ಇಪಿಎಫ್​ಓ ಡಿಜಿಟಲ್​ ಕ್ರಾಂತಿ : ಎಟಿಎಂ, ಯುಪಿಐ ಮೂಲಕವೂ ಮಾಡ್ಬಹುದು ಭವಿಷ್ಯನಿಧಿ ವಿತ್​ಡ್ರಾ

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು ಡಿಜಿಟಲ್​ ಕ್ರಾಂತಿ ಕೈಗೊಂಡಿದೆ. EPFO 3.0 ಭವಿಷ್ಯ ನಿಧಿ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ತರಲಾಗಿದೆ

ಭವಿಷ್ಯ ನಿಧಿ ಹಣವನ್ನು ವಿತ್​ಡ್ರಾ ಮಾಡುವುದು ಇಲ್ಲಿಯವರೆಗೂ ಒಂದು ಸುದೀರ್ಘ ಪ್ರಕ್ರಿಯೆಯಾಗಿತ್ತು. ತುರ್ತು ಸಂದರ್ಭಗಳಲ್ಲಿ ಈ ಹಣವನ್ನು ಪಡೆಯುವುದು ಅಷ್ಟು ಸುಲಭದ ಮಾರ್ಗವಾಗಿರಲಿಲ್ಲ. ಆದರೆ ಇನ್ಮುಂದೆ ಹಾಗಲ್ಲ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು ಡಿಜಿಟಲ್​ ಕ್ರಾಂತಿ ಕೈಗೊಂಡಿದೆ. EPFO 3.0 ಭವಿಷ್ಯ ನಿಧಿ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ತರಲಾಗಿದೆ.

ಮೊದಲೆಲ್ಲ ಪಿಎಫ್​ ಹಣವನ್ನು ಪಡೆಯಬೇಕು ಎಂದರೆ ಅನುಮೋದನೆ ಪಡೆಯಲು ದಿನಗಟ್ಟಲೇ ಕಾಯಬೇಕಾದ ಅನಿವಾರ್ಯಕತೆ ಇತ್ತು. ಆದರೆ ಇದೀಗ ಇಪಿಎಫ್​ಓಗೆ ಚುರುಕು ಮುಟ್ಟಿಸುವ ಉದ್ದೇಶದಿಂದ ಇದನ್ನು ಡಿಜಟಲೀಕರಣಗೊಳಿಸಲಾಗುತ್ತಿದೆ.ಹೊಸ ವ್ಯವಸ್ಥೆಯ ಮೂಲಕ ನೀವು ಇತರೆ ಬ್ಯಾಂಕ್​ ವ್ಯವಹಾರಗಳಂತೆಯೇ ತ್ವರಿತವಾಗಿ ಹಣ ವಿತ್​ಡ್ರಾ ಮಾಡಲು ಸಾಧ್ಯವಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್​ : 2 ಪರ್ಸೆಂಟ್​ ತುಟ್ಟಿ ಭತ್ಯೆ ಹೆಚ್ಚಳಕ್ಕೆ

ಪಿಎಫ್​ ಖಾತೆಯನ್ನು ಯುಪಿಐ ಖಾತೆಗೆ ಲಿಂಕ್​ ಮಾಡುವ ಮೂಲಕ ನೀವು ಯುಪಿಐ ಆ್ಯಪ್​ಗಳಲ್ಲಿ ಕ್ಷಣಾರ್ಧದಲ್ಲಿ ನಿಮ್ಮ ಪಿಎಫ್​ ಹಣವನ್ನು ಬ್ಯಾಂಕ್​ ಖಾತೆಗಳಿಗೆ ವರ್ಗಾಯಿಸಿಕೊಳ್ಳಬಹುದಾಗಿದೆ. ಬ್ಯಾಂಕ್ ಡೆಬಿಟ್ ಕಾರ್ಡ್ಗಳಂತೆಯೇ, ಇನ್ಮುಂದೆ ಇಪಿಎಫ್‌ಒ ವಿಶೇಷ ‘ಪೀಎಫ್ ಎಟಿಎಂ ಕಾರ್ಡ್’ ನೀಡಲು ಯೋಜಿಸುತ್ತಿದೆ. ಇದರ ಮೂಲಕ ನೀವು ನೇರವಾಗಿ ಎಟಿಎಂ ಕೇಂದ್ರಗಳಿಗೆ ಹೋಗಿ ಹಣವನ್ನು ವಿತ್​ ಡ್ರಾ ಮಾಡಿಕೊಳ್ಳಬಹುದಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories