Superstar Rajinikanth : ಚಿತ್ರರಂಗಕ್ಕೆ ಸೂಪರ್​ಸ್ಟಾರ್ ರಜನೀಕಾಂತ್​ ಗುಡ್​ ಬೈ..?

ಸೂಪರ್​ ಸ್ಟಾರ್​ ರಜನೀಕಾಂತ್​ (Superstar Rajinikanth) ತಮ್ಮ 74ನೇ ವಯಸ್ಸಿನಲ್ಲಿಯೂ ಸಿನಿಮಾಗಳಲ್ಲಿ ಸಕ್ರಿಯರಾಗಿ ಇರುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದಾರೆ.

ರಜನೀಕಾಂತ್​ ಅಭಿನಯಕ್ಕೆ ದೇಶಾದ್ಯಂತ ಕೋಟಿಗಟ್ಟಲೇ ಅಭಿಮಾನಿಗಳಿದ್ದಾರೆ. ಆದರೆ ಇದೀಗ ತಲೈವಾ ಅಭಿಮಾನಿಗಳಿಗೆ ಬೇಸರ ತರಿಸುವಂತಹ ಸುದ್ದಿಯೊಂದು ಹೊರಬಿದ್ದಿದೆ.

ವರ್ಷಕ್ಕೆ ಒಂದು ಸಿನಿಮಾವನ್ನು ಕೊಡಬೇಕೆಂಬ ಹಂಬಲದೊಂದಿಗೆ ಕಾರ್ಯನಿರ್ವಯಿಸುವ ಸೂಪರ್ಸ್ಟಾರ್​ ರಜನಿಕಾಂತ್​ ಸಿನಿಮಾ ಕ್ಷೇತ್ರಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ತಮ್ಮ ಮಾಸ್​ ಸಿನಿಮಾಗಳ ಮೂಲಕವೇ ಅಭಿಮಾನಿಗಳನ್ನು ಸೆಳೆಯುವ ರಜನೀಕಾಂತ್​ರ ಆ್ಯಕ್ಷನ್​ ಸೀನ್​ಗೆ ಮನಸೋಲದವರಿಲ್ಲ. ಆದರೆ ಆರೋಗ್ಯ ಸಮಸ್ಯೆ ಹಾಗೂ ವಯಸ್ಸಿನ ಕಾರಣಗಳಿಂದ ರಜನಿಕಾಂತ್​ರಿಗೆ ಮೊದಲಿನಷ್ಟು ಸಕ್ರಿಯರಾಗಿ ಆ್ಯಕ್ಷನ್​ ಸೀನ್‌ ಗಳಲ್ಲಿ ನಟಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ.

ಡ್ಯೂಪ್​ ಬಳಕೆ ಮಾಡಿಕೊಂಡು ಆ್ಯಕ್ಷನ್​ ಸೀನ್​ಗಳನ್ನು ಚಿತ್ರೀಕರಿಸಲಾಗುತ್ತಿದೆ. ಈ ಹಿಂದೆ ರಿಲೀಸ್​ ಆದ ರಜನೀಕಾಂತ್​ರ ಕೂಲಿ ಸಿನಿಮಾ ಬಾಕ್ಸಾಫೀಸಿನಲ್ಲಿ ಅಂತಾ ದೊಡ್ಡಮಟ್ಟದಲ್ಲಿ ಸದ್ದೇನು ಮಾಡಿರಲಿಲ್ಲ.

ಇದನ್ನೂ ಓದಿ : ಈ ಬಾರಿ ಬಿಗ್‌ ಬಾಸ್‌ ಮನೆಯಿಂದ ಹೊರ ಹೊಗ್ತಾರಾ ಧ್ರುವಂತ್‌? ಅಥವಾ ಡಬಲ್‌ ಎಲಿಮಿನೇಷನ್‌ ಇದೇನಾ ?

ಇದಾದ ಬಳಿಕ ಜೈಲರ್​ 2 ಸಿನಿಮಾದಲ್ಲಿ ತಲೈವಾ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಸುಂದರ್​ ಸಿ. ನಿರ್ದೇಶನದ ಸಿನಿಮಾ ಹಾಗೂ ಕಮಲ್​ ಹಾಸನ್​ ಅವರ ಜೊತೆಯಲ್ಲಿ ಇನ್ನೊಂದು ಸಿನಿಮಾದಲ್ಲಿ ನಟಿಸಿ ಬಳಿಕ ಸಿನಿ ನಿವೃತ್ತಿ ಪಡೆಯುತ್ತಾರ ಎಂದು ತಿಳಿದುಬಂದಿದೆ.

Superstar Rajinikanth goodbye to the film industry

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories