಜಿದ್ದಾಜಿದ್ದಿನಿಂದ ಕೂಡಿದೆ. ಅಭಿಮಾನಿಗಳ ಕಣ್ಣು ಈಗ ಪಾಯಿಂಟ್ಸ್ ಟೇಬಲ್ ಮೇಲಿದ್ದು, ತಮ್ಮ ನೆಚ್ಚಿನ ತಂಡ ಅಂತಿಮ ನಾಲ್ಕರ ಘಟ್ಟಕ್ಕೆ ಏರುತ್ತಾ ಎಂಬ ಕುತೂಹಲ ಮನೆಮಾಡಿದೆ. ಈ ನಡುವಲ್ಲೇ ಮುಂಬೈಗೆ ಸೋಲಿನ ರುಚಿ ತೋರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಪ್ಲೇ-ಆಫ್ನಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್
ಈ ಬಾರಿಯ ಐಪಿಎಲ್ನಲ್ಲಿ ನಿರಂತರ ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ (MI) ತಂಡ ಅಧಿಕೃತವಾಗಿ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದ ಮೊದಲ ತಂಡ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಆಡಿದ ಆರಂಭಿಕ ಪಂದ್ಯಗಳಲ್ಲಿ ಲಯ ಕಂಡುಕೊಳ್ಳುವಲ್ಲಿ ವಿಫಲವಾದ ಹಾರ್ದಿಕ್ ಪಾಂಡ್ಯ ಪಡೆ, ಗಣಿತದ ಲೆಕ್ಕಾಚಾರದ ಪ್ರಕಾರ ಟೂರ್ನಿಯಿಂದ ಹೊರಬಿದ್ದಿದೆ. ಇದು ಮುಂಬೈ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ. ಮತ್ತೊಂದೆಡೆಯಲ್ಲಿ ಲಕ್ನೋ ಸೂಪರ್ ಜೆಂಟ್ಸ್ ತಂಡ ಕೂಡ ಈ ಬಾರಿಯ ಐಪಿಎಲ್ ಜರ್ನಿಯಿಂದ ಹೊರಬಿದ್ದಿದೆ. ಮುಂದಿನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೂ ಕೂಡ ಪ್ಲೇ ಆಫ್ ಹಂತವನ್ನು ಪ್ರವೇಶಿಸುವುದು ಅಸಾಧ್ಯವಾಗಿದೆ.
ಪ್ಲೇ ಆಫ್ಗೆ ಎಂಟ್ರಿ ಕೊಡುತ್ತಾ ಆರ್ಸಿಬಿ ?
ಬೆಂಗಳೂರು ತಂಡದ ಅಭಿಮಾನಿಗಳಿಗೆ ಸದಾ ಕಾಡುವ ಪ್ರಶ್ನೆ “ಈ ಸಲ ಕಪ್ ನಮ್ದೆ” ಅನ್ನೋದು ಈ ಬಾರಿ ಮತ್ತೆ ಜೀವ ಪಡೆದಿದೆ. ಆರ್ಸಿಬಿ ಈವರೆಗೆ ಆಡಿರುವ ಪಂದ್ಯಗಳಲ್ಲಿ ಮಿಶ್ರ ಫಲಿತಾಂಶ ಕಂಡಿದ್ದರೂ, ಪ್ಲೇ ಆಫ್ ಅವಕಾಶ ಇಂದಿಗೂ ಜೀವಂತವಾಗಿದೆ. ಆರ್ಸಿಬಿ ಅಗ್ರಸ್ಥಾನಿಯಾಗಿ ಪ್ಲೇ ಆಫ್ ಪ್ರವೇಶ ಪಡೆಯಬೇಕಾದ್ರೆ ಮುಂದಿನ ಎಲ್ಲಾ ಪಂದ್ಯಗಳನ್ನು ಕಡ್ಡಾಯವಾಗಿ ಗೆಲ್ಲಲೇ ಬೇಕಾಗಿದೆ.
ಇದುವರೆಗೆ ಆರ್ಸಿಬಿ ಒಟ್ಟು 11 ಪಂದ್ಯಗಳನ್ನು ಆಡಿದ್ದು, 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಉಳಿದ ಮೂರು ಪಂದ್ಯಗಳನ್ನು ಜಯಿಸಿದ್ರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದು ಖಚಿತ. ಸನ್ರೈಸಸ್ ಹೈದ್ರಾಬಾದ್, ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಆರ್ಸಿಬಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿವೆ. ಸದ್ಯ ಉತ್ತಮ ರನ್ರೇಟ್ ಕಾಯ್ದುಕೊಂಡಿರುವ ಆರ್ಸಿಬಿ ಇದೇ ಅಂತರವನ್ನು ಕಾಯ್ದುಕೊಂಡ್ರೆ ಪ್ಲೇ ಆಫ್ ಪ್ರವೇಶಿಸೋದು ಅಸಾಧ್ಯವೇನಲ್ಲ.
ಐಪಿಎಲ್ನಲ್ಲಿ ಯಾವ ತಂಡಗಳಿಗೆ ಅವಕಾಶ ಹೆಚ್ಚಿದೆ?
ಸದ್ಯದ ಪಾಯಿಂಟ್ಸ್ ಟೇಬಲ್ ಗಮನಿಸಿದರೆ, ಅಂಕಪಟ್ಟಿಯಲ್ಲಿ ಆರ್ಸಿಬಿ, ಸನ್ರೈಸಸ್ ಹೈದ್ರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಇದುವರೆಗೆ ಒಟ್ಟು 11 ಪಂದ್ಯಗಳನ್ನು ಆಡಿದ್ದು, 14 ಅಂಕಗಳನ್ನು ಪಡೆದುಕೊಂಡಿವೆ. ಉಳಿದಂತೆ ಪಂಜಾಬ್ ಕಿಂಗ್ಸ್ ತಂಡ 13 ಅಂಕ ಪಡೆದುಕೊಂಡಿದ್ರೆ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡ ತಲಾ 12 ಅಂಕ ಪಡೆದಿವೆ. ಉಳಿದಂತೆ ಕೋಲ್ಕತ್ತಾ ನೈಟ್ ರೈಡರ್ಸ್ 9, ಡೆಲ್ಲಿ ಕ್ಯಾಪಿಟಲ್ಸ್ 8 ಅಂಕ ಪಡೆದಿದ್ದು, ಮುಂದಿನ ಎಲ್ಲಾ ಪಂದ್ಯಗಳು ನಿರ್ಣಾಯಕ ಎನಿಸಿವೆ. ಇನ್ನು ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಈಗಾಗಲೇ ಐಪಿಎಲ್ ಪ್ಲೇ ಆಫ್ ಹಂತದಿಂದ ಹೊರಬಿದ್ದಿವೆ.
Also Read: IPL 2026 : RCB ಪ್ಲೇ-ಆಫ್ ಲೆಕ್ಕಾಚಾರ: ಮುಂಬೈ ವಿರುದ್ಧ ಇಂದು ಗೆದ್ದರೆ ಆರ್ಸಿಬಿ ಫೈನಲ್ ಹಾದಿ ಫಿಕ್ಸ್
ನಾಕೌಟ್ ಮಾದರಿಯಲ್ಲಿ ಮುಂದಿನ ಪಂದ್ಯ
ಮುಂಬೈ ಹಾಗೂ ಲಕ್ನೋ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದರೂ ಕೂಡ, ಪ್ಲೇ ಆಫ್ ಹಾದಿಯಲ್ಲಿರುವ ತಂಡಗಳನ್ನು ಟೂರ್ನಿಯಿಂದ ಹೊರಗೆ ಕಳುಹಿಸುವ ತಾಕತ್ತು ಈ ಎರಡೂ ತಂಡಗಳಿವೆ. ಇವೆ. ಅಗ್ರಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ರೈಸಸ್ ಹೂದ್ರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕೂಡ ಎಚ್ಚರಿಕೆಯಿಂದ ಆಟ ಆಡಲೇ ಬೇಕಾಗಿದೆ. ಉಳಿದಂತೆ ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿಗೆ ಮುಂದಿನ ಪಂದ್ಯಗಳು ನಾಕೌಟ್ ರೀತಿಯಲ್ಲಿವೆ. ಒಂದೇ ಒಂದು ಪಂದ್ಯದಲ್ಲಿ ಸೋಲನ್ನು ಕಂಡ್ರೂ ಕೂಡ ಈ ತಂಡಗಳು ಟೂರ್ನಿಯಿಂದಲೇ ಹೊರಗೆ ಬೀಳಲಿವೆ.
ಐಪಿಎಲ್ 2026ರ ಅಂತ್ಯದ ಪಂದ್ಯಗಳು ಹೈ-ವೋಲ್ಟೇಜ್ ಡ್ರಾಮಾಗೆ ಸಾಕ್ಷಿಯಾಗಲಿವೆ. ಆರ್ಸಿಬಿ ತನ್ನ ಪವಾಡವನ್ನು ಮುಂದುವರಿಸಿ ಪ್ಲೇ-ಆಫ್ ಹಂತಕ್ಕೆ ಜಿಗಿಯುತ್ತಾ ಅಥವಾ ಇನ್ಯಾವುದೇ ಹೊಸ ತಂಡ ಅಚ್ಚರಿ ಮೂಡಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ipl 2026 play off scenarios rcb qualification chance mumbai Lucknow team eliminated



