ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಗೃಹ ಇಲಾಖೆ ವರದಿ: ಬೆಂಗಳೂರಲ್ಲೇ 10 ಸಾವಿರಕ್ಕೂ ಅಧಿಕ ಅಕ್ರಮ ವಲಸಿಗರು
ಬೆಂಗಳೂರು: ಅಕ್ರಮ ವಲಸಿಗರ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ಬೆಚ್ಚಿ ಬೀಳಿಸುವಂತಹ ವರದಿಯನ್ನು ನೀಡಿದೆ. ಗೃಹ ಇಲಾಖೆ ಸಿದ್ದಪಡಿಸಿರುವ ಪಟ್ಟಿಯ ಪ್ರಕಾರ ಕರ್ನಾಟಕದಲ್ಲಿ ಒಟ್ಟು 13,675 ಅಕ್ರಮ ವಲಸಿಗರನ್ನು ಪತ್ತೆ ಹೆಚ್ಚಲಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿಯೇ 10,650 ಮಂದಿ ಅಕ್ರಮ ವಲಸಿಗರು ಇರುವುದು ಬೆಳಕಿಗೆ ಬಂದಿದೆ.
ಬೆಂಗಳೂರು: ಅಕ್ರಮ ವಲಸಿಗರ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ಬೆಚ್ಚಿ ಬೀಳಿಸುವಂತಹ ವರದಿಯನ್ನು ನೀಡಿದೆ. ಗೃಹ ಇಲಾಖೆ ಸಿದ್ದಪಡಿಸಿರುವ ಪಟ್ಟಿಯ ಪ್ರಕಾರ ಕರ್ನಾಟಕದಲ್ಲಿ ಒಟ್ಟು 13,675 ಅಕ್ರಮ ವಲಸಿಗರನ್ನು ಪತ್ತೆ ಹೆಚ್ಚಲಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿಯೇ 10,650 ಮಂದಿ ಅಕ್ರಮ ವಲಸಿಗರು ಇರುವುದು ಬೆಳಕಿಗೆ ಬಂದಿದೆ. ಬೆಂಗಳೂರು ನಂತರದಲ್ಲಿ ದಕ್ಷಿಣ ಕನ್ನಡ, ಬೆಳಗಾವಿ ಹಾಗೂ ಮೈಸೂರಿನಲ್ಲಿಯೂ ದಾಖಲೆಯ ಸಂಖ್ಯೆಯಲ್ಲಿ ಅಕ್ರಮ ವಲಸಿಗರು ಇರುವುದು ದೃಢಪಟ್ಟಿದೆ.
ಸಿಲಿಕಾನ್ ಸಿಟಿಯಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಳವಾಗಿದ್ದು, ಅಕ್ರಮ ಬಾಂಗ್ಲಾ ವಲಸಿಗರು ಮೈಸೂರಿಗೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಗೃಹ ಇಲಾಖೆ ಪಶ್ಚಿಮ ಬಂಗಾಲದಿಂದ ಹೌರಾ ಎಕ್ಸ್ ಪ್ರೆಸ್ ರೈಲಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆಯಲ್ಲಿ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಕರ್ನಾಟಕದಲ್ಲಿ ಸದ್ಯ 13 ಸಾವಿರಕ್ಕೂ ಅಧಿಕ ಅಕ್ರಮ ವಲಸಿಗರುವ ನೆಲೆಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಈ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ರೆ, ಮೈಸೂರು ಎರಡನೇ ಸ್ಥಾನದಲ್ಲಿದೆ.
Also Read: ಕರ್ನಾಟಕದ ಚಿರಾಪುಂಜಿ ಆಗುಂಬೆಯಲ್ಲೂ ಮಳೆಯ ಕೊರತೆ : ಜಲಾಶಯಗಳಲ್ಲೂ ಪಾತಾಳಕ್ಕೆ ಕುಸಿದ ನೀರಿನ ಮಟ್ಟ
ಬೆಂಗಳೂರು ನಗರ 10650, ಮೈಸೂರು 810, ಬೆಳಗಾವಿ 458, ದಕ್ಷಿಣ ಕನ್ನಡ 268, ರಾಮನಗರ 191, ಬಳ್ಳಾರಿ 53, ಚಿಕ್ಕಬಳ್ಳಾಪುರ 38, ಮಂಡ್ಯ 37, ಹುಬ್ಬಳ್ಳಿ/ಧಾರವಾಡ 35, ದಾವಣಗೆರೆ 20, ರಾಯಚೂರು 19, ಕೋಲಾರ 13, ಕೊಡಗು 10, ಕೊಪ್ಪಳ 10, ಕಲಬುರಗಿ 9, ಚಿತ್ರದುರ್ಗ 8, ಹಾಸನ 5 ಹಾಗೂ ಚಾಮರಾಜನಗರದಲ್ಲಿ 3 ಮಂದಿ ಅಕ್ರಮ ವಲಸಿಗರು ಇರುವುದು ದೃಢಪಟ್ಟಿದೆ.
ಉತ್ತರ ಪ್ರದೇಶ, ದೆಹಲಿ. ಪಶ್ಚಿಮ ಬಂಗಾಲ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಆಪರೇಷನ್ ಬಾಂಗ್ಲಾ ಶುರುವಾಗಿದ್ದು, ಇದೀಗ ಕರ್ನಾಟಕದಲ್ಲಿಯೂ ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದ ಗಡಿದಾಟಿಸುವ ಕಾರ್ಯ ಆರಂಭಗೊಂಡಿದೆ. ಕರ್ನಾಟಕದಲ್ಲಿ 13 ಸಾವಿರಕ್ಕೂ ಅಧಿಕ ಅಕ್ರಮ ವಲಸಿಗರುವ ಇರುವುದು ದೃಢಪಟ್ಟಿರುವುದು ಆತಂಕವನ್ನು ಮೂಡಿಸಿದೆ.
Home Department report that shocked Karnataka More than 10,000 illegal immigrants in Bengaluru alone



