ರಕ್ಷಿತ್ ಶೆಟ್ಟಿಗೆ ಬರ್ತಡೇ ಸಂಭ್ರಮ : ಹುಟ್ಟುಹಬ್ಬಕ್ಕೆ ಸರ್ಪ್ರೈಸ್‌ಗಳ ಮೇಲೆ ಸರ್ಪ್ರೈಸ್

0

ಬೆಂಗಳೂರು : ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ 37 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಒಂದೆಡೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಹಾಗಿ ವಿಶ್ ಮಾಡ್ತಾಯಿದ್ರೆ, ಅತ್ತ ಸಿನಿಮಾ ತಂಡಗಳಿಂದ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.ಲಾಕ್ ಡೌನ್ ಹಿನ್ನೆಲೆಯಲ್ಲಿ ರಕ್ಷಿತ್ ಶೆಟ್ಟಿ ಅವರು ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕೇವಲ ಕುಟುಂಬಸ್ಥರ ಜೊತೆ ಸಿಂಪಲ್ಲಾಗಿ ಆಚರಿಸಿಕೊಂಡಿದ್ದಾರೆ.

ಉಡುಪಿಯ ರಕ್ಷಿತ್ ಶೆಟ್ಟಿ ನಿಟ್ಟೆಯಲ್ಲಿ ಸಾಫ್ಟ್ ವೇರ್ ಪದವಿ ಪಡೆದುಕೊಂಡಿದ್ದು, ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸ ಮಾಡಿದ್ದರು. ನಂತರ 2010ರಲ್ಲಿ ನಮ್ ಏರಿಯಾದಲ್ಲೊಂದು ದಿನ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಕ್ಷಿತ್ ಶೆಟ್ಟಿಗೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಹೊಸ ತಿರುವು ನೀಡಿತ್ತು.

ನಂತರ ಬಹುಪರಾಕ್, ವಾಸ್ತುಪ್ರಕಾರ, ಜಾತ್ರೆ, ರಿಕ್ಕಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಜಿಗರ್ ಥಂಡಾ, ಕಿರಿಕ್ ಪಾರ್ಟಿ, ಅವೇ ಶ್ರೀಮನ್ನಾರಾಯಣ ಸಿನಿಮಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾತ್ರವಲ್ಲ ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ರಕ್ಷಿತ್ ಶೆಟ್ಟಿ ಹೆಸರು ಮಾಡಿದ್ದಾರೆ.

ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ 777 ಚಾರ್ಲಿಯಲ್ಲಿ ಮನೆ ಫ್ಯಾಕ್ಟರಿ, ಗಲಾಟೆ, ಇಡ್ಲಿ, ಸಿಗರೇಟ್, ಬಿಯರ್ ಎಂಬುದನ್ನು ಹೆಚ್ಚು ತೋರಿಸಲಾಗಿದ್ದು, ನಾಯಿ ಚಾರ್ಲಿಯ ತರ್ಲೆ ಹಾಗೂ ಕೂಗಾಟ, ಹಾರಾಟವನ್ನು ತೋರಿಸಲಾಗಿದೆ. ಈ ಎರಡು ಚಿತ್ರಗಳ ಮಧ್ಯೆ ರಕ್ಷಿತ್ ಶೆಟ್ಟಿ ತಾವೇ ನಿರ್ದೇಶಿಸಲು ಕಥೆ ಹೆಣೆಯುತ್ತಿದ್ದು, ಪುಣ್ಯಕೋಟಿ ಸಿನಿಮಾಕ್ಕೆ ಸ್ಕ್ರಿಪ್ಟ್ ಬರೆಯುವುದರಲ್ಲಿಯೂ ಫುಲ್ ಬ್ಯುಸಿಯಾಗಿದ್ದಾರೆ.

ಹೀಗೆ ಲಾಕ್‌ಡೌನ್ ಸಮಯವನ್ನು ಸಹ ಸಿನಿಮಾಗಾಗಿಯೇ ಮಿಸಲಿಟ್ಟಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ಬಳಿಕ ರಕ್ಷಿತ್ ಶೆಟ್ಟಿ ಹೊಸ ಪ್ರಾಜೆಕ್ಟ್‌ಗಳತ್ತ ಗಮನಹರಿಸಿದ್ದು, ಪ್ರಸ್ತುತ ‘777 ಚಾರ್ಲಿ’ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ಚಿತ್ರದ ಶೀಘ್ರದಲ್ಲೇ ಸೆಟ್ ಏರಲಿದೆ.

ಪುಷ್ಕರ್ ಫಿಲಮ್ಸ್‌ನಿಂದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮತ್ತೊಂದೆಡೆ ಅವರದ್ದೇ ತಂಡ ಪರಂವಃ ಸ್ಟುಡಿಯೋಸ್ ‘777 ಚಾರ್ಲಿ’ಸಿನಿಮಾದ ವಿಡಿಯೋ ತುಣಕನ್ನು ಬಿಡುಗಡೆ ಮಾಡಿದೆ.‘ಸಪ್ತ ಸಾಗರದಾಚೆ ಎಲ್ಲೋ’ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಯವರನ್ನು ಖೈದಿ ರಿಜಿಸ್ಟರ್ ನಲ್ಲಿ ತೋರಿಸುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇನ್ನು 777 ಚಾರ್ಲಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಯನ್ನು ಧರ್ಮನ ಪಾತ್ರದಲ್ಲಿ ಪರಿಚಯಿಸಿದ್ದು, ನಾಯಿಯನ್ನು ಚಾರ್ಲಿ ಎಂದು ಪರಿಚಯಿಸಿದ್ದಾರೆ.

Leave A Reply

Your email address will not be published.