ವೈದ್ಯೆ ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​ : ಅನೈತಿಕ ಸಂಬಂಧ, ಆಸ್ತಿ ಆಸೆಗೆ ಕೊಲೆ ಶಂಕೆ

ಬೆಂಗಳೂರು: Doctor Murder Case: ಚರ್ಮರೋಗ ತಜ್ಞೆ ಡಾ. ಕೃತಿಕಾ ರೆಡ್ಡಿ ಎಂಬವರನ್ನು ಅವರ ಪತಿಯೇ ಇಂಜೆಕ್ಷನ್​ ನೀಡಿ ಕೊಲೆ ಮಾಡಿದ ಪ್ರಕರಣ ಸಂಬಂಧ ಮತ್ತಷ್ಟು ಸ್ಪೋಟಕ ಮಾಹಿತಿ ಹೊರಬಿದ್ದಿದೆ.

ಇಲ್ಲಿಯವರೆಗೆ ಡಾ.ಕೃತಿಕಾ ರೆಡ್ಡಿ ಅನಾರೋಗ್ಯ ಸಮಸ್ಯೆಯಿತ್ತು. ಇದನ್ನು ಹೇಳದೇ ಮನೆಯವರು ಮದುವೆ ಮಾಡಿದ ಹಿನ್ನೆಲೆಯಲ್ಲಿ ಕೋಪಗೊಂಡಿದ್ದ ಡಾ. ಮಹೇಂದ್ರ ರೆಡ್ಡಿ ಪತ್ನಿಯನ್ನು ಅರವಳಿಕೆ ಮದ್ದು ನೀಡಿ ಕೊಲೆ ಮಾಡಿದ್ದಾನೆ ಎನ್ನಲಾಗಿತ್ತು.

ಆದರೆ ಇದೀಗ ಈ ಪ್ರಕರಣದ ಆಳಕ್ಕೆ ಇಳಿಯುತ್ತಿದ್ದಂತೆಯೇ ಪೊಲೀಸರಿಗೆ ಮತ್ತಷ್ಟು ಮಾಹಿತಿಗಳು ತಿಳಿದುಬಂದಿದ್ದು ಡಾ. ಮಹೇಂದ್ರ ರೆಡ್ಡಿಗಿದ್ದ ಅನೈತಿಕ ಸಂಬಂಧವೇ ಈ ಕೊಲೆಗೆ ಕಾರಣವಾಯಿತಾ ಎಂಬ ಅನುಮಾನಕ್ಕೆ ದಾರಿ ಮಾಡಿದೆ.

Also Read: ಲಂಚ ಕೊಡದ್ದಕ್ಕೆ ಯುವಕನ್ನು ವಿವಸ್ತ್ರಗೊಳಿಸಿ ಪೊಲೀಸರಿಂದ ಹತ್ಯೆ

ಮೃತ ಡಾ. ಕೃತಿಕಾ ಹಾಗೂ ಆರೋಪಿ ಡಾ. ಮಹೇಂದ್ರ ಇಬ್ಬರೂ ಶ್ರೀಮಂತ ಕುಟುಂಬದ ಹಿನ್ನೆಲೆಯುಳ್ಳವರು. ಮೃತ ಕೃತಿಕಾ ತಂದೆ ಮುನಿ ರೆಡ್ಡಿ ಮಾರತ್ತಹಳ್ಳಿಯಲ್ಲಿ ಹಲವಾರು ವಾಣಿಜ್ಯ ಸಂಕೀರ್ಣಗಳನ್ನು ಹೊಂದಿದ್ದು, ತಿಂಗಳಿಗೆ ಸುಮಾರು ₹10-15 ಲಕ್ಷ ಬಾಡಿಗೆ ಗಳಿಸುತ್ತಾರೆ. ಬೆಂಗಳೂರಿನಲ್ಲಿ ದೊಡ್ಡ ಚರ್ಮರೋಗ ಚಿಕಿತ್ಸಾಲಯವನ್ನು ಸ್ಥಾಪಿಸಲು ಅವರು ತಮ್ಮ ಮಗಳಿಗೆ ಆರ್ಥಿಕ ಸಹಾಯವನ್ನು ನೀಡಿದ್ದರು.

ಕೃತಿಕಾ ನಿಗೂಢ ಸಾವಿನ ಬಳಿಕ, ಆಕೆಯ ತಂದೆ ಮಾರತಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಹೇಂದ್ರನಿಗೆ ಅನೇಕ ಮಹಿಳೆಯರೊಂದಿಗೆ ನಿಕಟ ಸಂಬಂಧವಿತ್ತು ಎಂದು ಅನುಮಾನ ವ್ಯಕ್ತಪಡಿಸಿದ್ದರು.

ಕೃತಿಕಾ ಸಾವಿಗೂ ಮುನ್ನ ಪತಿಯ ಕಳ್ಳಾಟಗಳು ಆಕೆಯ ಎದುರು ಬಯಲಾಗಿರಬಹುದು ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಇದೇ ವಿಚಾರಕ್ಕೆ ದಂಪತಿ ನಡುವೆ ಕಲಹ ಏರ್ಪಟ್ಟಿದೆ. ಹಾಗೂ ಸಮಾಜದಲ್ಲಿ ತನ್ನ ಮರ್ಯಾದೆ ಉಳಿಸಿಕೊಳ್ಳಲು ಕೃತಿಕಾಗಳನ್ನು ಸಾಯಿಸುವ ನಿರ್ಧಾರಕ್ಕೆ ಮಹೇಂದ್ರ ಬಂದಿರಬಹುದೇ ಎಂಬ ದಿಕ್ಕಿನಲ್ಲಿ ಇದೀಗ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಆರೋಪಿ ಮಹೇಂದ್ರನಿಗೆ ಬೇರೆ ಯುವತಿಯರೊಂದಿಗೆ ಅನೈತಿಕ ಸಂಬಂಧವಿತ್ತೇ ಎಂಬುದನ್ನು ಪತ್ತೆ ಮಾಡಲು ಪೊಲೀಸರು ಇದೀಗ ಆತನ ಫೋನ್​ ದಾಖಲೆಗಳು, ಚಾಟ್​ ಹಿಸ್ಟರಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

Also Read: ಮನೆಗೆ ಬಾರಲು ಒಪ್ಪದ ಪತ್ನಿ : ಹೆತ್ತ ಮಕ್ಕಳ ಕತ್ತು ಸೀಳಿ ಕೊಂದ ಪಾಪಿ ತಂದೆ

ಮಹೇಂದ್ರ ತನ್ನ ಕೆಲಸದ ಅವಧಿಯಲ್ಲಿ ಹೆಚ್ಚಾಗಿ ಮಹಿಳಾ ಸಹೋದ್ಯೋಗಿಗಳನ್ನೇ ಭೇಟಿ ಮಾಡುತ್ತಿದ್ದ ಎನ್ನಲಾಗಿದ್ದು ಮಹೇಂದ್ರನ ಈ ನಡೆ ಆತನ ಮೇಲೆ ಮತ್ತಷ್ಟು ಅನುಮಾನ ಹೆಚ್ಚುವಂತೆ ಮಾಡಿದೆ.
ಆರೋಪಿ ಡಾ. ಮಹೇಂದ್ರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜನರಲ್​ ಸರ್ಜನ್​ ಆಗಿ ಮತ್ತು ಕೃತಿಕಾ ಚರ್ಮರೋಗ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.

ಇವರಿಬ್ಬರೂ 2024ರ ಏಪ್ರಿಲ್​ 23ರಂದು ಅಂದರೆ ಆಕೆಯ ಸಾವಿಗೆ ಕೇವಲ ಆರು ತಿಂಗಳು ಮುನ್ನ ಅದ್ಧೂರಿ ಸಮಾರಂಭದಲ್ಲಿ ಮದುವೆಯಾಗಿದ್ದರು .

ಕೃತಿಕಾ ವಾಸಿಸುತ್ತಿದ್ದ ಮನೆ ಇಸ್ಕಾನ್​ ದೇವಾಲಯಕ್ಕೆ ದಾನ

ಇನ್ನು ಕೃತಿಕಾ ಮರಣದ ಬಳಿಕ ಆಕೆಯ ಕುಟುಂಬ ತೀವ್ರ ದುಃಖ ಅನುಭವಿಸಿದೆ. ಸದಾ ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡಿದ್ದ ಕೃತಿಕಾ ವಾಸವಿದ್ದ ಮನೆಗೆ ಆಕೆಯಿಲ್ಲದೇ ಹೋಗಲು ಸಾಧ್ಯವಿಲ್ಲವೆಂದು ಆಕೆಯ ಕುಟುಂಬ ಆಕೆಯ ಮನೆಯನ್ನು ಇಸ್ಕಾನ್​ ದೇವಾಲಯಕ್ಕೆ ದಾನ ಮಾಡಿತ್ತು.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories