Bigg Boss 12: ದುರಹಂಕಾರಿ ಪಟ್ಟ ಹೊತ್ತ ಅಶ್ವಿನಿ ಗೌಡ; ಜೈಲಿನಲ್ಲೂ ತನ್ನದೇ ಹಠ

ಬಿಗ್ ಬಾಸ್ ಕನ್ನಡ ಸೀಸನ್ 12 (BBK 12) ಸ್ಪರ್ಧಿ ಅಶ್ವಿನಿ ಗೌಡ ದುರಹಂಕಾರಿ ಎಂಬ ಹಣೆಪಟ್ಟಿ ಹೊತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ಅವರ ಬಗ್ಗೆ ಕಾಮೆಂಟ್‌ ಮಾಡಿದ್ದಾರೆ.


ನಟಿ ಮತ್ತು ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ ಅವರು ಪ್ರಸ್ತುತ ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋನ ಸ್ಪರ್ಧಿಯಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಅವರ ಮಾತು ಮತ್ತು ಆಟದ ಶೈಲಿ ವೀಕ್ಷಕರಲ್ಲಿ ಭಿನ್ನಾಭಿಪ್ರಾಯ ಮೂಡಿಸಿದೆ. ಕೆಲವು ಹೇಳಿಕೆಗಳು ಮತ್ತು ಆಟದ ವಿಧಾನವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಗೌರವಯುತ ಅಥವಾ ದುರಹಂಕಾರದಿಂದ ಕೂಡಿದೆ ಎಂದು ತೀವ್ರವಾಗಿ ಚರ್ಚಿಸಲಾಗಿದೆ. ಈಗಾಗಲೇ ಹಿಂದಿನ ಪಂಚಾಯಿತಿಯಲ್ಲಿ
ಸಹ ಸ್ಪರ್ಧಿ ರಾಕ್ಷಿತಾ ಶೆಟ್ಟಿ ಅವರೊಂದಿಗಿನ ಅವರ ಭಿನ್ನಾಭಿಪ್ರಾಯಗಳು ಮತ್ತು ತೀಕ್ಷ್ಣವಾದ ವಾದಗಳು ಪ್ರಮುಖ ಸುದ್ದಿಯಾಗಿವೆ.

ಅಶ್ವಿನಿಯವರ ಪ್ರತಿಕ್ರಿಯೆ ಬಗ್ಗೆ ಅಸಮಾಧಾನ

ರಕ್ಷಿತಾ ಅವರ ಜೊತೆ ಆದ ವಾದಗಳಲ್ಲಿ ಅಶ್ವಿನಿ ನೀಡಿದ ಕೆಲವು ಪ್ರತಿಕ್ರಿಯೆಗಳು ವೀಕ್ಷಕರ ತೀವ್ರ ಟೀಕೆಗೆ ಗುರಿಯಾಗಿವೆ. ರಾಜಕೀಯ ಮತ್ತು ಆರ್ಥಿಕವಾಗಿ ಸದೃಢವಾದ ಕುಟುಂಬದ ಹಿನ್ನೆಲೆಯುಳ್ಳವರಾದ ಅಶ್ವಿನಿ ಅವರು ಈ ಕುರಿತು ನೀಡಿದ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ. ಈ ಹೇಳಿಕೆಗಳನ್ನು ಕೆಲವರು ಅಹಂಕಾರದ ಪ್ರದರ್ಶನ ಎಂದು ಪರಿಗಣಿಸಿದ್ದಾರೆ.


ಜೈಲಿನಲ್ಲಿ ನಿಯಮ ಉಲ್ಲಂಘನೆ: ಕಳಪೆ ಪಟ್ಟ ಪಡೆದು ಬಿಗ್ ಬಾಸ್ ಜೈಲಿಗೆ ಹೋದವರು ಅಡುಗೆಗೆ ಸಹಾಯ ಮಾಡಬೇಕು. ಆದರೆ ಅಡುಗೆಗೆ ಸಹಾಯ ಮಾಡಲು ಇವರು ನಿರಾಕರಣೆ ಮಾಡಿದ್ದಾರೆ.
ಈ ವಾರ ಕಳಪೆ ಪ್ರದರ್ಶನದಿಂದಾಗಿ ಅಶ್ವಿನಿ ಗೌಡ ಅವರು ಜೈಲು ಪಾಲಾಗಿದ್ದರು. ಜೈಲಿನಲ್ಲಿರುವ ಸ್ಪರ್ಧಿಗಳು ಮನೆಯ ಅಡುಗೆ ಕೆಲಸಗಳಿಗೆ ಸಹಾಯ ಮಾಡುವುದು ನಿಯಮ. ಆದರೆ,
ಅಡುಗೆ ಕೆಲಸಕ್ಕೆ ನಿರಾಕರಿಸಿದ್ದಾರೆ. ಅಶ್ವಿನಿ ಗೌಡ ಅವರು ಈ ಮೂಲಭೂತ ನಿಯಮವನ್ನು ನಿರಾಕರಿಸಿರುವುದು ಸ್ಪರ್ಧಿಗಳಿಗೆ ಅಸಮಂಜಸ ಎನಿಸಿದೆ.


ಆಹಾರ ನಿರಾಕರಣೆ: ನಂತರ, ಅವರಿಗೆ ನೀಡಿದ ರಾಗಿ ಗಂಜಿಯನ್ನು ಕುಡಿಯಲು ಸಹ ಅವರು ನಿರಾಕರಿಸಿದ್ದರು.
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರ ಶ್ರೀಮಂತ ಹಿನ್ನೆಲೆ ಮತ್ತು ಕೆಲ ವರ್ತನೆಗಳಿಂದಾಗಿ ಅವರಿಗೆ ‘ದುರಹಂಕಾರದ ಹಣೆಪಟ್ಟಿ’ ಅಂಟಿಕೊಂಡಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories