ಯಾರು ಈ ಮುಕುಲ್ ಚೌಧರಿ? IPL 2026ರಲ್ಲಿ ಅಬ್ಬರಿಸುತ್ತಿರುವ ಈ ಹೊಸ ‘ಫಿನಿಶರ್’ ಬಗ್ಗೆ ನಿಮಗೆ ಗೊತ್ತಾ?

ಈಡೆನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಸೋಲಿನ ಸುಳಿಯಲ್ಲಿದ್ದಾಗ ಕ್ರೀಸ್‌ಗೆ ಬಂದ ಮುಕುಲ್, ಕೇವಲ 27 ಎಸೆತಗಳಲ್ಲಿ ಅಜೇಯ 54 ರನ್ ಚಚ್ಚಿದ್ರು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್‌ ಒಳಗೊಂಡಿತ್ತು

ಭಾರತೀಯ ಕ್ರಿಕೆಟ್ ಲೋಕದಲ್ಲಿ ಪ್ರತಿ ವರ್ಷ ಒಬ್ಬೊಬ್ಬರು ಹೊಸ ತಾರೆಗಳು ಉದಯಿಸುತ್ತಾರೆ. ಈ ಬಾರಿ ಐಪಿಎಲ್ 2026ರಲ್ಲಿ ಇಡೀ ದೇಶದ ಗಮನ ಸೆಳೆದಿರುವ ಹೆಸರು ಮುಕುಲ್ ಚೌಧರಿ. ಕೇವಲ 21 ವರ್ಷದ ಈ ಯುವ ಆಟಗಾರ, ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ ಅಸಾಧ್ಯವಾದ ಜಯವನ್ನು ತಂದುಕೊಟ್ಟು ರಾತ್ರೋರಾತ್ರಿ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

KKR ವಿರುದ್ಧದ ಆ ‘ಬಿರುಗಾಳಿ’ ಬ್ಯಾಟಿಂಗ್

ಈಡೆನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಸೋಲಿನ ಸುಳಿಯಲ್ಲಿದ್ದಾಗ ಕ್ರೀಸ್‌ಗೆ ಬಂದ ಮುಕುಲ್, ಕೇವಲ 27 ಎಸೆತಗಳಲ್ಲಿ ಅಜೇಯ 54 ರನ್ ಚಚ್ಚಿದ್ರು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್‌ ಒಳಗೊಂಡಿತ್ತು. ಲಕ್ನೋ ತಂಡಕ್ಕೆ ಜಯ ತಂದುಕೊಟ್ಟ ಅವರ ಶೈಲಿಯನ್ನು ಕಂಡು ಅಭಿಮಾನಿಗಳು “ಇವರು ಮುಂದಿನ ಎಂ.ಎಸ್ ಧೋನಿ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡುತ್ತಿದ್ದಾರೆ.

Also Read : ಸಿಕ್ಸರ್‌ಗಳ ಸುರಿಮಳೆಗೈದು ಹೊಸ ಇತಿಹಾಸ ಬರೆದ ವೈಭವ : ಸೂರ್ಯವಂಶಿ ಬ್ಯಾಟಿಂಗ್​ ಕಮಾಲ್​ಗೆ ಫ್ಯಾನ್ಸ್ ಫಿದಾ

ಯಾರು ಈ ಮುಕುಲ್ ಚೌಧರಿ ?

ಮುಕುಲ್‌ ಚೌದರಿ ರಾಜಸ್ಥಾನದ ಜುಂಜುನು ಜಿಲ್ಲೆಯವರು. 21 ವರ್ಷ ವಯಸ್ಸಿನ ಮುಕುಲ್‌ ವಿಕೆಟ್‌ ಕೀಪರ್‌ ಹಾಗೂ ಬಲಗೈ ಆಟಗಾರನಾಗಿ ಗುರುತಿಸಿಕೊಂಡವರು. 2026ರ ಐಪಿಎಲ್ ಹರಾಜಿನಲ್ಲಿ ಲಕ್ನೋ ತಂಡ‌ ₹2.6 ಕೋಟಿ ನೀಡಿ ಖರೀದಿಸಿತ್ತು.

ತಂದೆಯ ಕನಸಿನ ಬೆನ್ನೇರಿ ಬಂದ ಧೀರ

ಮುಕುಲ್ ಅವರ ಯಶಸ್ಸಿನ ಹಿಂದೆ ಅವರ ತಂದೆಯ ದೊಡ್ಡ ಪರಿಶ್ರಮವಿದೆ. ಅವರ ತಂದೆ ತಾನು ಮದುವೆಯಾಗುವ ಮುನ್ನವೇ “ನನ್ನ ಮಗ ದೊಡ್ಡ ಕ್ರಿಕೆಟಿಗನಾಗಬೇಕು” ಎಂದು ಕನಸು ಕಂಡಿದ್ದರಂತೆ. ಸಿಕ್ಕಿಂ ಮತ್ತು ರಾಜಸ್ಥಾನದ ದೇಶಿ ಕ್ರಿಕೆಟ್‌ನಲ್ಲಿ ಸತತವಾಗಿ ರನ್ ಗಳಿಸುತ್ತಾ ಬಂದ ಮುಕುಲ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತೋರಿದ ಅಮೋಘ ಪ್ರದರ್ಶನ ಇವರನ್ನು ಐಪಿಎಲ್ ಹಾದಿಗೆ ತಂದು ನಿಲ್ಲಿಸಿತು.

Also Read : RCB ಹಣೆಬರಹ ಬದಲಿಸಿದ ಬಿರ್ಲಾ ಎಂಟ್ರಿ : IPL 2027ಕ್ಕೆ ಆರ್‌ಸಿಬಿಗೆ ಹೊಸ ಹೆಸರು ?

ಫಿನಿಶರ್ ರೋಲ್‌ನಲ್ಲಿ ಮಿಂಚು

ಆರಂಭದಲ್ಲಿ ಮೀಡಿಯಂ ಪೇಸರ್ ಆಗಿದ್ದ ಮುಕುಲ್ ನಂತರ ವಿಕೆಟ್ ಕೀಪರ್ ಬ್ಯಾಟರ್ ಆಗಿ ಬದಲಾದರು. ದಿನಕ್ಕೆ ನೂರಾರು ಸಿಕ್ಸರ್‌ಗಳನ್ನು ಹೊಡೆಯುವ ಅಭ್ಯಾಸ ಮಾಡುವ ಇವರು, ಮೈದಾನದ ಯಾವುದೇ ದಿಕ್ಕಿಗೆ ಚೆಂಡನ್ನು ಅಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಬರೋಬ್ಬರಿ 160ಕ್ಕೂ ಹೆಚ್ಚು ಇರುವುದು ಇವರ ಆಕ್ರಮಣಕಾರಿ ಆಟಕ್ಕೆ ಸಾಕ್ಷಿ.

ಟೀಮ್ ಇಂಡಿಯಾ ಸ್ಟಾರ್ ?

ಗೌತಮ್ ಗಂಭೀರ್ ಮತ್ತು ಜಸ್ಟಿನ್ ಲ್ಯಾಂಗರ್ ಅವರಂತಹ ದಿಗ್ಗಜರ ಮಾರ್ಗದರ್ಶನದಲ್ಲಿ ಪಳಗುತ್ತಿರುವ ಮುಕುಲ್ ಚೌಧರಿ, ಇದೇ ಫಾರ್ಮ್ ಮುಂದುವರಿಸಿದರೆ ಶೀಘ್ರದಲ್ಲೇ ಟೀಮ್ ಇಂಡಿಯಾದ ನೀಲಿ ಜರ್ಸಿಯಲ್ಲಿ ಕಾಣಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.

mukul choudhary lsg ipl 2026 star hero kannada news

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories