ಬುರುಡೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ : ಬುರುಡೆ ಜೊತೆ ರಾತ್ರಿ ಕಳೆದಿದ್ದರಂತೆ ಸುಜಾತಾ ಭಟ್..!
ಧರ್ಮಸ್ಥಳ ಶ್ರೀ ಕ್ಷೇತ್ರದ ಹೆಸರಿಗೆ ಮಸಿ ಬಳಿಯಲು ಮುಂದಾದ ಬುರುಡೆ ಗ್ಯಾಂಗ್ನ ಅಸಲಿಯತ್ತು ಸಮಾಜದ ಮುಂದೆ ಬಯಲಾಗಿದ್ದು ತಲೆ ಎತ್ತದ ಸ್ಥಿತಿ ತಂದುಕೊಂಡಿದ್ದಾರೆ. ಈ ನಡುವೆ ಈ ಬುರುಡೆ ಪ್ರಕರಣದ ಕುರಿತಂತೆ ಮತ್ತೊಂದು ಮಹತ್ವದ ಮಾಹಿತಿ ಹೊರ ಬಿದ್ದಿದೆ. ಈ ಬುರುಡೆ ಪ್ರಕರಣದ ಸಂಚನ್ನು ಹೆಣೆಯಲು ಈ ಗ್ಯಾಂಗ್ನ ಸದಸ್ಯರಾದ ಗಿರೀಶ್ ಮಟ್ಟಣನವರ್, ಜಯಂತ್ ಟಿ , ಚಿನ್ನಯ್ಯ ಹಾಗೂ ಸುಜಾತಾ ಭಟ್ ದೆಹಲಿಯಲ್ಲಿ ಸೇರಿದ್ದರು. ಈ ವೇಳೆ ಸುಜಾತಾ ಭಟ್ ಅವರಿಗೆ ಅರಿವಿಲ್ಲದಂತೆ ಬುರುಡೆಯೊಂದಿಗೆ ರೂಮ್ ಶೇರ್ ಮಾಡಿದ್ದಾರೆ..!
ದೆಹಲಿಯ ವಿಠ್ಠಲ ಮಂದಿರದಲ್ಲಿ ಈ ನಾಲ್ವರು ರೂಮ್ ಮಾಡಿ ತಂಗಿದ್ದರು. ಈ ವೇಳೆ ಗಿರೀಶ್ ಮಟ್ಟಣವರ್,, ಜಯಂತ್ ಟಿ ಹಾಗೂ ಚಿನ್ನಯ್ಯ ಒಂದು ರೂಮಿನಲ್ಲಿ ವಾಸಗಿದ್ದರೆ ಸುಜಾತಾ ಭಟ್ಗೆ ಪ್ರತ್ಯೇಕ ರೂಮು ನೀಡಲಾಗಿತ್ತು. ಈ ವೇಲೆ ಸುಜಾತಾ ಭಟ್ ತಂಗಿದ್ದ ರೂಮಿನಲ್ಲಿದ್ದ ಮಂಚದ ಕೆಳಗೆ ಜಯಂತ್ ಟಿ ಈ ಬುರುಡೆಯಿದ್ದ ಬಾಕ್ಸ್ ಇಟ್ಟಿದ್ದರು ಎನ್ನಲಾಗಿದೆ.
ಬಾಕ್ಸ್ ಒಳಗೆ ಏನಿದೆ ಎಂದು ಸುಜಾತಾ ಜಯಂತ್ ಟಿ . ಬಳಿ ಕೇಳಿದ್ದರು ಎನ್ನಲಾಗಿದೆ. ಆದರೆ ಅದರಲ್ಲಿ ಏನಿಲ್ಲ ಎಂದು ಜಯಂತ್ ಟಿ. ಹಾರಿಕೆಯ ಉತ್ತರ ನೀಡಿದ್ದರು. ಇದನ್ನೇ ನಂಬಿಕೊಂಡಿದ್ದ ಸುಜಾತಾ ಮಂಚದ ಕೆಳಗೊಂದು ಬುರುಡೆಯಿದೆ ಎಂಬುದನ್ನು ಅರಿಯದೇ ಆ ರೂಮಿನಲ್ಲಿ ಮಲಗಿದ್ದರು ಎನ್ನಲಾಗಿದೆ. ಬುರುಡೆ ಇರುವ ವಿಚಾರವೇ ಇಲ್ಲದೇ ಸುಜಾತಾ ನೆಮ್ಮದಿಯಾಗಿ ಮಲಗಿದ್ರೆ ಇತ್ತ ಜಯಂತ್ಗೆ ರಾತ್ರಿಯೆಲ್ಲ ಕೆಟ್ಟ ಕನಸು ಬೀಳುತ್ತಿತ್ತಂತೆ..! ಈ ಬಗ್ಗೆ ಎಸ್ಐಟಿ ಅಧಿಕಾರಿಗಳ ಎದುರು ಜಯಂತ್ ಹೇಳಿಕೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಕೊಡಲಿಯಿಂದ ಗಂಡನನ್ನು 26 ಬಾರಿ ಕಡಿದು ಕೊಂದ ಹೆಂಡತಿ! ಅಡಗಿಕೊಂಡು ಬಚಾವಾದ ಮಗು
ಇನ್ನು ಎಸ್ಐಟಿ ವರದಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಆಪ್ತ ಗಣೇಶ್ ಶೆಟ್ಟಿ ಹೇಳಿಕೆ ಕೂಡ ದಾಖಲಾಗಿದೆ. ಗಿರೀಶ್ ಶೆಟ್ಟಿ ಮಟ್ಟಣ್ಣವರ್ ಇವರೆಲ್ಲರ ಬಳಿಕ ಬುರುಡೆ ಹಾಗೂ ಮಣ್ಣನ್ನು ನಾನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದ್ದೇನೆ. ಇದು ಹುಡುಗಿಯ ತಲೆಬುರುಡೆ ಎಂದು ಹೇಳಿದ್ದರಂತೆ. ತಿಮರೋಡಿ ಮನೆಯಲ್ಲಿಯೇ ಬುರುಡೆಯನ್ನು ಇರಿಸಲಾಗಿತ್ತು. ಆದರೆ ಈ ವಿಚಾರ ಮಹೇಶ್ ಶೆಟ್ಟಿ ತಿಮರೋಡಿ ಪತ್ನಿಗೆ ತಿಳಿದಿರಲಿಲ್ಲ ಎಂದು ತನಿಖೆಯ ವೇಳೆ ಗಣೇಶ್ ಶೆಟ್ಟಿ ಹೇಳಿಕೆ ದಾಖಲಿಸಿದ್ದಾರೆ .



