ಮಾರ್ಕ್ ಮೊದಲ ಹಾಡು ರಿಲೀಸ್..’ಸೈಕ್ ಸೈತಾನ್’ಗೆ ಕಿಚ್ಚ ಸುದೀಪ್‌ ಭರ್ಜರಿ ಡ್ಯಾನ್ಸ್

Mark first song Sudeep : ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಸಿನಿಮಾ ಮಾರ್ಕ್. ಹೊಸ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಸರೆಗಮಪ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ‘ಸೈಕ್ ಸೈತಾನ್’ ಎಂಬ ಮಾಸ್ ಗೀತೆ ಬಿಡುಗಡೆಯಾಗಿದೆ.

ಅನೂಪ್ ಭಂಡಾರಿ ಹಾಡಿಗೆ ಸಾಹಿತ್ಯ ಬರೆದಿದ್ರೆ, ವಿಜಯ್ ಪ್ರಕಾಶ್, ಅಜನೀಶ್ ಲೋಕನಾಥ್ ಹಾಗೂ ಅನಿರುದ್ಧ ಶಾಸ್ತ್ರಿ ಕಂಠದಾನ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಸುದೀಪ್ ಪಾತ್ರದ ಮ್ಯಾನರಿಸಂನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ.

ಹುಕ್‌ಸ್ಟೆಪ್‌ ಚಾಲೆಂಜ್‌ ಕೊಟ್ಟ ಚಿತ್ರತಂಡ

ಮಾರ್ಕ್‌ ಸಿನಿಮಾದ ಸೈಕೋ ಸೈತಾನ್‌ ಗೀತೆಗೆ ಕಿಚ್ಚ ಸುದೀಪ್ ಭರ್ಜರಿಯಾಗಿ ಕುಣಿದಿದ್ದಾರೆ. ‌ಸಾಂಗ್‌ ರಿಲೀಸ್‌ ಆದ ಬೆನ್ನಲ್ಲೇ ಮಾರ್ಕ್‌ ಸಿನಿಮಾ ತಂಡ ಸಿನಿಮಾ ಪ್ರೇಮಿಗಳಿಗೆ ಹುಕ್‌ ಸ್ಟೆಪ್‌ ಡ್ಯಾನ್ಸ್‌ ಚಾಲೆಂಜ್‌ ನೀಡಿದೆ. ʼಈ ಸಾಂಗ್‌ ಪ್ಲೇ ಮಾಡಿಕೊಂಡು, ಹುಕ್‌ ಸ್ಟೆಪ್‌ ಹಾಕಬೇಕು.

ಅಂದರೆ ಕಿಚ್ಚ ಸುದೀಪ್‌ ಅವರು ಸಾಂಗ್‌ನಲ್ಲಿ ಹಾಕಿದ ಸ್ಟೆಪ್‌ಗಳಲ್ಲಿ ಯಾವುದಾದರೂ ಆಯ್ಕೆ ಮಾಡಿಕೊಂಡು ನೀವೂ ಡ್ಯಾನ್ಸ್‌ ಮಾಡಬೇಕು. ಬಳಿಕ ಇದನ್ನ ನಿಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಬೇಕು.

Mark first song released Psyche Satan Ge Kiccha Sudeep Super Dance

ಹೀಗೆ ವಿಡಿಯೊ ಪೋಸ್ಟ್‌ ಮಾಡುವಾಗ markthefilm ಇನ್‌ಸ್ಟಾ ಅಕೌಂಟ್‌ನ್ನ ಟ್ಯಾಗ್‌ ಮಾಡಿರಬೇಕು ಮತ್ತು #MARKHOOKSTEPCHALLENGE ಎಂದು ಹ್ಯಾಷ್‌ಟ್ಯಾಗ್‌ ಬಳಸಿರಬೇಕು.

ಅತ್ಯುತ್ತಮ ರೀಲ್ಸ್‌ನ್ನು markthefilm ಇನ್‌ಸ್ಟಾ ಪೇಜ್‌ನಲ್ಲಿ ಶೇರ್‌ ಮಾಡಿಕೊಳ್ಳಲು ಮತ್ತು ಅವರಿಗೆ ಬಹುಮಾನ ನೀಡಲು ಚಿತ್ರತಂಡ ತೀರ್ಮಾನ ಮಾಡಿದೆ.

ನಿರ್ದೇಶಕ ನಿರ್ದೇಶಕ ವಿಜಯ್ ಕಾರ್ತಿಕೇಯ ‘ಮ್ಯಾಕ್ಸ್’ ಸಿನಿಮಾದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದರು. ಇದೀಗ ‘ಮಾರ್ಕ್’ (MARK) ಸಿನಿಮಾ ಕೂಡ ವಿಜಯ್‌ ಕಾರ್ತಿಕೇಯ ನಿರ್ದೇಶನದಲ್ಲಿ ಮೂಡಿಬರಲಿದೆ.

Mark first song released Psyche Satan Ge Kiccha Sudeep Super Dance
ಸೂಚನೆ : ಧೂಮಪಾನ ಆರೋಗ್ಯಕ್ಕೆ ಹಾನಿಕರ

ನಟ ಸುದೀಪ್ (Sudeep) ಮತ್ತು ವಿಜಯ್ ಕಾರ್ತಿಕೇಯ ಕಾಂಬಿನೇಷನ್‌ ನಲ್ಲಿ ಮೂಡಿ ಬರುತ್ತಿರೋ ಎರಡನೇ ಸಿನಿಮಾ ಇದಾಗಿದೆ. ಕಿಚ್ಚ ಕ್ರಿಯೇಷನ್ಸ್ ಮತ್ತು’ಸತ್ಯಜ್ಯೋತಿ ಫಿಲ್ಮ್ಸ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ.

ಶೇಖರ್ ಚಂದ್ರ ಛಾಯಾಗ್ರಹಣ, ಗಣೇಶ್ ಬಾಬು ಸಂಕಲನ ಚಿತ್ರಕ್ಕಿದೆ. ಸ್ಟಂಟ್ ಸಿಲ್ವಾ, ಸುಪ್ರೀಂ ಸುಂದರ್, ವಿಕ್ರಮ್ ಮೋರ್, ಕೆವಿನ್ ಕುಮಾರ್ ಸಾಹಸ ಸಂಯೋಜನೆ ಚಿತ್ರಕ್ಕಿದೆ. ಡಿಸೆಂಬರ್ 25 ರಂದು ಮಾರ್ಕ್ ಸಿನಿಮಾ ತೆರೆಗೆ ಬರ್ತಿದೆ.

https://www.youtube.com/watch?v=MJdbzjbEy3M

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories