ಬಿಗ್ ಬಾಸ್ ಗೆ ಹೋಗ್ತಾರಾ ನ್ಯೂಮಮ್ಮಿ ಮೇಘನಾ ರಾಜ್….! ದೊಡ್ಮನೆ ಆಫರ್ ಬಗ್ಗೆ ಕುಟ್ಟಿಮಾ ಏನಂದ್ರು ಗೊತ್ತಾ..?!

ಸಧ್ಯ ಜ್ಯೂನಿಯರ್ ಚಿರು ಆರೈಕೆಯಲ್ಲಿ ಬ್ಯುಸಿಯಾಗಿರೋ ಸ್ಯಾಂಡಲ್ ವುಡ್ ನ್ಯೂ ಮಮ್ಮಿ ಮೇಘನಾ ರಾಜ್ ಕನ್ನಡ ಕಿರುತೆರೆಯ ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್ ಮನೆ ಸೇರ್ತಾರೆ ಅನ್ನೋ ಮಾತು ಕೇಳಿ ಬರ್ತಿದೆ. ಆದರೆ ಈ ಗಾಸಿಪ್ ಬಗ್ಗೆ ಕುಟ್ಟಿಮಾ ಸ್ಪಷ್ಟನೆ ನೀಡಿದ್ದು, ಆಫರ್ ಬಂದಿದ್ದು ನಿಜ. ಆದರೆ ನಾನು ಈ ಭಾರಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದಿರೋದಾಗಿ ಹೇಳಿದ್ದಾರೆ.

ಅಕ್ಟೋಬರ್ 22 ರಂದು ಗಂಡುಮಗುವಿಗೆ ಜನ್ಮ ನೀಡಿರೋ ಮೇಘನಾ ರಾಜ್, ಚಿರು ನೆನಪಿನ ಜೊತೆ ಮಗನನ್ನು ಸಲಹೋ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೇ ನಿದ್ದೆಯಿಲ್ಲದೇ ನಾಲ್ಕು ತಿಂಗಳು ಕಳೆಯಿತು. ನನ್ನ ಪುಟ್ಟ ಕಂದನಿಗೆ ನಾಲ್ಕು ತಿಂಗಳ ಸಂಭ್ರಮ ಎಂದಿದ್ದರು. ಈ ಮಧ್ಯೆ ಮೇಘನಾ ರಾಜ್ ತಮ್ಮ ಎಲ್ಲ ನೋವುಗಳನ್ನು ಮರೆತು ಗೆದ್ದು ಬರಲು ಬಿಗ್ ಬಾಸ್ ಗೆ ಸ್ಪೆಶಲ್ ಎಂಟ್ರಿ ಕೊಡ್ತಾರೆ ಎಂಬ ಮಾತು ಕೇಳಿ ಬರಲಾರಂಭಿಸಿದ್ದವು.

ಇದಕ್ಕೆ ಪೂರಕ ಎಂಬಂತೆ ಬಿಗ್ ಬಾಸ್ ಆರಂಭವಾಗೋ ಮುನ್ನವೇ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಮೇಘನಾ ರಾಜ್ ರನ್ನು ಸಂಪರ್ಕಿಸಿ ಶೋಗೆ ಆಹ್ವಾನಿಸಿದ್ದರು ಎನ್ನಲಾಗಿದೆ. ಆದರೆ ಈ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ ಮೇಘನಾ ರಾಜ್ ಈ ಸೀಸನ್ ನಲ್ಲಿ ಬಿಗ್ ಬಾಸ್ ಗೆ ಬರಲು ಸಾಧ್ಯವಿಲ್ಲ. ಮುಂದೆ ನೋಡೋಣ ಎಂದಿದ್ದಾರಂತೆ.

ಬಿಗ್ ಬಾಸ್ ಆಫರ್ ಬಗ್ಗೆ ಮೇಘನಾ ರಾಜ್ ತಮ್ಮ ತಂದೆ ಸುಂದರ್ ರಾಜ್, ತಾಯಿ ಪ್ರಮೀಳಾ ಜೋಷಾಯ್ ಹಾಗೂ ಮೈದುನ ಧ್ರುವ್ ಸರ್ಜಾ ಜೊತೆ ಚರ್ಚಿಸಿ ಬಳಿಕ ಹೋಗದಿರುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ನಾಲ್ಕು ತಿಂಗಳ ಮಗುವನ್ನು ಬಿಟ್ಟು ಹೋಗಲು ಮೇಘನಾ ರಾಜ್ ಗೆ ಮನಸ್ಸಿರಲಿಲ್ಲ. ಅಲ್ಲದೇ ಸಧ್ಯದಲ್ಲೇ  ಜ್ಯೂನಿಯರ್ ಚಿರುಗೆ ನಾಮಕರಣ ಕೂಡ ನಡೆಯಲಿರೋದರಿಂದ ಮೇಘನಾ ರಾಜ್ ರಿಯಾಲಿಟಿ ಶೋಗೆ ನೋ ಎಂದಿದ್ದಾರೆ.  

ಅಲ್ಲದೇ ತಂದೆಯನ್ನು ಕಳೆದುಕೊಂಡಿರೋ ಮಗುವನ್ನು ತಂದೆ-ತಾಯಿಯಾಗಿ ಬೆಳೆಸುತ್ತಿರೋ ಮೇಘನಾ ಮಗನನ್ನು ಬಿಟ್ಟು ಮೂರು ತಿಂಗಳು ಬಿಗ್ ಬಾಸ್ ಮನೆಯಲ್ಲಿ ಇರಲು ಸಾಧ್ಯವೇ ಇಲ್ಲ ಎಂಬ ಕಾರಣಕ್ಕೆ  ಆಫರ್ ತಿರಸ್ಕರಿಸಿದ್ದಾರಂತೆ. ಒಟ್ಟಿನಲ್ಲಿ ಒಂಟಿ ಮನೆ ಆಟಕ್ಕೆ ಮೇಘನಾ ಎಂಟ್ರಿ ರೂಮರ್ ಗೆ ಕುಟ್ಟಿಮಾ ಫುಲ್ ಸ್ಟಾಪ್ ಹಾಕಿದ್ದಾರೆ.

Comments are closed.