ಸಿಬಿಎಸ್‌ಇ 2026 ಪರೀಕ್ಷೆ ನಿಯಮದಲ್ಲಿ ಮಹತ್ವದ ಬದಲಾವಣೆ: ಯಾರಿಗೆ ಅನುಕೂಲ?

CBSE 2026 New Exam Rule: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ತನ್ನ ಪರೀಕ್ಷಾ ನೀತಿಯಲ್ಲಿ ಪ್ರಮುಖ ಬದಲಾವಣೆಯನ್ನು ತಂದಿದೆ. ಅದು 2025–2026 ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಲಿದೆ.

ಈ ಹೊಸ ನೀತಿಯನ್ನು ರಾಷ್ಟ್ರೀಯ ಶಿಕ್ಷಣ ನೀತಿ 2020 ರಿಂದ ಪ್ರೇರಣೆಗೊಂಡು ಈ ಬದಲಾವಣೆಯನ್ನು ಮಾಡಿದೆ. ಒಂದು ಶೈಕ್ಷಣಿಕ ವರ್ಷದಲ್ಲಿ ಎರಡು ಪರೀಕ್ಷೆಯನ್ನು ನಡೆಸುವ ಮೂಲಕ ವಿದ್ಯಾರ್ಥಿ ಸ್ನೇಹಿ ಶಿಕ್ಷಣ ಮಾದರಿಯನ್ನು ಸಿಬಿಎಸ್‌ಇ ಅಳವಡಿಸಿಕೊಳ್ಳಲು ಮುಂದಾಗಿದೆ.

ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಿ, ಶಿಕ್ಷಣದಲ್ಲಿ ಪ್ರಗತಿಯನ್ನು ಸಾಧಿಸುವ ಗುರಿಯನ್ನು ಹೊಂದುವುದು ಈ ನೀತಿಯ ಗುರಿಯಾಗಿದೆ.

ಈ ಹೊಸ ನೀತಿ ಏನೇನು ಒಳಗೊಂಡಿದೆ. ಯಾರು ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದು ಇತ್ಯಾದಿ ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಪ್ರಮುಖ ಬದಲಾವಣೆಗಳೇನು?

ಎರಡು ಅವಕಾಶ: ಸಿಬಿಎಸ್‌ಇ ಯಲ್ಲಿ ಈ ವರ್ಷದಿಂದ 2 ಬೋರ್ಡ್‌ ಪರೀಕ್ಷಾ ವಡೋಗಳಿರುತ್ತವೆ. ಮೊದಲನೇಯದು ಮುಖ್ಯ ಪರೀಕ್ಷೆ. ಅದನ್ನು ಫೆಬ್ರವರಿಯ ಮಧ್ಯದಲ್ಲಿ ನಡೆಸಲಾಗುತ್ತದೆ. ಎರಡನೇಯದು ಸುಧಾರಣಾ ಪರೀಕ್ಷೆ. ಅದನ್ನು ಮೇ ತಿಂಗಳಿನಲ್ಲಿ ನಡೆಸಲಾಗುತ್ತದೆ.

ಪಠ್ಯಕ್ರಮ : ಈ ಎರಡೂ ಪರೀಕ್ಷೆಗಳು ವರ್ಷದ ಸಂಪೂರ್ಣ ಪಠ್ಯವನ್ನು ಒಳಗೊಂಡಿರುತ್ತದೆ. ಪ್ರಶ್ನೆಪತ್ರಿಕೆ ಮಾದರಿ ಮತ್ತು ಅಂಕ ನೀಡುವ ರೀತಿ ಒಂದೇ ಆಗಿರುತ್ತದೆ.

ಇಂಟರ್ನಲ್‌ ಅಸೆಸ್ಮೆಂಟ್‌: ಇಂಟರ್ನಲ್‌ ಅಸೆಸ್ಮೆಂಟ್‌ ಪ್ರೊಜೆಕ್ಟ್‌, ಪ್ರಾಕ್ಟಿಕಲ್‌ ಇತ್ಯಾದಿ ಎಲ್ಲವನ್ನು ಒಂದು ಸಲ ಮಾತ್ರ ನಡೆಸಲಾಗುತ್ತದೆ. ಫೆಬ್ರವರಿಯಲ್ಲಿ ನಡೆಯುವ ಮುಖ್ಯ ಪರೀಕ್ಷೆಯ ಮೊದಲು ಅದನ್ನು ನಡೆಸಲಾಗುತ್ತದೆ.

ಫಲಿತಾಂಶ ದಿನಾಂಕ: ಮೊದಲ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್‌ನಲ್ಲಿ ಹಾಗೂ ಎರಡನೇ ಪರೀಕ್ಷೆಯ ಫಲಿತಾಂಶವನ್ನು ಜೂನ್‌ನಲ್ಲಿ ಬಿಡುಗಡೆಮಾಡಲಾಗುವುದು.

ಇದನ್ನೂ ಓದಿ: ದಸರಾ ರಜೆ : ಶಾಲೆಗೆ 13 ದಿನ, ಕಾಲೇಜಿಗೆ 8 ದಿನ ರಜೆ ಘೋಷಣೆ

ಎರಡನೇ ಪರೀಕ್ಷೆ ಯಾರು ತೆಗೆದುಕೊಳಬಹುದು?

ಯಾರು ಎರಡನೇ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ಎಂಬುದು ಬಹಳ ಮುಖ್ಯವಾದ ವಿಷಯವಾಗಿದೆ. ಇದರಲ್ಲಿ ಮೂರು ವಿಭಾಗಗಳನ್ನು ಸಿಬಿಎಸ್‌ಇ ಮಾಡಿದೆ. ಅದೇನೆಂದರೆ…

ಸುಧಾರಣಾ ವಿಭಾಗ: ವಿದ್ಯಾರ್ಥಿಯು ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದರೂ ಉತ್ತಮ ಅಂಕಗಳು ಬರದಿದ್ದರೆ, ಅವನ ಆಯ್ಕೆಯ 3 ವಿಷಯಗಳನ್ನು (ಗಣಿತ, ವಿಜ್ಞಾನ, ಸಾಮಾನ್ಯ ವಿಜ್ಞಾನ, ಇಂಗ್ಲಿಷ್‌ ಮತ್ತು ಹಿಂದಿ ಇವುಗಳಲ್ಲಿ 3) ಆಯ್ದುಕೊಂಡು ಪುನರಾವರ್ತನೆ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಕಂಪಾರ್ಟಮೆಂಟ್ ವಿಭಾಗ: ವಿದ್ಯಾರ್ಥಿಯು ಮೊದಲ ಮುಖ್ಯ ಪರೀಕ್ಷೆಯಲ್ಲಿ ಒಂದು ಅಥವಾ ಎರಡು ವಿಷಯದಲ್ಲಿ ಅನುತ್ತೀರ್ಣನಾಗಿದ್ದರೆ ಅವನು ಆ ವಿಷಯಗಳಿಗೆ ಪುನರಾವರ್ತನೆ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದು.

ವಿಶೇಷ ಪ್ರಕರಣಗಳು:‌ ವಿದ್ಯಾರ್ಥಿಯು ಕ್ರೀಡಾಕೂಟ ಅಥವಾ ಚಳಿಗಾಲದ ಶಾಲೆಗಳಿಂದ ಬಂದು ಪರೀಕ್ಷೆಯನ್ನು ತಪ್ಪಿಸಿಕೊಂಡಿದ್ದರೆ ವಿಶೇಷ ಪ್ರಕರಣದ ಅಡಿಯಲ್ಲಿ ಪುನರಾವರ್ತನೆ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

ಎರಡನೇ ಪರೀಕ್ಷೆಗೆ ಯಾರು ಅರ್ಹರಲ್ಲ?

ಒಬ್ಬ ವಿದ್ಯಾರ್ಥಿಯು ಮೊದಲ ಪರೀಕ್ಷೆಯಲ್ಲಿ 3 ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳ ಪರೀಕ್ಷೆ ತೆಗೆದುಕೊಳ್ಳದೇ ಉಳಿದರೆ ಅವನನ್ನು ಅಗತ್ಯ ಪುನರಾವರ್ತನೆ ಎಂದು ಘೋಷಿಸಲಾಗುತ್ತದೆ. ಆ ವಿದ್ಯಾರ್ಥಿಯು 2ನೇ ಪರೀಕ್ಷೆಯನ್ನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವನು ಮುಂದಿನ ವರ್ಷದವರೆಗೆ ಕಾಯಬೇಕಾಗುತ್ತದೆ.

ಅಂಕಪಟ್ಟಿ ಮತ್ತು ಉತ್ತೀರ್ಣ ಪ್ರಮಾಣ ಪತ್ರ ಯಾವಾಗ ನೀಡಲಾಗುತ್ತದೆ?

ಅಂಕಪಟ್ಟಿ ಮತ್ತು ಉತ್ತೀರ್ಣ ಪ್ರಮಾಣ ಪತ್ರವನ್ನು ಜೂನ್‌ನಲ್ಲಿ ಎರಡನೇ ಪರೀಕ್ಷೆಯ ಫಲಿತಾಂಶದ ನಂತರವೇ ನೀಡಲಾಗುತ್ತದೆ. ಆದರೆ ಮೊದಲ ಪರೀಕ್ಷೆಯ ನಂತರ ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಲಭ್ಯವಿರುತ್ತದೆ. ಅದನ್ನು ಮೊದಲ ಮುಖ್ಯ‍ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಹನ್ನೊಂದನೇ ತರಗತಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆಯು ಅನುಕೂಲಕರವಾಗಿದೆ.

ಇದನ್ನೂ ಓದಿ: ಎಂಎಸ್‌ಎಂಇ ಗಳ ಕಾರ್ಯಕ್ಷಮತೆ ಹೆಚ್ಚಿಸಿ, ಉದ್ಯಮ ವಿಸ್ತರಿಸಲು ಅರಿವು ಕಾರ್ಯಕ್ರಮ : ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

(Know the CBSE 2026 New Exam Rule how this new rule helpful for students)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories