ಕಾರ್ಕಳ : ಮೊಬೈಲ್ ಕೊಡಿಸಲಿಲ್ಲವೆಂದು ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
ಈಗಿನ ಜಮಾನದ ಯುವಕರಿಗೆ ತಂತ್ರಜ್ಞಾನದ ಮೋಹ ಜಾಸ್ತಿ. ಇದೇ ಮೋಹದಲ್ಲಿ ಯುವಕನೋರ್ವ ಪ್ರಾಣವನ್ನೇ ಬಲಿಕೊಟ್ಟಿದ್ದಾನೆ. ಅಮ್ಮ ಹೊಸ ಮೊಬೈಲ್ ಕೊಡಿಸಲು ಒಪ್ಪುತ್ತಿಲ್ಲ ಎಂಬ ಒಂದೇ ಕಾರಣಕ್ಕೆ ಕೋಪಗೊಂಡ ಪಿ.ಯು.ಸಿ ವಿದ್ಯಾರ್ಥಿಯೊಬ್ಬ ಕಲ್ಲುಕೋರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯು ಕಾರ್ಕಳ ಸಮೀಪದ ಸಂಭವಿಸಿದೆ. ಮೃತ ವಿದ್ಯಾರ್ಥಿಯನ್ನು 16 ವರ್ಷದ ಸುಮಂತ್ ನಂದಳಿಕೆ ಎಂದು ಗುರುತಿಸಲಾಗಿದೆ. ನವೆಂಬರ್ 13ರಂದು ಈ ಘಟನೆ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸುಮಂತ್ ಕೈಲಿದ್ದ ಮೊಬೈಲ್ ಹಾಳಾಗಿತ್ತು. ರಿಪೇರಿ ಮಾಡಿಸುವ ಬದಲು ಹೊಸ ಮೊಬೈಲ್ ತೆಗೆದುಕೊಳ್ಳುವ ಆಲೋಚನೆ ಸುಮಂತ್‌ಗೆ ಇತ್ತು. ಇದಕ್ಕೆ ಅಮ್ಮ ಸುರೇಖಾ ಸಧ್ಯ ಆಗುವುದಿಲ್ಲ. ಮುಂದಿನ ತಿಂಗಳು ನೋಡೋಣ ಎಂದು ಹೇಳಿದ್ದರಂತೆ. ಆದರೆ ಪಟ್ಟು ಬಿಡದ ಸುಮಂತ್ ಮನೆ ಬಿಟ್ಟು ತೆರಳಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇದನ್ನೂ ಓದಿ: ಬಿ.ಸಿ ರೋಡಿನಲ್ಲಿ ಯಮನ ಅಟ್ಟಹಾಸ: ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಬರುತ್ತಿದ್ದವರು ಬಾರದ ಲೋಕಕ್ಕೆ
ಅಂದಹಾಗೆ ಸುಮಂತ್ ತಂದೆ ಕೂಡ ಇದೇ ರೀತಿ ಆತ್ಮಹತ್ಯೆ ಮೂಲಕವೇ ಜೀವ ಕಳೆದುಕೊಂಡಿದ್ದರು. ಇದಾದ ಬಳಿಕ ತಮ್ಮ ಏಕೈಕ ಪುತ್ರ ಸುಮಂತ್ ಜೊತೆಯಲ್ಲಿ ತಾಯಿ ಸುರೇಖಾ ವಾಸವಿದ್ದರು. ಇದೀಗ ಮಗ ಕೂಡ ತಂದೆಯ ಹಾದಿಯನ್ನೇ ತುಳಿದಿದ್ದು ಸುರೇಖಾ ಜೀವನ ದುಃಖದ ಕಡಲಿನಲ್ಲಿ ಮುಳುಗಿದೆ



