IPL: ಭುವಿ ಯಾರ್ಕರ್‌ಗೆ ಕೊಹ್ಲಿ ಕ್ಲೀನ್‌ಬೌಲ್ಡ್!
ಐಪಿಎಲ್ ಸಮರಕ್ಕೆ ಕಿಂಗ್ ರೆಡಿ
ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2026ಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 28ಕ್ಕೆ ಐಪಿಎಲ್ ಶುರುವಾಗ್ತಿದ್ದು ಎಲ್ಲಾ ತಂಡಗಳು ಭರದ ಸಿದ್ಧತೆ ನಡೆಸಿವೆ. ಈ ಬಾರಿ ಬೆಂಗಳೂರಿನಲ್ಲೇ ಉದ್ಘಾಟನಾ ಪಂದ್ಯ ನಡೀತಿದ್ದು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿದೆ. ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಟ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತರರಾಗಿದ್ದಾರೆ.
ಭರ್ಜರಿಯಾಗಿಯೇ ಅಭ್ಯಾಸ
ಈಗಾಗಲೇ ಕಿಂಗ್ ವಿರಾಟ್ ಕೊಹ್ಲಿ ಬೆಂಗಳೂರಿಗೆ ಆಗಮಿಸಿದ್ದು ಭರ್ಜರಿಯಾಗಿಯೇ ಅಭ್ಯಾಸ ಆರಂಭಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್‌ಸಿಬಿ ತರಬೇತಿ ಅವಧಿಯಲ್ಲಿ ಭಾಗವಹಿಸಿದ್ದು ನೆಟ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ನೆಟ್‌ನಲ್ಲಿ ವೇಗಿ ಭುವನೇಶ್ವರ್ ಕುಮಾರ್ ಬೌಲಿಂಗ್ ಎದುರಿಸಿದ ವಿರಾಟ್ ಕೊಹ್ಲಿ ಬ್ಯಾಟಿಂಗ್ ತಾಲೀಮು ನಡೆಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಕೊಹ್ಲಿ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಭುವನೇಶ್ವರ್ ಎಸೆದ ಯಾರ್ಕರ್‌ಗೆ
ವಿರಾಟ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ಬಿರುಗಾಳಿಯಂತೆ ನುಗ್ಗಿದ ಭುವಿ ಎಸೆತವನ್ನ ಗುರುತಿಸುವಲ್ಲಿ ಕೊಹ್ಲಿ ವಿಫಲರಾಗಿದ್ದಾರೆ. ಕ್ರಿಕೆಟ್‌ನಿಂದ ಸ್ವಲ್ಪ ಅವಧಿಗೆ ರೆಸ್ಟ್‌ನಲ್ಲಿದ್ದ ವಿರಾಟ್ ಬ್ಯಾಟ್ ಐಪಿಎಲ್‌ನಲ್ಲಿ ಅಬ್ಬರಿಸಲು ರೆಡಿಯಾಗುತ್ತಿದೆ. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ
ವಿರಾಟ್ ಕೊಹ್ಲಿ ಕೇವಲ ಏಕದಿನ ಪಂದ್ಯಗಳನ್ನ ಮಾತ್ರ ಆಡ್ತಿದ್ದಾರೆ. ಈಗ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಇರಾದೆಯಲ್ಲಿದ್ದಾರೆ.
ಇತಿಹಾಸ ನಿರ್ಮಿಸುವ ಗುರಿ
2025 – ಕಳೆದ ವರ್ಷ ತಮ್ಮ ಮೊದಲ ಐಪಿಎಲ್ ಪ್ರಶಸ್ತಿ ಗೆದ್ದ ಆರ್‌ಸಿಬಿ ಚಾಂಪಿಯನ್ ಆಗಿತ್ತು. ರಜತ್ ಪಾಟಿದಾರ್ ನೇತೃತ್ವದ ಟೀಂ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ಸೋಲಿಸುವ ಮೂಲಕ ಟ್ರೋಫಿ ಎತ್ತಿ ಹಿಡಿದಿತ್ತು. ದೀರ್ಘ ಕಾಯುವಿಕೆ ಬಳಿಕ ಆರ್‌ಸಿಬಿಗೆ ಕಪ್ ಒಲಿದು ಬಂದಿತ್ತು. ಈ ವರ್ಷವೂ ಕಪ್ ಗೆದ್ದು ಇತಿಹಾಸ ನಿರ್ಮಿಸುವ ಗುರಿ ಹೊಂದಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ.
ಆರ್‌ಸಿಬಿ ಮಾರ್ಚ್ 28ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಐಪಿಎಲ್‌ನ 19 ನೇ ಆವೃತ್ತಿಯನ್ನ
ಶುರು ಮಾಡುತ್ತಿದೆ. ಈ ಋತುವಿನಲ್ಲಿ ಆರ್‌ಸಿಬಿ ತವರು ಕ್ರೀಡಾಂಗಣ ಚಿನ್ನಸ್ವಾಮಿಯಲ್ಲಿ ಐದು ಪಂದ್ಯ ಆಡಲಿದೆ. ರಜತ್ ಪಾಟೀದಾರ್,
ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್ ಮತ್ತು ದೇವದತ್ ಪಡಿಕ್ಕಲ್ ಸೇರಿದಂತೆ ಅನುಭವಿ ಆಟಗಾರರು ಆರ್‌ಸಿಬಿಯಲ್ಲಿದ್ದಾರೆ.
ಕಳೆದ ವರ್ಷಕ್ಕಿಂತಲೂ ಈ ಬಾರಿ ಆರ್‌ಸಿಬಿ ತಂಡ ಬಲಿಷ್ಟವಾಗಿದ್ದು ಗೆಲುವಿನ ಮುಖಾಂತರವೇ ಸೀಸನ್ ಶುರು ಮಾಡುವ ಸಿದ್ಧತೆಯಲ್ಲಿದೆ.
ಇದನ್ನೂ ಓದಿ: https://kannada.newsnext.live/business/sbi-recurring-deposit-scheme-get-5-lakhs-at-once-small-savings-big-profits/#google_vignette
ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ, ವಿಶೇಷವಾಗಿ ಡೆತ್ ಓವರ್‌ಗಳಲ್ಲಿ ಭುವಿ ಮಿಂಚಬೇಕಿದೆ. ಎಕಾನಮಿ 9.29 ಇದ್ದು, ಅವರ ಸರಾಸರಿ 28.41 ರಷ್ಟಿದೆ. ವಿರಾಟ್ ಆರ್‌ಸಿಬಿ ತಂಡದ ಬ್ಯಾಟಿಂಗ್ ಶಕ್ತಿ. ಐಪಿಎಲ್‌ನಲ್ಲಿ ವಿರಾಟ್ ರನ್ ಮಳೆಯನ್ನೇ ಸುರಿಸಿ ಹಲವು ದಾಖಲೆಗಳ ಸರದಾರನಾಗಿದ್ದಾರೆ. ಆಡಿದ 267 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 8,661 ರನ್ ಕಲೆ ಹಾಕಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಬ್ಯಾಟರ್ ಎಂಬ ಹೆಗ್ಗಳಿಕೆ ವಿರಾಟ್ ಹೆಸರಲ್ಲಿದೆ. 9 ಸಾವಿರ ರನ್ ಪೂರೈಸಲು ಕೊಹ್ಲಿಗೆ ಕೇವಲ 339 ರನ್ ಅವಶ್ಯಕತೆ ಇದ್ದು ಅದು ಈ ಆವೃತ್ತಿಯಲ್ಲೇ
ಸಾಧ್ಯವಾದ್ರೂ ಅಚ್ಚರಿಯಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಮತ್ತೊಂದು ಮೈಲುಗಲ್ಲು ಸಾಧಿಸುವ ಹತ್ತಿರದಲ್ಲಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 8 ಶತಕ ಬಾರಿಸಿದ್ದಾರೆ. ಒಟ್ಟಾರೆ ಮಾರ್ಚ್ 28 ಯಾವಾಗ ಬರುತ್ತೆ? ಕೊಹ್ಲಿ ಆಟ ಯಾವಾಗ ನೋಡ್ತೀವಿ ಅಂಥ ಆರ್‌ಸಿಬಿ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.



