ಫಾಸ್ಟ್ಯಾಗ್ ನಿಯಮದಲ್ಲಿ ಫೆಬ್ರವರಿ 1 ರಿಂದ ದೊಡ್ಡ ಬದಲಾವಣೆ: ಕಾರ್ಗಳಿಗೆ KYV ಪ್ರಕ್ರಿಯೆ ಅಂತ್ಯ
KYV Process end for Cars On New FASTags: ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ವಾಹನ ಸವಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಹೊಸ ಫಾಸ್ಟ್ಯಾಗ್ಗಳ ವಿತರಣೆ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಲು ನಿರ್ಧರಿಸಿದೆ. 2026ರ ಫೆಬ್ರವರಿ 1 ರಿಂದ ಜಾರಿಗೆ ಬರುವಂತೆ, ಕಾರುಗಳಿಗೆ ಹೊಸ ಫಾಸ್ಟ್ಯಾಗ್ ಪಡೆಯುವಾಗ ಅಸ್ತಿತ್ವದಲ್ಲಿದ್ದ ‘Know Your Vehicle’ (KYV) ಪ್ರಕ್ರಿಯೆಯನ್ನು ಕೊನೆಗೊಳಿಸುವುದಾಗಿ ಪ್ರಾಧಿಕಾರ ಘೋಷಿಸಿದೆ.
ಬದಲಾವಣೆಗೆ ಕಾರಣವೇನು? ಈ ಹಿಂದೆ ಹೊಸ ಫಾಸ್ಟ್ಯಾಗ್ ಪಡೆಯುವಾಗ ವಾಹನ ಮಾಲೀಕರು ತಮ್ಮ ವಾಹನದ ಭೌತಿಕ ದೃಢೀಕರಣ ಅಥವಾ KYV ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿತ್ತು. ಇದರಿಂದಾಗಿ ಫಾಸ್ಟ್ಯಾಗ್ ಸಕ್ರಿಯಗೊಳ್ಳಲು ವಿಳಂಬವಾಗುತ್ತಿತ್ತು. ಈಗ ಈ ಹಂತವನ್ನು ತೆಗೆದುಹಾಕುವುದರಿಂದ ಸವಾರರು ಯಾವುದೇ ತೊಂದರೆಯಿಲ್ಲದೆ ತ್ವರಿತವಾಗಿ ಫಾಸ್ಟ್ಯಾಗ್ ಪಡೆಯಲು ಸಾಧ್ಯವಾಗುತ್ತದೆ.
ವರದಿಯ ಪ್ರಮುಖ ಅಂಶಗಳು:
ತ್ವರಿತ ವಿತರಣೆ: KYV ಪ್ರಕ್ರಿಯೆ ರದ್ದತಿಯಿಂದಾಗಿ ಹೊಸ ಫಾಸ್ಟ್ಯಾಗ್ಗಳನ್ನು ನೀಡುವ ಸಮಯ ಗಣನೀಯವಾಗಿ ಉಳಿತಾಯವಾಗಲಿದೆ.
ಫೆಬ್ರವರಿ 1 ರಿಂದ ಜಾರಿ: ಈ ಹೊಸ ನಿಯಮವು ಫೆಬ್ರವರಿ 1, 2026 ರಿಂದ ಖರೀದಿಸುವ ಎಲ್ಲಾ ಹೊಸ ಫಾಸ್ಟ್ಯಾಗ್ಗಳಿಗೆ ಅನ್ವಯಿಸುತ್ತದೆ.
ಕೇಂದ್ರೀಕೃತ ವ್ಯವಸ್ಥೆ: ವಾಹನಗಳ ಮಾಹಿತಿಯನ್ನು ಈಗ ನೇರವಾಗಿ ಸರ್ಕಾರದ ‘ವಾಹನ್’ (Vahan) ಪೋರ್ಟಲ್ನಿಂದಲೇ ಪಡೆದುಕೊಳ್ಳುವ ತಂತ್ರಜ್ಞಾನವನ್ನು ಎನ್ಎಚ್ಎಐ ಅಳವಡಿಸಿಕೊಂಡಿರುವುದರಿಂದ ಭೌತಿಕ ಪರಿಶೀಲನೆಯ ಅಗತ್ಯವಿರುವುದಿಲ್ಲ.
ಇದನ್ನೂ ಓದಿ: 10,000ಕ್ಕೆ ಬೆಸ್ಟ್ 5G ಸ್ಮಾರ್ಟ್ಫೋನ್ಗಳು: ಸ್ಯಾಮ್ಸಂಗ್, ರೆಡ್ಮಿ ಮತ್ತು ಪೊಕೊ ಯಾವುದು ಬೆಸ್ಟ್?
ಗಮನಿಸಿ: ಈ ಬದಲಾವಣೆಯು ಕೇವಲ ಕಾರ್ಗಳಿಗೆ ಮಾತ್ರ ಸೀಮಿತವಾಗಿದ್ದು, ವಾಣಿಜ್ಯ ವಾಹನಗಳ ನಿಯಮಗಳಲ್ಲಿನ ಬದಲಾವಣೆಗಳ ಬಗ್ಗೆ ಪ್ರಾಧಿಕಾರ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ. ಹಳೆಯ ಫಾಸ್ಟ್ಯಾಗ್ ಹೊಂದಿರುವವರು ಮತ್ತು ಈಗಾಗಲೇ ಕೆವೈಸಿ (KYC) ಪೂರ್ಣಗೊಳಿಸಿದವರಿಗೆ ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ.
ಟೋಲ್ ಪ್ಲಾಜಾಗಳಲ್ಲಿ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಡಿಜಿಟಲ್ ಪಾವತಿಯನ್ನು ಇನ್ನಷ್ಟು ಪ್ರೋತ್ಸಾಹಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎನ್ಎಚ್ಎಐ ತಿಳಿಸಿದೆ.



