ರಾಜ್ಯಾದ್ಯಂತ ಇಂದಿನಿಂದ ಶುರು ‘ಡೆವಿಲ್​’ ಹಬ್ಬ : ಎಲ್ಲೆಲ್ಲೂ ರಾರಾಜಿಸಿದ ದಾಸನ ಕಟೌಟ್​

ಡಿ ಬಾಸ್​ ದರ್ಶನ್​ ಅಭಿಮಾನಿಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಡೆವಿಲ್​ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಿದೆ. ಇಂದು ಬೆಳಗ್ಗೆ 6 ಗಂಟೆಯಿಂದಲೇ ಚಿತ್ರಮಂದಿರಗಳು ಹೌಸ್​ ಫುಲ್​ ಆಗಿದ್ದು ದಾಸನ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ದರ್ಶನ್​ ಅನುಪಸ್ಥಿತಿಯಲ್ಲಿಯೇ ಡೆವಿಲ್​ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6:30ರಿಂದ ಡೆವಿಲ್​ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ನರ್ತಕಿ,ಪ್ರಸನ್ನ, ಸಿದ್ದೇಶ್ವರ, ನವರಂಗ, ಊರ್ವಶಿ ಸೇರಿದಂತೆ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ದರ್ಶನ್​ರ ಡೆವಿಲ್​ ಕಟೌಟ್​ ತಲೆಯೆತ್ತಿದೆ.
ಈ ಹಿಂದೆ ದರ್ಶನ್​ರ ಸಾರಥಿ ಸಿನಿಮಾ ರಿಲೀಸ್​ ಸಂದರ್ಭದಲ್ಲಿಯೂ ನಟ ದರ್ಶನ್​ ಜೈಲು ಪಾಲಾಗಿದ್ದರು. ಆಗ ಅಭಿಮಾನಿಗಳು ಈ ಸಿನಿಮಾವನ್ನು ಗೆಲ್ಲಿಸಿಕೊಡುವ ಮೂಲಕ ಜೈಲಿನಲ್ಲಿದ್ದ ದರ್ಶನ್​ಗೆ ಬೆಂಬಲ ನೀಡಿದ್ದರು. ಇದೀಗ ಡೆವಿಲ್​ ಸಿನಿಮಾ ಕೂಡ ಡಿ ಬಾಸ್​ ಅಭಿಮಾನಿಗಳಿಗೆ ಪ್ರತಿಷ್ಠೆಯ ವಿಷಯವಾಗಿದ್ದು,ಈ ಸಿನಿಮಾ ಕೂಡ ಹಲವು ದಾಖಲೆಗಳನ್ನು ಉಡೀಸ್​ ಮಾಡಿ ಭರ್ಜರಿ ಯಶಸ್ಸು ಕಾಣುವ ಎಲ್ಲಾ ಲಕ್ಷಣಗಳು ದಟ್ಟವಾಗಿದೆ.

ಇದನ್ನೂ ಓದಿ: Dhurandhar: ಧುರಂದರ್ ಚಿತ್ರಕ್ಕೆ ಸ್ಫೂರ್ತಿ ಕರಾಚಿಯ ಲ್ಯಾರಿ ಗ್ಯಾಂಗ್‌ ವಾರ್‌ನ ನೈಜ ಕಥೆ

ದರ್ಶನ್​ ಯಾವಗೆಲ್ಲ ಜೈಲಿನಲ್ಲಿ ಇದ್ದರೋ ಆಗ ರಿಲೀಸ್​ ಆದ ಸಿನಿಮಾ ಸೂಪರ್​ ಹಿಟ್​ ಆಗಿದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಕಾಂತಾರ ಸಿನಿಮಾದ ಬಳಿಕ ಯಾವುದೇ ಸ್ಟಾರ್​ ನಟನ ಸಿನಿಮಾಗಳು ರಿಲೀಸ್​ ಆಗಿಲ್ಲ. ಹೀಗಾಗಿ ಡೆವಿಲ್​ ಸಿನಿಮಾ ಈ ಬಾರಿ ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸುವುದು ಪಕ್ಕಾ ಎಂದೆಲ್ಲ ಹೇಳಲಾಗ್ತಿದೆ. ಡಿ ಬಾಸ್​ ಅಭಿಮಾನಿಗಳು ಡೆವಿಲ್​ ಸಿನಿಮಾವನ್ನು ಯಾವ ರೀತಿ ಮೆಚ್ಚಿಕೊಳ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories