50ರ ಆಸುಪಾಸಿನಲ್ಲೂ ಬಳಕುವ ಮೈಮಾಟ : ಮಲ್ಲಿಕಾ ಶೆರಾವತ್ ದೇಹ ಸೌಂದರ್ಯದ ಹಿಂದಿನ ಗುಟ್ಟು ರಟ್ಟು
Mallika Sherawat: ನಟಿ ಮಲ್ಲಿಕಾ ಶೆರಾವತ್.. ಒಂದು ಕಾಲದಲ್ಲಿ ತನ್ನ ಮಾದಕ ನೃತ್ಯ ಹಾಗೂ ನಟನೆಯ ಮೂಲಕ ಪಡ್ಡೆ ಹುಡುಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದ ಬಾಲಿವುಡ್ ನಟಿ. 49ರ ಪ್ರಾಯದಲ್ಲಿಯೂ ನಟಿ ಮಲ್ಲಿಕಾ ಶೆರಾವತ್ ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿರುವ ಬಗೆ ನೋಡಿದರೆ ಖಂಡಿತ ಆಶ್ಚರ್ಯ ಎನಿಸುತ್ತೆ.
ಈ ರೀತಿಯ ದೇಹವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಸ್ವತಃ ನಟಿ ಮಲ್ಲಿಕಾ ಶೆರಾವತ್ ಉತ್ತರಿಸಿದ್ದಾರೆ. ನಿಮ್ಮ ನೆಚ್ಚಿನ ತಂಪು ಪಾನೀಯ, ಸಿಹಿ ತಿಂಡಿ ಸೇರಿದಂತೆ ರುಚಿಕರ ಆಹಾರಗಳನ್ನು ತ್ಯಜಿಸಿದರೆ ನೀವೂ ನನ್ನಂತಾಗುತ್ತೀರಿ ಎಂದು ನಗುತ್ತಾರೆ ನಟಿ ಮಲ್ಲಿಕಾ ಶೆರಾವತ್..!
ಕಳೆದ ಅನೇಕ ವರ್ಷಗಳಿಂದ ಸಸ್ಯಾಹಾರಿಯಾಗಿರುವ ನಟಿ ಮಲ್ಲಿಕಾ ಶೆರಾವತ್ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಅನೇಕ ಮಹಿಳೆಯರಿಗೆ ಸ್ಪೂರ್ತಿ ಎನಿಸಿದ್ದಾರೆ. ಮನಸ್ಸು ಮಾಡಿದರೆ ಯಾವುದೇ ವಯಸ್ಸಿನಲ್ಲಿಯೂ ನೀವು ಬಳಕುವ ಮೈಮಾಟ ಹೊಂದಬಹುದು ಎಂಬುದನ್ನು ಸಾಬೀತು ಪಡಿಸಿದ್ದಾರೆ .
‘‘ಐಸ್ ಕ್ರೀಂ ತಿನ್ನುವುದನ್ನೇ ತ್ಯಜಿಸಿದ್ದೇನೆ ’’- ಮಲ್ಲಿಕಾ ಶೆರಾವತ್
ಸಸ್ಯಾಹಾರಿಯಾಗಿರುವುದರಿಂದ ಮಲ್ಲಿಕಾ ಶೆರಾವತ್ ಸಾಮಾನ್ಯವಾಗಿ ಹಸಿರು ಸಲಾಡ್ಗಳು, ರಸಭರಿತ ಹಣ್ಣುಗಳು ಹಾಗೂ ಸಸ್ಯ ಮೂಲದಿಂದ ತಯಾರಾಗುವ ಹಾಲುಗಳನ್ನೇ ಸೇವಿಸುತ್ತಾರೆ. ಪ್ರಾಣಿ ಹಿಂಸೆಯನ್ನು ವಿರೋಧಿಸುವ ನಟಿ ಮಲ್ಲಿಕಾ ಶೆರಾವತ್ ಕೇವಲ ಮಾಂಸಾಹಾರ ತ್ಯಜಿಸಿರುವುದು ಮಾತ್ರವಲ್ಲದೇ ಯಾವುದೇ ಡೈರಿ ಉತ್ಪನ್ನಗಳನ್ನೂ ಸೇವಿಸುವುದಿಲ್ಲ.
Also Read: ಬಿಗ್ ಬಾಸ್ ಜಾನ್ವಿ-ಅಶ್ವಿನಿ ಗೌಡ ಗೆಳೆತನಕ್ಕೆ ಬ್ರೇಕ್! ದೊಡ್ಡವ್ವ-ಚಿಕ್ಕವ್ವ ದೂರ ಆದ್ರಾ?
‘‘ನಾನು ಶುದ್ಧ ಸಸ್ಯಾಹಾರಿ. ಯಾವುದೇ ಪ್ರಾಣಿಗಳನ್ನು, ಪ್ರಾಣಿ ಉತ್ಪನ್ನಗಳನ್ನು ಅಥವಾ ಡೈರಿ ಉತ್ಪನ್ನಗಳನ್ನು ಸೇವಿಸುವುದಿಲ್ಲ. ಹಾಲು, ಪನ್ನೀರು, ಚೀಸ್, ಲಸ್ಸಿ ಹೀಗೆ ಯಾವುದನ್ನೂ ನಾನು ಸೇವಿಸಲಾರೆ.
ಬೆಳಗ್ಗಿನ ಉಪಹಾರ ಸಾಮಾನ್ಯವಾಗಿ ತಾಜಾ ಹಣ್ಣುಗಳಾಗಿದೆ. ಮಾವು ನನ್ನ ನೆಚ್ಚಿನ ಆಹಾರ. ನಾನು ಚಹಾ ಅಥವಾ ಕಾಫಿ ಕುಡಿಯುವುದಿಲ್ಲ. ಸಿಹಿ ತಿಂಡಿಗಳನ್ನಂತೂ ಸೇವಿಸುವುದೇ ಇಲ್ಲ’’ ಎಂದು ಮಲ್ಲಿಕಾ ಶೆರಾವತ್ ಹೇಳಿಕೊಂಡಿದ್ದಾರೆ.
ನಾನು ಐಸ್ಕ್ರೀಂ ಕೂಡ ತಿನ್ನುವುದಿಲ್ಲ. ಅಷ್ಟೆಲ್ಲ ಆಸೆಯಾದರೆ ಖರ್ಜೂರ ತಿನ್ನುತ್ತೇನೆ. ನಿಮಗೆ ನಾನೊಂದು ಹಸುವಿನ ರೀತಿ ಎನಿಸಬಹುದು. ಆದರೆ ನಿಜಕ್ಕೂ ನಾನು ಇದೇ ರೀತಿಯ ಆಹಾರ ಸೇವಿಸುವುದು ಅಂತಾರೆ ನಟಿ ಮಲ್ಲಿಕಾ.
ಸಸ್ಯಾಹಾರಿ ಎಂದಾಕ್ಷಣ ನಾವು ರುಚಿಕರವಾರ ಯಾವುದನ್ನೂ ಸೇವಿಸಲು ಸಾಧ್ಯವಿಲ್ಲ ಎಂಬುದು ಅನೇಕರ ಅಭಿಪ್ರಾಯ. ಆದರೆ ನನಗೆ ತರಕಾರಿಯಲ್ಲಿ ಪ್ರಯೋಗಾತ್ಮಕವಾಗಿ ಏನನ್ನಾದರೂ ತಯಾರಿಸಲು ತುಂಬಾನೇ ಇಷ್ಟ.
Also Read: ಚಿತ್ರಮಂದಿರದಲ್ಲಿ ಧೂಳೆಬ್ಬಿಸಿದ ಕಾಂತಾರ ಚಾಪ್ಟರ್ 1 ಶೀಘ್ರದಲ್ಲೇ ಒಟಿಟಿಗೆ : ಇಲ್ಲಿದೆ ವಿವರ
ನಾನು ಅದನ್ನು ಎಂಜಾಯ್ ಮಾಡುತ್ತೇನೆ ಕೂಡ. ಬೆಂಡೆಕಾಯಿ ಹಾಗೂ ಅವಕಾಡೋ ನನಗೆ ಬಹಳ ಪ್ರಿಯವಾದವು. ಇವುಗಳನ್ನು ಬಳಸಿ ನಾನಾ ಬಗೆಯ ತಿನಿಸುಗಳನ್ನು ತಯಾರಿಸಲು ಕಲಿತಿದ್ದೇನೆ ಎಂದು ಮಲ್ಲಿಕಾ ಹೇಳಿದರು.



