ಸಂಗೀತ ಮಾಂತ್ರಿಕ ಅನಿರುದ್ಧ್ ಈಗ ‘ಡಿಕನ್ಸ್ಟ್‌ರಕ್ಟ್’ ಬ್ರಾಂಡ್ ಪಾರ್ಟ್ನರ್!

ಖ್ಯಾತ ಸ್ಕಿನ್ ಕೇರ್ ಬ್ರಾಂಡ್ ಡಿಕನ್ಸ್ಟ್‌ರಕ್ಟ್' (Deconstruct)ತನ್ನ ನೂತನ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್ ಅವರನ್ನು ಸ್ವಾಗತಿಸಿದೆ.

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಸ್ಟೈಲ್ ಮತ್ತು ಎನರ್ಜಿಗೆ ಈಗ ಹೊಸ ಮೆರುಗು ಸಿಕ್ಕಿದೆ. ಖ್ಯಾತ ಸ್ಕಿನ್ ಕೇರ್ ಬ್ರಾಂಡ್ ಡಿಕನ್ಸ್ಟ್‌ರಕ್ಟ್’ (Deconstruct)ತನ್ನ ನೂತನ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್ ಅವರನ್ನು ಸ್ವಾಗತಿಸಿದೆ.

ವೈರಲ್ ವಿಡಿಯೋದಿಂದ ಶುರುವಾದ ಜರ್ನಿ!

ಈ ಸಹಯೋಗದ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. ಇತ್ತೀಚೆಗೆ ಅನಿರುದ್ಧ್ ಹಂಚಿಕೊಂಡಿದ್ದ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ‘ಡಿಕನ್ಸ್ಟ್‌ರಕ್ಟ್’ ಉತ್ಪನ್ನಗಳು ಅಚಾನಕ್ ಆಗಿ ಕಾಣಿಸಿಕೊಂಡಿದ್ದವು. ಇದನ್ನು ಗಮನಿಸಿದ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದ್ದರು. ಅಭಿಮಾನಿಗಳ ಈ ಕುತೂಹಲವನ್ನೇ ಗಮನಿಸಿದ ಸಂಸ್ಥೆ, ಈಗ ಅಧಿಕೃತವಾಗಿ ಅನಿರುದ್ಧ್ ಅವರನ್ನು ತನ್ನ ಬ್ರಾಂಡ್ ಜೊತೆ ಸೇರಿಸಿಕೊಂಡಿದೆ.

ಇದನ್ನೂ ಓದಿ: ಬೆಂಗಳೂರ ಟ್ರಾಫಿಕ್​ಗೆ ಬ್ರೇಕ್​ ಹಾಕಲು ಮಾಸ್ಟರ್​ ಪ್ಲಾನ್​ – ಮೆಟ್ರೋ ಬಳಸುವ ಬಯೋಕಾನ್​ ಸಿಬ್ಬಂದಿಗೆ ಬೋನಸ್​

ನಾವೀನ್ಯತೆ ಮತ್ತು ಯೂತ್ ಐಕಾನ್ ಸಂಗಮ

ಈ ಕುರಿತು ಮಾತನಾಡಿದ ಸಂಸ್ಥೆಯ ಸಿಇಒ ಮಾಲಿನಿ ಅಡಪುರೆಡ್ಡಿ “ನಮ್ಮ ಬ್ರಾಂಡ್ ಬಗ್ಗೆ ಅನಿರುದ್ಧ್ ಅವರ ಅಭಿಮಾನಿಗಳು ತೋರಿದ ಆಸಕ್ತಿ ನಮಗೆ ಅದ್ಭುತವಾಗಿತ್ತು. ಅನಿರುದ್ಧ್ ಅವರ ವ್ಯಕ್ತಿತ್ವವು ನಮ್ಮ ಉತ್ಪನ್ನಗಳಷ್ಟೇ ಪರಿಣಾಮಕಾರಿಯಾಗಿದೆ. ಈ ಒಪ್ಪಂದವು ಸಹಜವಾಗಿ ಮೂಡಿಬಂದಿದ್ದು, ನಮ್ಮ ಬ್ರಾಂಡ್ ಮೌಲ್ಯಗಳನ್ನು ಹೆಚ್ಚಿಸಲಿದೆ” ಎಂದಿದ್ದಾರೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories