ಐಸಿಸಿ ಹೊಸ ರ‍್ಯಾಂಕಿಂಗ್‌ ಪಟ್ಟಿ ಪ್ರಕಟ: ಭಾರತ ನಂ.1, ಪಾಕ್‌ 5ನೇ ಸ್ಥಾನಕ್ಕೆ ಕುಸಿತ!

ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ತನ್ನ ವಾರ್ಷಿಕ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕ್ರಿಕೆಟ್‌ ಲೋಕದಲ್ಲಿ ಟೀಮ್ ಇಂಡಿಯಾ ತನ್ನ ಪ್ರಾಬಲ್ಯ ಮುಂದುವರಿಸಿದೆ. ವಿಶ್ವದ ಬಲಿಷ್ಠ ತಂಡಗಳನ್ನು ಹಿಂದಿಕ್ಕಿರುವ ಭಾರತ, 118 ರೇಟಿಂಗ್‌ ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಅಲಂಕರಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ತನ್ನ ವಾರ್ಷಿಕ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕ್ರಿಕೆಟ್‌ ಲೋಕದಲ್ಲಿ ಟೀಮ್ ಇಂಡಿಯಾ ತನ್ನ ಪ್ರಾಬಲ್ಯ ಮುಂದುವರಿಸಿದೆ. ವಿಶ್ವದ ಬಲಿಷ್ಠ ತಂಡಗಳನ್ನು ಹಿಂದಿಕ್ಕಿರುವ ಭಾರತ, 118 ರೇಟಿಂಗ್‌ ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಅಲಂಕರಿಸಿದೆ.

ಶ್ರೇಯಾಂಕದಲ್ಲಿ ಭಾರತ 118 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್‌ 113 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ. ವಿಶ್ವ ಚಾಂಪಿಯನ್‌ ಆಸ್ಪ್ರೇಲಿಯಾ ತಂಡವು 109 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಭಾರತದ ಈ ಸಾಧನೆಯು ಮುಂಬರುವ 2027ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದಾಗಿದೆ.

ಈ ಬಾರಿಯ ಶ್ರೇಯಾಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಅದ್ಬುತ ಸಾಧನೆ ಮಾಡಿದೆ.102 ಅಂಕಗಳನ್ನು ಗಳಿಸಿರುವ ಹರಿಣಗಳ ಪಡೆ, ಪಾಕಿಸ್ತಾನವನ್ನು ಐದನೇ ಸ್ಥಾನಕ್ಕೆ ತಳ್ಳುವ ಮೂಲಕ ನಾಲ್ಕನೇ ಸ್ಥಾನಕ್ಕೆ ಏರಿದೆ. ಪಾಕಿಸ್ತಾನ ತಂಡವು 98 ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ಕುಸಿದಿದೆ.

Also Read: IPL 2026 Play-off‌ : ಆರ್‌ಸಿಬಿ ಪ್ಲೇ-ಆಫ್‌ ಕನಸು ಜೀವಂತ! ಟೂರ್ನಿಯಿಂದ ಹೊರಬಿದ್ದ ಮುಂಬೈ, ಲಕ್ನೋ

ಶ್ರೀಲಂಕಾ, ಅಫಘಾನಿಸ್ತಾನ , ಇಂಗ್ಲೆಂಡ್‌ ತಂಡಗಳು ನಂತರದ ಸ್ಥಾನವನ್ನು ಪಡೆದುಕೊಂಡಿವೆ. 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ಈ ರಾಂಕಿಂಗ್‌ ಅತ್ಯಂತ ನಿರ್ಣಾಯಕವಾಗಿವೆ, 2027ರ ಮಾರ್ಚ್ 31ರ ವರೆಗೆ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಎಂಟು ಸ್ಥಾನಗಳಲ್ಲಿರುವ ತಂಡಗಳು ನೇರವಾಗಿ ವಿಶ್ವಕಪ್‌ ಆಡಲು ಅರ್ಹತೆ ಪಡೆಯಲಿವೆ.

ಬಾಂಗ್ಲಾದೇಶ ಹಾಗೂ ವೆಸ್ಟ್‌ ಇಂಡಿಸ್‌ ತಂಡಗಳು ವಿಶ್ವಕಪ್‌ ನೇರ ಅರ್ಹತೆ ಪಡೆಯುವಲ್ಲಿ ವಿಫಲವಾಗಿವೆ. ಬಾಂಗ್ಲಾದೇಶ 9ನೇ ಸ್ಥಾನದಲ್ಲಿದ್ರೆ, ವೆಸ್ಟ್‌ ಇಂಡಿಸ್‌ 10ನೇ ಸ್ಥಾನ, ಐರ್ಲೆಂಡ್‌ 11ನೇ ಸ್ಥಾನ ಹಾಗೂ ಜಿಂಬಾಬ್ವೆ ಕೊನೆಯ ಸ್ಥಾನದಲ್ಲಿದೆ.

ICC releases new rankings India No-1 Pakistan drops to 5th place

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories