ಗುಡ್ ಫ್ರೈಡೇ, ಅಂಬೇಡ್ಕರ್ ಜಯಂತಿ, ಬಸವ ಜಯಂತಿ ಸೇರಿದಂತೆ ಏಪ್ರಿಲ್‌ನಲ್ಲಿ ಬರೋಬ್ಬರಿ 11 ದಿನ ಬ್ಯಾಂಕ್ ರಜೆ !
Bank Holiday April 2026: ಗುಡ್ ಫ್ರೈಡೇ, ಅಂಬೇಡ್ಕರ್ ಜಯಂತಿ, ಎರಡನೇ ಶನಿವಾರ, ನಾಲ್ಕನೇ ಶನಿವಾರ ಸೇರಿದಂತೆ ಒಟ್ಟು ಎಷ್ಟು ದಿನಗಳು ಬ್ಯಾಂಕ್ ಮುಚ್ಚಿರುತ್ತದೆ?
Bank Holiday April 2026: ಮಾರ್ಚ್ ತಿಂಗಳು ಇನ್ನೇನು ಮುಗಿಯಲಿದೆ. ಏಪ್ರಿಲ್ 2026 ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಲಿದೆ. ಏಪ್ರಿಲ್ ತಿಂಗಳು ಸಾಲು ಸಾಲು ರಜೆಗಳನ್ನು ತೆಗೆದುಕೊಂಡು ಬರುತ್ತಿದೆ. ಇದರ ಪರಿಣಾಮ ಸಾಮಾನ್ಯ ಜನರಿಂದ ಹಿಡಿದು ಎಲ್ಲ ವರ್ಗದ ಜನರಿಗೂ ಅತಿ ಅವಶ್ಯಕವೆನಿಸಿರುವ ಬ್ಯಾಂಕ್‌ಗಳು ಮುಚ್ಚಲಿವೆ. ಏಪ್ರಿಲ್‌ನಲ್ಲಿ ದೇಶಾದ್ಯಂತ ಆಚರಿಸುವ ಹಲವಾರು ಪ್ರಮುಖ ಹಬ್ಬಗಳು ಬ್ಯಾಂಕ್‌ನ ಕಾರ್ಯದ ಮೇಲೆ ಪರಿಣಾಮ ಬೀರಲಿದೆ. ಏಪ್ರಿಲ್ ನಲ್ಲಿ ಮಹತ್ವದ ವ್ಯಾಪಾರ, ವ್ಯವಹಾರದ ಯೋಜನೆ ಹಾಕಿಕೊಂಡವರಿಗೆ ಬ್ಯಾಂಕ್ ರಜಾ ದಿನಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ. ಆರ್‌ಬಿಐ ಬಿಡುಗಡೆ ಮಾಡಿರುವ ಏಪ್ರಿಲ್ ಬ್ಯಾಂಕ್ ರಜೆ ಪಟ್ಟಿ ಅಗತ್ಯವಾಗಿ ಪರಿಶೀಲಿಸಿ. ಗುಡ್ ಫ್ರೈಡೇ, ಅಂಬೇಡ್ಕರ್ ಜಯಂತಿ, ಎರಡನೇ ಶನಿವಾರ, ನಾಲ್ಕನೇ ಶನಿವಾರ ಸೇರಿದಂತೆ ಒಟ್ಟು ಎಷ್ಟು ದಿನಗಳು ಬ್ಯಾಂಕ್ ಮುಚ್ಚಿರುತ್ತದೆ ಎಂದು ತಿಳಿಯೋಣ.
ದೇಶಾದ್ಯಂತ ಬ್ಯಾಂಕ್ ರಜಾದಿನಗಳ ಪಟ್ಟಿ (ಏಪ್ರಿಲ್ 2026)
ಏಪ್ರಿಲ್ 1– ಬುಧವಾರ – ಬ್ಯಾಂಕ್ ವರ್ಷಾಂತ್ಯ – ದೇಶದ ಎಲ್ಲಾ ಬ್ಯಾಂಕ್‌ಗಳು ಮುಚ್ಚಿರುತ್ತವೆ.
ಏಪ್ರಿಲ್ 2– ಗುರುವಾರ– ಪವಿತ್ರ ಗುರುವಾರ – ಕೇರಳ, ಪುದುಚೇರಿ
ಏಪ್ರಿಲ್ 3– ಶುಕ್ರವಾರ – ಗುಡ್ ಫ್ರೈಡೇ – ದೇಶದ ಬಹುತೇಕ ಎಲ್ಲಾ ಬ್ಯಾಂಕ್ ಬಂದ್
ಏಪ್ರಿಲ್ 5 – ಭಾಸನುವಾರ – ಬಾಬು ಜಗಜೀವನ್ ರಾಮ್ ಜಯಂತಿ – ತೆಲಂಗಾಣ, ಆಂಧ್ರ ಪ್ರದೇಶ
ಏಪ್ರಿಲ್ 14 – ಮಂಗಳವಾರ – ಅಂಬೇಡ್ಕರ್ ಜಯಂತಿ/ ತಮಿಳ್ ಹೊಸ ವರ್ಷ / ಬೈಸಾಕಿ / ವಿಷು – ದೇಶದ ಬಹುತೇಕ ಬ್ಯಾಂಕ್‌ಗಳು ಮುಚ್ಚಿರುತ್ತವೆ.
ಏಪ್ರಿಲ್ 15 – ಬುಧವಾರ – ಬಂಗಾಲಿ ಹೊಸ ವರ್ಷ/ ಭೋಗ ಬಿಹು / ಹಿಮಾಚಲ್ ಡೇ – ಪಶ್ಚಿಮ ಬಂಗಾಳ, ಆಸ್ಸಾಂ, ಹಿಮಾಚಲ ಪ್ರದೇಶ.
ಏಪ್ರಿಲ್ 20 – ಸೋಮವಾರ – ಬಸವ ಜಯಂತಿ/ ಅಕ್ಷಯ ತೃತೀಯ – ಕರ್ನಾಟಕ, ಮಹಾರಾಷ್ಟ್ರ.
ಏಪ್ರಿಲ್ 21– ಮಂಗಳವಾರ – ಗರಿಯಾ ಪೂಜ – ತ್ರಿಪುರ
ಇದನ್ನೂ ಓದಿ: ಗುಡ್ ನ್ಯೂಸ್: ನಾಳೆ, ನಾಡಿದ್ದು ರಾಜ್ಯದ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳು ಓಪನ್! ಕಂದಾಯ ಇಲಾಖೆ ಮಹತ್ವದ ಆದೇಶ
ಕರ್ನಾಟಕದಲ್ಲಿ ಎಷ್ಟು ದಿನ ಬ್ಯಾಂಕ್ ರಜೆ?
ಕರ್ನಾಟಕದಲ್ಲಿ ಕೆಲವು ಹಬ್ಬಗಳನ್ನು ಆಚರಿಸದೇ ಇರುವುದರಿಂದ 2 ಶನಿವಾರ ಮತ್ತು 4 ಭಾನುವಾರ ಸೇರಿ ಒಟ್ಟು 10 ದಿನ ಬ್ಯಾಂಕ್ ರಜೆ ಇರಲಿದೆ.
ಏಪ್ರಿಲ್ 1– ಬುಧವಾರ – ಬ್ಯಾಂಕ್ ವರ್ಷಾಂತ್ಯ
ಏಪ್ರಿಲ್ 3– ಶುಕ್ರವಾರ – ಗುಡ್ ಫ್ರೈಡೇ
ಏಪ್ರಿಲ್ 14 – ಮಂಗಳವಾರ – ಅಂಬೇಡ್ಕರ್ ಜಯಂತಿ
ಏಪ್ರಿಲ್ 20 ಸೋಮವಾರ – ಬಸವ ಜಯಂತಿ/ ಅಕ್ಷಯ ತೃತೀಯ
ಗಮನಿಸಿ
ಏಪ್ರಿಲ್ 2026 ಬಹಳಷ್ಟು ಬ್ಯಾಂಕ್ ರಜೆಗಳನ್ನು ಹೊಂದಿದ್ದರೂ ಯುಪಿಐ, ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳು ರಜಾ ದಿನಗಳಲ್ಲೂ ಕಾರ್ಯನಿರ್ವಹಿಸುವುದರಿಂದ ಅಗತ್ಯ ಹಣಕಾಸಿನ ವ್ಯವಹಾರಗಳನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ.



