MTR ಕಂಪೆನಿ ಸೀಲ್ ಡೌನ್ ! ಮಸಾಲ ಪದಾರ್ಥ ತಯಾರಿಸುತ್ತಿದ್ದ 34 ಸಿಬ್ಬಂದಿಗೆ ಕೊರೊನಾ ಸೋಂಕು

2

ಬೆಂಗಳೂರು : ಕೊರೊನಾ ವೈರಸ್ ಸೋಂಕು ಇದೀಗ ಆಹಾರ ಉತ್ಪನ್ನ ತಯಾರಿಕಾ ಕಂಪೆನಿ ಎಂಟಿಆರ್ ಗೆ ಶಾಕ್ ಕೊಟ್ಟಿದೆ. ಎಂಟಿಆರ್ ಕಂಪೆನಿಯ 34 ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಕಂಪೆನಿಯನ್ನೇ ಸೀಲ್ ಡೌನ್ ಮಾಡಲಾಗಿದೆ.

ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ಎಂಟಿಆರ್ ಕಂಪೆನಿಯಲ್ಲಿನ ಸಿಬ್ಬಂದಿಗಳನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆಯಲ್ಲಿ ಮಸಾಲ ಪಾದಾರ್ಥ ತಯಾರಿಸುವ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ 34 ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಎಲ್ಲಾ ಸಿಬ್ಬಂದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊರೊನಾ ಸೋಂಕಿತ ಸಿಬ್ಬಂದಿಗಳ ಸಂಪರ್ಕದಲ್ಲಿರುವ ಇತರ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು, ಕಂಪೆನಿಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಸೀಲ್ ಡೌನ್ ಮಾಡಲಾಗಿದೆ. ಸಿಬ್ಬಂದಿಗಳು ಸಂಪರ್ಕದಲ್ಲಿದ್ದವರನ್ನೂ ಕೂಡ ಪತ್ತೆ ಹಚ್ಚುವ ಕಾರ್ಯವನ್ನು ಆರೋಗ್ಯ ಸಿಬ್ಬಂದಿಗಳು ಮಾಡುತ್ತಿದ್ದಾರೆ.

2 Comments
  1. ರವಿಕುಮಾರ್ says

    ಉಡುಪಿ ಲಾಕ್ ಡೌನ್ ಮಾಡುದೇ ಸೂಕ್ತ,

  2. ರವಿಕುಮಾರ್ says

    ಅಗತ್ಯ ಸೇವೆ ಬಿಟ್ರೆ ಬೇರೆ ಯಾವುದಕ್ಕೂ ಅವಕಾಶ ಕೊಡಬಾರದು, ಇದರಿಂದ ಜನರು ತೊಂದರೆಗೆ, ಒಳಪಡುದರಲ್ಲಿ ಸಂದೇಹವೇ ಇಲ್ಲ, 20/30 ದಿನ ಆಗ್ಲೇಬೇಕು

Leave A Reply

Your email address will not be published.