ರಾಜ್ಯದಲ್ಲಿ ಆರೋಗ್ಯ ಸಂಜೀವಿನಿ ಯೋಜನೆ : ಆಸ್ಪತ್ರೆ ನೋಂದಣಿ ಅಧಿಕಾರ ಸುವರ್ಣ ಆರೋಗ್ಯ ಟ್ರಸ್ಟ್​ಗೆ ಹಸ್ತಾಂತರ

Sanjeevini Scheme: ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬಸ್ಥರ ಆರೋಗ್ಯ ರಕ್ಷಣೆಗಾಗಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿತ್ತು. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಹೆಸರಿನಲ್ಲಿ ನೋಂದಾಯಿತ ಆಸ್ಪತ್ರೆಗಳಲ್ಲಿ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬಸ್ಥರಿಗೆ ನಗದು ರಹಿತ ಚಿಕಿತ್ಸೆಯನ್ನು ಒದಗಿಸುವ ಯೋಜನೆಯು ಅಕ್ಟೋಬರ್​ 1 ರಿಂದ ಜಾರಿಗೆ ಬಂದಿದೆ.

ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬಸ್ಥರಿಗೆ ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ರಾಜ್ಯ ಸರ್ಕಾರದಿಂದ ರೂಪಿಸಲಾಗಿರುವ ಈ ಯೋಜನೆಯಡಿಯಲ್ಲಿ ಆಸ್ಪತ್ರೆಗಳನ್ನು ನೋಂದಾವಣೆಗೊಳಿಸುವ ಅಧಿಕಾರವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್​ಗೆ ನೀಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಈ ಯೋಜನೆಯ ಅಡಿಯಲ್ಲಿ ನೋಂದಾವಣಿಗೊಳಿಸಲು ಇಚ್ಛಿಸುವ ಖಾಸಗಿ ಆಸ್ಪತ್ರೆಗಳು ಹೊಂದಿರಬೇಕಾದ ಮೂಲಸೌಕರ್ಯ ಮತ್ತು ಇತರೆ ಮಾನದಂಡಗಳನ್ನು ಪರಿಶೀಲಿಸಿ ಆಸ್ಪತ್ರೆಗಳನ್ನು ಅಧಿಸೂಚಿಸಲು ಪ್ರಸ್ತುತ ಸುವರ್ಣ ಆರೋಗ್ಯ ಟ್ರಸ್ಟ್​ನಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿತ್ತು.

Also Read: ಡಯಟ್​ ಸೋಡಾ​ ಸೇವಿಸುವ ಅಭ್ಯಾಸ ಹೊಂದಿದ್ದೀರೇ : ಈ ಅಪಾಯಕಾರಿ ಅಂಶಗಳು ಗಮನದಲ್ಲಿರಲಿ

ಆದರೆ ಈ ಯೋಜನೆಯ ತ್ವರಿತ ಅನುಷ್ಠಾನ ಹಾಗೂ ಆಡಳಿತಾತ್ಮಕ ಹಿತದೃಷ್ಠಿಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯ ಅಡಿಯಲ್ಲಿ ಆಸ್ಪತ್ರೆಗಳನ್ನು ನೋಂದಣಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರ ಸುವರ್ಣ ಆರೋಗ್ಯ ಟ್ರಸ್ಟ್​ಗೆ ನೀಡಿದೆ.

ರಾಜ್ಯ ಸರ್ಕಾರಿ ನೌಕರರು ಹಾಗೂ ಅವಲಂಬಿತ ಕುಟುಂಬ ಸದಸ್ಯರಿಗಾಗಿ 1963ರ ವೈದ್ಯಕೀಯ ಹಾಜರಾತಿ ನಿಯಮಗಳನ್ವಯ ಕೆಲವೊಂದು ಇಲಾಖೆ ಹೊರತುಪಡಿಸಿ ಎಲ್ಲ ಸರಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರು ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯ ಪ್ರಯೋಜನ ಪಡೆದುಕೊಳ್ಳಲು ಅರ್ಹರಾಗಿದ್ದಾರೆ.

ಈ ಯೋಜನೆಯ ಸೇವೆ ಪಡೆಯುವುದು ರಾಜ್ಯ ಸರ್ಕಾರಿ ನೌಕರರ ಐಚ್ಛಿಕ ನಿರ್ಧಾರವಾಗಿದ್ದು, ಬೇಡ ಎನ್ನುವವರಿಗೆ ಈ ಯೋಜನೆಯಿಂದ ದೂರ ಉಳಿಯುವ ಅವಕಾಶವನ್ನೂ ರಾಜ್ಯ ಸರ್ಕಾರ ನೀಡಿದೆ.

ಈ ಯೋಜನೆಯಲ್ಲಿ ಉಳಿಯಲು ಇಚ್ಛಿಸುವ ರಾಜ್ಯ ಸರ್ಕಾರಿ ನೌಕರರಿಗೆ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತದೆ. ಸುಮಾರು 2000ಕ್ಕೂ ಅಧಿಕ ಕಾಯಿಲೆಗಳ ಚಿಕಿತ್ಸೆ ಈ ಯೋಜನೆಯ ವ್ಯಾಪ್ತಿಯಲ್ಲಿ ಬರಲಿದೆ.

Also Read: ಮಹಿಳೆಯರೇ ಕಾಫಿ ಸೇವನೆ ಮುನ್ನ ಎಚ್ಚರ : ಈ ಎಲ್ಲಾ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು

ಗ್ರೂಪ್‌- ಎ ವೃಂದಕ್ಕೆ ಮಾಸಿಕ 1000 ರೂ., ಗ್ರೂಪ್‌- ಬಿ 500 ರೂ., ಗ್ರೂಪ್‌- ಸಿ 350 ರೂ. ಹಾಗೂ ಗ್ರೂಪ್‌- ಡಿ ವೃಂದಕ್ಕೆ 250 ರೂ. ನಿಗದಿಪಡಿಸಲಾಗಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories