IPL 2026 : RCB ಪ್ಲೇ-ಆಫ್ ಲೆಕ್ಕಾಚಾರ: ಮುಂಬೈ ವಿರುದ್ಧ ಇಂದು ಗೆದ್ದರೆ ಆರ್‌ಸಿಬಿ ಫೈನಲ್‌ ಹಾದಿ ಫಿಕ್ಸ್

ಐಪಿಎಲ್‌ ಅಂಕಪಟ್ಟಿಯ ಪ್ರಕಾರ, ಆರ್‌ಸಿಬಿ ತಂಡವ ಇದುವರೆಗೆ ಆಡಿದ 10 ಪಂದ್ಯಗಳ ಪೈಕಿ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಒಟ್ಟು 12 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಉಳಿದ ತಂಡಗಳಿಗೆ ಹೋಲಿಸಿದರೆ ಆರ್‌ಸಿಬಿಯ ನೆಟ್ ರನ್ ರೇಟ್ ಅತ್ಯುತ್ತಮವಾಗಿದೆ.

ಬೆಂಗಳೂರು : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇದೀಗ ಐಪಿಎಲ್‌ ಫೈನಲ್‌ ತಲುಪುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಲಕ್ನೋ ತಂಡದ ವಿರುದ್ದ ಸೋಲು ಕಂಡಿದ್ದರೂ ಕೂಡ ಐಪಿಎಲ್‌ ಫೈನಲ್‌ ಆಸೆ ಇಂದಿಗೂ ಜೀವಂತವಾಗಿದೆ.

ಐಪಿಎಲ್‌ ಅಂಕಪಟ್ಟಿಯ ಪ್ರಕಾರ, ಆರ್‌ಸಿಬಿ ತಂಡವ ಇದುವರೆಗೆ ಆಡಿದ 10 ಪಂದ್ಯಗಳ ಪೈಕಿ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಒಟ್ಟು 12 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಉಳಿದ ತಂಡಗಳಿಗೆ ಹೋಲಿಸಿದರೆ ಆರ್‌ಸಿಬಿಯ ನೆಟ್ ರನ್ ರೇಟ್ ಅತ್ಯುತ್ತಮವಾಗಿದೆ.

ಐಪಿಎಲ್‌ ಲೀಗ್ ಹಂತದಲ್ಲಿ ಆರ್‌ಸಿಬಿ ಆಡಲು ಇನ್ನು 4 ಪಂದ್ಯಗಳು ಬಾಕಿ ಇವೆ. ಮುಂದಿನ ಪಂದ್ಯಗಳು ತಂಡದ ಭವಿಷ್ಯವನ್ನು ನಿರ್ಧರಿಸಲಿವೆ. ಉಳಿದ 4 ಪಂದ್ಯಗಳಲ್ಲಿ ಕನಿಷ್ಠ 2 ಪಂದ್ಯಗಳನ್ನು ಗೆದ್ದರೆ ಆರ್‌ಸಿಬಿ 16 ಅಂಕಗಳೊಂದಿಗೆ ಅಧಿಕೃತವಾಗಿ ಪ್ಲೇ-ಆಫ್ ಗೆ ಸ್ಥಾನ ಪಡೆಯಲಿದೆ.

ಒಂದೊಮ್ಮೆ ಆರ್‌ಸಿಬಿ 3 ಪಂದ್ಯಗಳನ್ನು ಗೆದ್ದರೆ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಕ್ಕೇರಿ ನೇರವಾಗಿ ‘ಕ್ವಾಲಿಫೈಯರ್ 1’ ಆಡುವ ಸುವರ್ಣಾವಕಾಶ ಸಿಗಲಿದೆ. ಇದು ಫೈನಲ್ ತಲುಪಲು ತಂಡಕ್ಕೆ ಎರಡು ಚಾನ್ಸ್ ನೀಡುತ್ತದೆ. ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಮತ್ತು ದೇವದತ್ ಪಡಿಕ್ಕಲ್ ಮಿಂಚುತ್ತಿದ್ದಾರೆ.

Also Read: ಐಪಿಎಲ್‌ನಲ್ಲಿ ಹನಿ ಟ್ರ್ಯಾಪ್ ಭೀತಿ: ಬಿಸಿಸಿಐ ಹೊಸ ರೂಲ್ಸ್, ಆಟಗಾರರ ಆಲಿಂಗನಕ್ಕೂ ಬಿತ್ತು ಬ್ರೇಕ್‌

ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಅತಿ ಹೆಚ್ಚು ವಿಕೆಟ್ ಪಡೆದು ಮುಂಚೂಣಿಯಲ್ಲಿದ್ದಾರೆ. ಸದ್ಯದ ಫಾರ್ಮ್ ನೋಡಿದರೆ ಆರ್‌ಸಿಬಿ ಪ್ಲೇ-ಆಫ್ ತಲುಪುವ ಸಾಧ್ಯತೆ ಶೇ. 80ರಷ್ಟಿದೆ. ಒಂದು ವೇಳೆ ಇಂದು ಮುಂಬೈ ವಿರುದ್ಧ ಜಯ ಸಾಧಿಸಿದರೆ ಪ್ಲೇ-ಆಫ್ ಹಾದಿ ಮತ್ತಷ್ಟು ಸುಲಭವಾಗಲಿದೆ. ಮಲೆನಾಡು ಹಾಗೂ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳ “ಈ ಸಲ ಕಪ್ ನಮ್ದೇ” ಎಂಬ ಕನಸು ಈ ಬಾರಿ ನನಸಾಗುವ ಹಾದಿಯಲ್ಲಿದೆ.

royal challengers Bengaluru vs Mumbai Indians ipl 2026 match preview

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories