ಫೆ.12 ಕ್ಕೆ ಎಕ್ಸೈಟಿಂಗ್ ನ್ಯೂಸ್….! ಕುತೂಹಲ ಮೂಡಿಸಿದೆ ನಟಿ ಮೇಘನಾ ರಾಜ್ ಸೋಷಿಯಲ್ ಮೀಡಿಯಾ ಪೋಸ್ಟ್…!!

ಸಾಲು ಸಾಲು ನೋವುಗಳನ್ನು ನುಂಗಿ ಈಗ ಪುಟ್ಟ ಕಂದನ ಜೊತೆ ತಾಯ್ತನ ಖುಷಿಯಲ್ಲಿರೋ ನಟಿ ಮೇಘನಾ ರಾಜ್ ಎಕ್ಸೈಟಿಂಗ್ ನ್ಯೂಸ್ ಒಂದು ಶುಕ್ರವಾರ ಸಿಗಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಜ್ಯೂನಿಯರ್ ಚಿರು ಮೂರು ತಿಂಗಳು ಮುಗಿಸಿ ನಾಲ್ಕನೇ ತಿಂಗಳಿಗೆ ಕಾಲಿರಿಸಿದ್ದು, ನಿಮ್ಮೆಲ್ಲರ ಹಾರೈಕೆಯಿಂದ ಮುದ್ದಾಗಿ ಬೆಳೆಯುತ್ತಿದ್ದಾನೆ ಎಂದು ಮೇಘನಾ ರಾಜ್ ಹೇಳಿದ್ದರು. ಅಲ್ಲದೆ ಸದ್ಯದಲ್ಲೇ ಜ್ಯೂನಿಯರ್ ಚಿರು ನಾಮಕರಣ ನಡೆಯಲಿದೆ ಅನ್ನೋ ಮುನ್ಸೂಚನೆಯನ್ನು ನೀಡಿದ್ದರು.

ಈಗ ಫೆ.12 ಶುಕ್ರವಾರ ಶುಭಸುದ್ದಿ,ಖುಷಿ ಸುದ್ದಿ ಸಿಗಲಿದೆ ಎಂಬರ್ಥದಲ್ಲಿ ಮೇಘನಾ ಇನ್ ಸ್ಟಾಗ್ರಾಂ ಪೋಸ್ಟ್ ಮಾಡಿರೋದರಿಂದ ಬಹುಷಃ ಅವತ್ತು ಚಿರು ಪುತ್ರನ ನಾಮಕರಣ ನಡೆಯಲಿದೆ ಎಂದು ಊಹಿಸಲಾಗುತ್ತಿದೆ. ಜ್ಯೂನಿಯರ್ ಚಿರು ನಾಮಕರಣ ಚಿರು ಆಸೆಯಂತೆ ಅದ್ದೂರಿಯಾಗಿ ನಡೆಯಬೇಕಾಗಿರೋದರಿಂದ ಫೆ.12 ರಂದು ಮೇಘನಾ ಹಾಗೂ ಧ್ರುವ್ ಸರ್ಜಾ ಕುಟುಂಬದವರು ನಾಮಕರಣದ ದಿನಾಂಕ ಘೋಷಿಸಬಹುದು ಎಂದು ಅಂದಾಜಿಸಲಾಗುತ್ತಿದೆ. 

ಮಗು ಸ್ವಲ್ಪ ದೊಡ್ಡದಾದ‌ ಮೇಲೆ ಮೇಘನಾ ಮತ್ತೆ ಚಿತ್ರರಂಗಕ್ಕೆ ಮರಳೋದಾಗಿ ಹೇಳಿಕೊಂಡಿದ್ದು, ಮೇಘನಾ ಹೊಸ ಚಿತ್ರ ಏನಾದ್ರು ಅನೌನ್ಸ್ ಆಗ್ತಿರಬಹುದಾ ಎಂದು ಅಭಿಮಾನಿಗಳು ಗೆಸ್ ಮಾಡ್ತಿದ್ದಾರೆ. ಆದರೆ ಫೆ.12 ರಂದು ಯಾವ ಸುದ್ದಿ ಸಿಗಲಿದೆ ಎಂಬ ಗುಟ್ಟು ಬಿಟ್ಟುಕೊಡಲು ಮೇಘನಾ ಸಿದ್ಧವಾಗಿಲ್ಲ. ಹೀಗಾಗಿ ಬಹುತೇಕ ಜ್ಯೂನಿಯರ್ ಚಿರು ಹೆಸರನ್ನು ಅಂದು ಅನೌನ್ಸ್ ಮಾಡಬಹುದು ಅಂತ ಅಭಿಮಾನಿಗಳು ಹೇಳ್ತಿದ್ದಾರೆ.

ಫೆ.೧೯ ರಂದು ಧ್ರುವ್ ಸರ್ಜಾ ಅಭಿನಯದ ಬಹುನೀರಿಕ್ಷಿತ ಸಿನಿಮಾ ಪೊಗರು ತೆರೆಕಾಣಲಿದ್ದು, ಧ್ರುವ್ ಸರ್ಜಾ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ನಾಮಕರಣ ನಡೆಯೋದು ಡೌಟ್. ನಾಮಕರಣ ದಿನಾಂಕ ನಿಗದಿ ‌ಮಾಡಿ ಘೋಷಿಸಬಹುದು ಎನ್ನಲಾಗಿದೆ. ಒಟ್ಟಿನಲ್ಲಿ ಇಂದಷ್ಟೇ ಇನ್ ಸ್ಟಾಗ್ರಾಂ ನಲ್ಲಿ ಒಂದು ಮಿಲಿಯನ್ ಅಭಿಮಾನಿಗಳನ್ನು ಸಂಪಾದಿಸಿದ ಖುಷಿಯಲ್ಲಿ ಮೇಘನಾ ರಾಜ್ ಹಾಕಿರೋ ಪೋಸ್ಟ್ ಹಲವು ಚರ್ಚೆ ಹುಟ್ಟುಹಾಕಿದೆ.

Comments are closed.