ನಟ ಅಜಯ್ ರಾವ್ – ಸ್ವಪ್ನಾ ದಾಂಪತ್ಯದಲ್ಲಿ ಬಿರುಗಾಳಿ : ವಿಚ್ಚೇಧನಕ್ಕೆ ಅರ್ಜಿ

Ajay Rao Swapna Divorce : ಕನ್ನಡ ಚಿತ್ರರಂಗದ ಖ್ಯಾತ ನಟ ಅಜಯ್ ರಾವ್ ಹಾಗೂ ಸಪ್ನಾ ದಾಂಪತ್ಯದಲ್ಲಿ ಬಿರುಗಾಳಿ ಬೀಸಿದೆ. ಅಜಯ್ ರಾವ್ ಪತ್ನಿ ಸಪ್ನಾ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಅಜಯ್ ರಾವ್ ಹಾಗೂ ಸ್ವಪ್ನಾ ಇಬ್ಬರೂ ಕೂಡ ಪರಸ್ಪರ ಒಪ್ಪಿಗೆಯಿಂದಲೇ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಸ್ವಪ್ನಾ ಅವರು ಕೌಟುಂಬಿಕ ದೌರ್ಜನ್ಯದ ಆರೋಪದ ಮೇರೆಗೆ ನ್ಯಾಯಾಲಯದ ಮೊರೆ ಹೋಗಿದ್ದರು.
ಇದೀಗ ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕೆ ಈ ಹಿಂದೆ ಅರ್ಜಿ ಸಲ್ಲಿಸಿದ್ದ ಈ ದಂಪತಿ, ಈಗ ಕಾನೂನು ಸಮರಕ್ಕೆ ಇಳಿದಿದ್ದಾರೆ. ಸದ್ಯ ಅಜಯ್ ರಾವ್ ದಾಂಪತ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಚರ್ಚೆ ನಡೆಯುತ್ತಿದೆ.
ನಟ ಅಜಯ್ ರಾವ್ – ಸ್ವಪ್ನಾ ವಿಚ್ಛೇದನಕ್ಕೆ ಕಾರಣವೇನು?
ಅಜಯ್ ರಾವ್ ಮತ್ತು ಸ್ವಪ್ನಾ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು ನಿಜ. ಆದರೆ, ಸ್ವಪ್ನಾ ಅವರು ಅಜಯ್ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪದಡಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ.
ಈ ಹಿಂದೆ, ಈ ದಂಪತಿ ವಿಚ್ಛೇದನದ ಕುರಿತು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಸ್ವಪ್ನಾ ಅವರು ದೂರು ದಾಖಲಿಸಿದ ನಂತರ ಈ ವಿಷಯ ಸಾರ್ವಜನಿಕವಾಗಿ ಬಯಲಾಗಿದೆ.
ನಟ ಆಜಯ್ ರಾವ್ ಹೇಳೋದೇನು ?
ನಟ ಅಜಯ್ ರಾವ್ ಅವರ ಆಪ್ತ ಮೂಲಗಳ ಪ್ರಕಾರ, ಈ ಆರೋಪ ಸುಳ್ಳು ಎನ್ನುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಲು ಅಜಯ್ ರಾವ್ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.
ಏನಿದು ಪ್ರಕರಣ ?
ನಟ ಅಜಯ್ ರಾವ್ ಮತ್ತು ಸ್ವಪ್ನಾ 2014ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಒಂದು ಮಗಳಿದ್ದಾಳೆ. ಹಲವು ವರ್ಷಗಳಿಂದ ಸಾಮರಸ್ಯದಿಂದಿದ್ದ ಈ ಜೋಡಿ, ಇತ್ತೀಚೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿತ್ತು.
ಇದರ ಬೆನ್ನಲ್ಲೇ, ಸ್ವಪ್ನಾ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿರುವುದು ಕುತೂಹಲ ಮೂಡಿಸಿದೆ. ಪ್ರಸ್ತುತ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ : ನಟ ದರ್ಶನ್ 20 ಕೋಟಿ ಹಣ ಕೊಟ್ಟಿಲ್ಲ, ಅದೆಲ್ಲಾ ಸುಳ್ಳು ಎಂದ ರೇಣುಕಾಸ್ವಾಮಿ ಕುಟುಂಬ
ಅಜಯ್ ರಾವ್ ಕನ್ನಡ ಚಿತ್ರರಂಗದ ಜನಪ್ರಿಯ ನಟ. 2003ರಲ್ಲಿ ತೆರೆಕಂಡ ‘ಎಕ್ಸ್ಕ್ಯೂಸ್ ಮೀ’ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದಕ್ಕೂ ಮೊದಲು ಸುದೀಪ್ ನಟನೆಯ ‘ಕಿಚ್ಚ’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಅವರು ಇದುವರೆಗೆ ಸುಮಾರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ಪ್ರಮುಖ ಸಿನಿಮಾಗಳು ಇಲ್ಲಿವೆ:
ಎಕ್ಸ್ಕ್ಯೂಸ್ ಮೀ (2003), ತಾಜ್ ಮಹಲ್ (2008), ಪ್ರೇಮ್ ಕಹಾನಿ (2009, ಕೃಷ್ಣನ್ ಲವ್ ಸ್ಟೋರಿ (2010), ಕೃಷ್ಣನ್ ಮ್ಯಾರೇಜ್ ಸ್ಟೋರಿ (2011), ಕೃಷ್ಣ-ಲೀಲಾ (2015), ಜಾನ್ ಜಾನಿ ಜನಾರ್ದನ (2016)
ತಾಯಿಗೆ ತಕ್ಕ ಮಗ (2018), ಲವ್ ಯು ರಚ್ಚು (2021), ಶೋಕಿವಾಲ (2022, ಯುದ್ಧಕಾಂಡ 2 (2025) ಅಜಯ್ ರಾವ್ ಅವರು ಕೇವಲ ನಟನಾಗಿ ಮಾತ್ರವಲ್ಲದೆ ಕೆಲವು ಚಿತ್ರಗಳಿಗೆ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ : ಖ್ಯಾತ ನಿರೂಪಕಿ ಅನುಶ್ರೀಗೆ ಮದುವೆ ಫಿಕ್ಸ್
ಅವರ ‘ಕೃಷ್ಣ ಲೀಲಾ’ ಚಿತ್ರವು ತಮ್ಮದೇ ನಿರ್ಮಾಣ ಸಂಸ್ಥೆಯಡಿ ನಿರ್ಮಿಸಿದ ಮೊದಲ ಚಿತ್ರವಾಗಿದೆ. ಇತ್ತೀಚೆಗೆ ಅವರ ‘ಯುದ್ಧಕಾಂಡ 2’ ಚಿತ್ರವು ಕೂಡ ಪ್ರೇಕ್ಷಕರ ಗಮನ ಸೆಳೆದಿತ್ತು.
Kannada Famour Actor Ajay Rao and wife Swapna File Divorce Kannada news



