ಆರ್ಸಿಬಿ ಖರೀದಿ ರೇಸ್ಗೆ ಆದಾರ್ ಪೂನಾವಾಲಾ ಅಧಿಕೃತ ಎಂಟ್ರಿ : ಭರ್ಜರಿ ಬಿಡ್ಗೆ ಸಿದ್ಧತೆ
ಇಂಡಿಯನ್ ಪ್ರೀಮಿಯರ್ ಲೀಗ್ ಈ ಬಾರಿ ಆರಂಭಕ್ಕೂ ಮುನ್ನವೇ ಸಾಕಷ್ಟು ವಿಚಾರಗಳಿಂದ ಸುದ್ದಿಯಾಗುತ್ತಲೇ ಇದೆ. ಇದರಲ್ಲಿ ಪ್ರಮುಖವಾದದ್ದು ಆರ್ಸಿಬಿ (RCB )ಪ್ರಾಂಚೈಸಿ ಮಾರಾಟದ ವಿಚಾರ. ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಆರ್ಸಿಬಿ ಮಾಲೀಕತ್ವದ ಬದಲಾವಣೆಗೆ ಮುಂದಾಗಿರುವ ಬೆನ್ನಲ್ಲೇ ಇದೀಗ ಈ ರೇಸ್ಗೆ ಆದಾರ್ ಪೂನಾವಾಲಾ (Aadar Poonawalla) ಅಧಿಕೃತ ಎಂಟ್ರಿ ನೀಡಿದ್ದಾರೆ.
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆದಾರ್ ಪೂನಾವಾಲಾ ಬಿಡ್ ಸಲ್ಲಿಸುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ಪೋಸ್ಟ್ ಮಾಡಿರುವ ಆದಾರ್ ಪೂನಾವಾಲಾ, ಐಪಿಎಲ್ನ ಅತ್ಯಂತ ಜನಪ್ರಿಯ ತಂಡಗಳ ಪೈಕಿ ಒಂದಾದ ಆರ್ಸಿಬಿ ಮಾಲೀಕತ್ವಕ್ಕಾಗಿ ಮುಂದಿನ ಕೆಲವೇ ತಿಂಗಳಲ್ಲಿ ಬಿಡ್ ಮಾಡಲಿದ್ದೇನೆ ಎಂದು ಅಧಿಕೃತ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ನೀರಜ್ ಚೋಪ್ರಾ-ಹಿಮಾನಿ ಮದುವೆ: ಭೇಟಿ ನೀಡಿ ಹಾರೈಸಿದ ಪಿಎಂ ಮೋದಿ
ಅಂದಹಾಗೆ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿಯೇ ಆರ್ಸಿಬಿ ಮಾಲೀಕತ್ವ ಖರೀದಿಯ ಬಗ್ಗೆ ಪೂನಾವಾಲಾ ಸುಳಿವು ನೀಡಿದ್ದರು. ಕೊರೊನಾ ಸಂದರ್ಭದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮೂಲಕ ಕೊರೊನಾ ಲಸಿಕೆಗಳನ್ನು ಜಗತ್ತಿನಾದ್ಯಂತ ಪೂರೈಸಿ ಜಾಗತಿಕ ಮಟ್ಟದಲ್ಲಿ ಪೂನಾವಾಲಾ ಸದ್ದು ಮಾಡಿದ್ದರು.
ಇದನ್ನೂ ಓದಿ : Mary Kom: ಮೇರಿ ಕೋಮ್‌ಗೆ ವ್ಯಾಪಕ ಛೀಮಾರಿ, ಮದುವೆ-ಡಿವೋರ್ಸ್ ವಿವಾದಕ್ಕೆ ಏನು ಕಾರಣ?
ಅಲ್ಲದೇ ಈ ಮೂಲಕ ಉದ್ಯಮ ವಲಯದಲ್ಲಿಯೂ ಭದ್ರವಾದ ಸ್ಥಾನ ಗಳಿಸಿದ್ದರು. ಇದೀಗ ಕ್ರೀಡಾ ವಲಯಕ್ಕೂ ಕಾಲಿಡಲು ಸಜ್ಜಾಗಿರುವ ಪೂನಾವಾಲಾ ಆರ್ಸಿಬಿ ಖರೀದಿ ರೇಸ್ಗೆ ಅಧಿಕೃತ ಎಂಟ್ರಿ ನೀಡಿದ್ದಾರೆ.
Aadar Poonawalla officially enters RCB buying race: Preparing for a huge bid



