ಇವರು ಆಧುನಿಕ ಭಗೀರಥ : ನೀರಿಗಾಗಿ 30 ವರ್ಷ ಕಾಲುವೆ ಕೊರೆದ ವೃದ್ದ !

0
  • ವಂದನಾ ಕೊಮ್ಮುಂಜೆ

ಸಾಧಿಸುವ ಮನಸ್ಸಿದ್ರೆ ಏನನ್ನಾದ್ರೂ ಸಾಧಿಸಬಹುದು ಎಂಬ ಮಾತಿದೆ. ಹಾಗಂತ ಸಾಧಿಸುವವರಿಗೆ ಅಡೆತಡೆಗಳು ಹೆಚ್ಚು. ಅದನ್ನು ದಾಟಿ ಸಾಧಿಸೋದು ಅಂದ್ರೆ ಸಾಮಾನ್ಯದ ಕೆಲಸವಲ್ಲ. ಅದರಲ್ಲೂ ಪರೋಪಕಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡೋದು ಅಷ್ಟೆಲ್ಲಾ ಸುಲಭವಲ್ಲ. ಆದ್ರೆ ಇಲ್ಲೋಬ್ಬರು ಊರಿನ ಉಳಿತಿಗಾಗಿ ಮಾಡಿದ ಕಾರ್ಯ ನೋಡಿದ್ರೆ ಒಮ್ಮೆ ಎಂತವರ ಮೈ ಜುಂ ಅನಿಸದೇ ಇರದು.

ಹೌದು, ಇವರು ತಮ್ಮ ಜೀವನವನ್ನೇ ಪರೋಪಕಾರಕ್ಕಾಗಿ ಮುಡಿಪಾಗಿಟ್ಟವರು. ಊರಿಗೆ ಒಳಿತಾಗಲಿ ಅಂತ 30 ವರ್ಷ ಹಗಲು ರಾತ್ರಿ ದುಡಿದ್ದಾರೆ. ಹಾಗಾದ್ರೆ ಈತ ಮಾಡಿದ ಕಾರ್ಯ ಏನು ಗೊತ್ತಾ? ಸತತ 30 ವರ್ಷಗಳ ಕಾಲ ಸ್ವಂತ ಪರಿಶ್ರಮದಿಂದ ಒಬ್ಬರೇ ಕಾಲುವೆ ಕೊರೆದಿದ್ದು. ಈತನ ಹೆಸರು ಲ್ಯೂಂಗಿ ಬುಯಾನ್’

ಆತನ ಊರು ಕೃಷಿ ಹಾಗು ಪಶುಸಂಗೋಪನೆ ಆವಲಂಭಿತ ಗ್ರಾಮ. ಸುತ್ತಮುತ್ತಲು ಕಾಡು ಮತ್ತು ಬೆಟ್ಟಗಡ್ಡಗಳಿಂದ ಸುತ್ತುವರಿದ ಗ್ರಾಮವಾದ್ರೂ ಗ್ರಾಮದಲ್ಲಿ ಕೃಷಿಗೆ ಸಾಕಷ್ಟು ನೀರು ಲಭ್ಯವಾಗುತ್ತಿರಲಿಲ್ಲ. ಬೆಟ್ಟದಿಂದ ಹರಿದ ನೀರು ಸೀದಾ ನದಿಗಳಿಗೆ ಸೇರುತ್ತಿತ್ತು. ಇದರಿಂದ ಗ್ರಾಮಕ್ಕೆ ಯಾವುದೇ ಸಹಾಯವಾಗುತ್ತಿರಲಿಲ್ಲ. ಹೀಗಾಗಿ ಲ್ಯೂಂಗಿ ಬುಯಾನ್ ಬೆಟ್ಟದಿಂದ ಊರಿನ ಕೊಳವೊಂದಕ್ಕೆ ಕಾಲುವೆ ಹರಿಸೋಕೆ ಸಿದ್ದರಾದ್ರು.

ಸುಮಾರು 3ಕಿಲೋ ಮೀಟರ್ ಕಾಲುವೆಯ ಅಗತ್ಯವಿತ್ತು. ಬೆಟ್ಟ ಆಗಿರೋದ್ರಿಂದ ಇದು ಒಬ್ಬರಿಂದ ಆಗುವ ಕೆಲಸವಾಗಿರಲಿಲ್ಲ. ಗ್ರಾಮಸ್ಥರನ್ನು ಕೇಳಿದ್ರೆ ಅವರು ಸಹಕಾರ ನೀಡಿಲ್ಲ. ಹೀಗಾಗಿ ಲ್ಯೂಂಗಿ ಬುಯಾನ್ ಒಬ್ಬರೇ ಕಾಲುವೆ ಕೊರೆಯೋಕೆ ಮುಂದಾಗಿದ್ದಾರೆ.

ಅವರು ಹೇಳುವ ಪ್ರಕಾರ ನೀರಿನ ತೊಂದರೆಯಿಂದಾಗಿ ಗ್ರಾಮದ ಸಾಕಷ್ಟು ಮಂದಿ ಕೃಷಿ ಕೆಲಸ ಬಿಟ್ಟು ಪಟ್ಟಣಕ್ಕೆ ಹೋಗಿ ಕೆಲಸ ಮಾಡೋಕೆ ಆರಂಭಿಸಿದ್ರು. ಆದ್ರೆ ನನಗೆ ಈ ಕೆಲಸ ಮಾಡಲು ಮನಸ್ಸಾಗಿಲ್ಲ. ಹೀಗಾಗಿ ನಾನು ಕಾಲುವೆ ಮಾಡೋಕೆ ಮುಂದಾದೆ. ಜನರಲ್ಲಿ ಸಹಕಾರ ಕೇಳಿದ್ರೂ ಯಾರು ನನಗೆ ಸಹಾಯ ಮಾಡಿಲ್ಲ. ಹೀಗಾಗಿ ಕೊನೆಗೆ ನಾನೊಬ್ಬನೆ ಈ ಕೆಲಸದಲ್ಲಿ ತೊಡಗಿಸಿಕೊಂಡೆ . ಈಗ ನನ್ನ ಆಸೆ ಈಡೇರಿದೆ ಅಂತಾರೆ ಲ್ಯೂಂಗಿ ಬುಯಾನ್.

ಈಗ ಲ್ಯೂಂಗಿ ಬುಯಾನ್ ಗ್ರಾಮ ಕೋಥಿಲಾವದ ಜನರು ಅವರ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಈ ಕೋಥಿಲಾವ ಇರೋರೋದು ಬಿಹಾರ ಗಯಾ ಜಿಲ್ಲೆಯಲ್ಲಿ . ಜಿಲ್ಲಾ ಕೇಂದ್ರದಿಂದ 84 ಕಿಲೋ ಮೀಟರ್ ದೂರದಲ್ಲಿರೋ ಹಳ್ಳಿಯ ಜನರು ಈಗಲೂ ಹಲವಾರು ಸೌಲಭ್ಯ ವಂಚಿತರು. ಬೆಟ್ಟಗುಡ್ಡದ ನಡುವೆ ಇದ್ದರೂ ನೀರಿನ ಸಮಸ್ಯೆ ಇವರನ್ನು ಕಾಡ್ತಿದೆ. ಇದೀಗ ಲ್ಯೂಂಗಿ ಬುಯಾನ್ ಅವರ ಕಾರ್ಯ ಹಳ್ಳಿ ಜನರಲ್ಲಿ ಕೊಂಚ ಉತ್ಸಾಹ ನೀಡಿದೆ ಅಂದರೆ ತಪ್ಪಾಗಲ್ಲ. ಅದೇನೆ ಇರಲಿ ಸಾಧಕನಿಗೆ ಯಾವುದೇ ಕೆಲಸ ಕಷ್ಟವಲ್ಲ ಅಂತ ಇವರು ತೋರಿಸಿಕೊಟ್ಟಿದ್ದಾರೆ

Leave A Reply

Your email address will not be published.