ಹುಬ್ಬಳ್ಳಿಯಲ್ಲಿ ಕಿಚ್ಚನ ಹವಾ: 20ಕ್ಕೆ ಮಾರ್ಕ್ ಚಿತ್ರದ ಅದ್ಧೂರಿ ಪ್ರೀ-ರಿಲೀಸ್

​ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ವರೆಗೆ ತನ್ನದೇ ಆದ ಛಾಪು ಮೂಡಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಚಿತ್ರ ‘ಮಾರ್ಕ್’ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳ ಮೂಲಕ ಸಖತ್ ಸೌಂಡ್ ಮಾಡುತ್ತಿರುವ ಚಿತ್ರತಂಡ, ಇದೀಗ ಉತ್ತರ ಕರ್ನಾಟಕದ ಮಂದಿಯನ್ನು ಭೇಟಿಯಾಗಲು ಸಜ್ಜಾಗಿದೆ.

‘ಮ್ಯಾಕ್ಸ್’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ವಿಜಯ್ ಕಾರ್ತಿಕೇಯ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಚಿತ್ರದಲ್ಲಿ ದೀಪ್ಷಿಕಾ, ನವೀನ್ ಚಂದ್ರ, ರೋಶಿನಿ ಪ್ರಕಾಶ್, ಯೋಗಿ ಬಾಬು, ಶೈನ್ ಟಾಮ್ ಚಾಕೋ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ಕಲಾವಿದರು ನಟಿಸಿದ್ದಾರೆ. ಮ್ಯಾಕ್ಸ್’ ಸುದೀಪ್ ಅವರ ವೃತ್ತಿಜೀವನದ 46ನೇ ಸಿನಿಮಾ. ಸುಮಾರು ಎರಡುವರೆ ವರ್ಷಗಳ ನಂತರ ಸುದೀಪ್ ಅವರು ತೆರೆಮೇಲೆ ಸೋಲೋ ಹೀರೋ ಆಗಿ ಕಾಣಿಸಿಕೊಂಡ ಚಿತ್ರ ಇದಾಗಿತ್ತು. ಈಗ ಮತ್ತೆ ಮಾರ್ಕ್‌ ಚಿತ್ರದ ಮೂಲಕ ಸಿನಿ ಲೋಕದಲ್ಲಿ ಮತ್ತೊಂದು ಹೆಜ್ಜೆ ಇಡುತ್ತಿದ್ದಾರೆ

‘ಸತ್ಯ ಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್’ ಜಂಟಿಯಾಗಿ ಈ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಿಸಿವೆ.
​ಬಿಡುಗಡೆ ದಿನಾಂಕ: ಇದೇ ತಿಂಗಳ 25ರಂದು ‘ಮಾರ್ಕ್’ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ. ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯಲಿರುವ ಈ ಪ್ರೀ-ರಿಲೀಸ್ ಜಾತ್ರೆಗೆ ಕಿಚ್ಚನ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಗಂಡುಮೆಟ್ಟಿದ ನಾಡಿನಲ್ಲಿ ಮಾರ್ಕ್ ಸಿನಿಮಾದ ಅಬ್ಬರ ಶುರುವಾಗಲಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ರವಿಚಂದ್ರನ್, ತಮ್ಮ ಫಸ್ಟ್ ಲವ್ ಸ್ಟೋರಿ ಬಗ್ಗೆ ಟಾಕ್!

ಕಿಚ್ಚನ ಅಭಿಮಾನಿಗಳು ದಿನಗಣನೆ ಮಾಡುತ್ತಿದ್ದಾರೆ. ಈಗಾಗಲೇ ಟ್ರೇಲರ್‌ ಬಿಡುಗಡೆಯಾಗಿದ್ದು ಸಾಕಷ್ಟು ಜನ ತಮ್ಮ ಕುತೂಹಲ ಹೆಚ್ಚಿಸಿಕೊಂಡಿದ್ದಾರೆ. ಮಸ್ತ್‌ ಮಲೈಕಾ ಹಾಡು ತುಂಬಾ ಹಿಟ್‌ ಆಗಿದ್ದು, ಕಿಚ್ಚ ಸುದೀಪ್‌ ಅವರ ಅದ್ಭುತ ನೃತ್ಯಕ್ಕೆ ಫಿದಾ ಆದವರಿದ್ದಾರೆ. ಕಿಚ್ಚನ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟವಾಗಬಹುದು ಎಂಬ ನಿರೀಕ್ಷೆ ಇದೆ. ಆದರೆ ಕಾದು ನೋಡಬೇಕಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories