ದೇಶದಾದ್ಯಂತ ಲಾಕ್ ಡೌನ್ 4.0 ಜಾರಿ : ಮದುವೆಗೆ ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯ

0

ನವದೆಹಲಿ : ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ 4.0 ಆದೇಶ ಜಾರಿ ಮಾಡಲಾಗಿದೆ. 4ನೇ ಹಂತದ ಲಾಕ್ ಡೌನ್ ನಿಂದಾಗಿ ಕೇಂದ್ರ ಸರಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದ್ರಲ್ಲೂ ಮದುವೆ ಸಮಾರಂಭಕ್ಕೆ ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಅನುಮತಿ ಪಡೆಯುವಂತೆ ಸೂಚನೆಯನ್ನು ನೀಡಿದೆ.

ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಾಗುತ್ತಿದ್ದಂತೆಯೇ ಮದುವೆ ಸಮಾರಂಭಗಳಿಗೆ ನಿಷೇಧ ಹೇರಲಾಗಿತ್ತು. ಆದರೆ 2ನೇ ಹಂತದ ಲಾಕ್ ಡೌನ್ ಆದೇಶದ ನಂತರ ಮದುವೆ ಸಮಾರಂಭಗಳಿಗೆ ಷರತ್ತು ಬದ್ದ ಅವಕಾಶ ಕಲ್ಪಿಸಿತ್ತು. ಆದ್ರೀಗ ನಾಲ್ಕನೇ ಹಂತದ ಲಾಕ್ ಡೌನ್ ಆದೇಶ ಜಾರಿಯಾಗಿರೋ ಹಿನ್ನೆಲೆಯಲ್ಲಿ ಹೊಸ ನಿಯಮಗಳನ್ನು ಅಳವಡಿಸಿದೆ.

ಮದುವೆ ಸಮಾರಂಭಗಳಲ್ಲಿ ಕಡ್ಡಾಯವಾಗಿ 50 ಜನರು ಮಾತ್ರವೇ ಪಾಲ್ಗೊಳ್ಳಲು ಮಾತ್ರವೇ ಅವಕಾಶವನ್ನು ಕಲ್ಪಿಸಲಾಗಿದೆ. 10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದನ್ನು ನಿಷೇಧ ಹೇರಲಾಗಿದೆ.

ಮದುವೆ ಸಮಾರಂಭಗಳನ್ನು ನಡೆಸಲು ಆಯಾಯ ಜಿಲ್ಲಾಧಿಕಾರಿಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆಯುವಂತೆ ಕೇಂದ್ರ ಸರಕಾರ ಸೂಚನೆಯನ್ನು ನೀಡಿದ್ದು, ನಿಯಮ ಪಾಲನೆ ಮಾಡದವರ ವಿರುದ್ದ ಕಠಿಣಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದೆ.

Leave A Reply

Your email address will not be published.