ಡಯಟ್​ ಸೋಡಾ​ ಸೇವಿಸುವ ಅಭ್ಯಾಸ ಹೊಂದಿದ್ದೀರೇ : ಈ ಅಪಾಯಕಾರಿ ಅಂಶಗಳು ಗಮನದಲ್ಲಿರಲಿ

Diet soda: ಆರೋಗ್ಯಕರ ಜೀವನಶೈಲಿಗಾಗಿ ಅನೇಕರು ಮಾರುಕಟ್ಟೆಗಳಲ್ಲಿ ಲಭ್ಯವಿರುವ ತಂಪು ಪಾನೀಯಗಳ ಸೇವನೆಯನ್ನು ತ್ಯಜಿಸುತ್ತಾರೆ. ಆದರೆ ಇಂಥವರನ್ನೇ ಗುರಿಯಾಗಿಸಿ ಮಾರುಕಟ್ಟೆಗಳಲ್ಲಿ ಡಯಟ್​ ಸೋಡಾಗಳನ್ನು ತರಲಾಗಿದೆ.

ಹೆಸರಲ್ಲೇ ಡಯಟ್​ ಎಂದು ಇರುವುದರಿಂದ ಫಿಟ್​ನೆಸ್​ ಪ್ರಿಯರು ಅತ್ಯಂತ ಸಂತೋಷದಿಂದ ಯಾವುದೇ ಬೇಸರವಿಲ್ಲದೇ ಡಯಟ್​ ಸೋಡಾವನ್ನು ಗಟ ಗಟ ಎಂದು ಗಂಟಲಿನೊಳಕ್ಕೆ ಇಳಿಸುತ್ತಾರೆ.

ಡಯಟ್​ ಸೋಡಾ ನಿಮಗೆ ಮೇಲ್ನೋಟಕ್ಕೆ ಆರೋಗ್ಯಕ್ಕೆ ಯಾವುದೇ ಹಾನಿ ಉಂಟುಮಾಡದಂತಹ ಪಾನೀಯ ಎಂದು ಎನಿಸಬಹುದು. ಆದರೆ ಇದರಿಂದ ದೇಹಕ್ಕಾಗುವ ಪರಿಣಾಮವನ್ನು ಕೇಳಿದರೆ ಖಂಡಿತ ಮೂಗಿನ ಮೇಲೆ ಬೆರಳಿಡುವುದು ಗ್ಯಾರಂಟಿ.

ಇದರಲ್ಲಿ ಬಳಕೆ ಮಾಡುವ ಕೃತಕ ಸಿಹಿಕಾರಕಗಳು ಹಾಗೂ ಕೆಮಿಕಲ್​ಗಳು ಆರೋಗ್ಯಕ್ಕೆ ದೊಡ್ಡ ಮಟ್ಟದಲ್ಲಿಯೇ ಹಾನಿಯುಂಟು ಮಾಡುತ್ತವೆ.

Also Read: ಮಹಿಳೆಯರೇ ಕಾಫಿ ಸೇವನೆ ಮುನ್ನ ಎಚ್ಚರ : ಈ ಎಲ್ಲಾ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು

ತೂಕ ಏರಿಕೆ ಅಪಾಯ : ಈ ಪಾನೀಯಗಳ ಮೇಲೆ ಝೀರೋ ಶುಗರ್​ ಎಂದು ಬರೆದಾಕ್ಷಣ ಅನೇಕರು ತೂಕ ಏರಿಕೆಯ ಅಪಾಯವಿಲ್ಲ ಎಂದು ಭಾವಿಸುತ್ತಾರೆ. ಆದರೆ ಈ ಸೋಡಾಗಳ ಸೇವನೆಯಿಂದ ನಿಮಗೆ ಇನ್ನಷ್ಟು ಸಿಹಿ ಪದಾರ್ಥಗಳನ್ನು ಸೇವನೆ ಮಾಡಬೇಕು ಎನ್ನುವ ಕಡುಬಯಕೆ ಉಂಟಾಗುತ್ತದೆ. ಇದರಿಂದ ನಾವು ಜಾಸ್ತಿ ತಿನ್ನುತ್ತೇವೆ , ಹಾಗೂ ತೂಕ ಏರಿಕೆ ಉಂಟಾಗುತ್ತದೆ.

ಹೃದ್ರೋಗ ಸಮಸ್ಯೆಗಳು : ಅಧ್ಯಯನಗಳು ನೀಡಿರುವ ಮಾಹಿತಿಯ ಪ್ರಕಾರ ಡಯಟ್​ ಸೋಡಾಗಳ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯವಿದೆ ಎಂದು ಭಾವಿಸಲಾಗಿದೆ. ಇದರಲ್ಲಿ ಬಳಕೆ ಮಾಡುವ ಕೃತಕ ಸಿಹಿಕಾರಕಗಳು ಹೃದಯಕ್ಕೆ ಅಪಾಯ ತಂದೊಡುತ್ತವೆ.

ಟೈಪ್​ 2 ಮಧುಮೇಹ : ಕೃತಕ ಸಿಹಿಕಾರಕಗಳು ಇನ್ಸುಲಿನ್​ಗಳ ಮೇಲೆ ಪ್ರಭಾವ ಬೀರುವುದರಿಂದ ಟೈಪ್​ 2 ಮಧುಮೇಹ ಸಂಭವಿಸುವ ಅಪಾಯ ಇರುತ್ತದೆ. ದೀರ್ಘಕಾಲದವರೆಗೆ ಡಯಟ್​ ಸೋಡಾ ಸೇವನೆ ಮಾಡುವವರು ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆ ಜಾಸ್ತಿಯಿದೆ.

ಜೀರ್ಣಕ್ರಿಯೆ ಸಮಸ್ಯೆ : ಕೃತಕ ಸಿಹಿಕಾರಕಗಳನ್ನು ಹೊಂದಿರುವ ಡಯಟ್​ ಸೋಡಾಗಳು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟಿರಿಯಾಗಳಿಗೆ ತೊಂದರೆಯುಂಟು ಮಾಡಬಹುದು. ಇದರಿಂದ ಜೀರ್ಣ ಕ್ರಿಯೆ ಸಂಬಂಧಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಮೂತ್ರಪಿಂಡಗಳ ಸಮಸ್ಯೆ : ಅತಿಯಾದ ಡಯಟ್​ ಸೋಡಾ ಸೇವನೆಯು ಮೂತ್ರಪಿಂಡಗಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಸೋಡಾಗಳಲ್ಲಿ ಬಳಸಲಾದ ಕೆಮಿಕಲ್​ಗಳನ್ನು ಫಿಲ್ಟರ್​ ಮಾಡಲು ಕಿಡ್ನಿ ಹೆಚ್ಚು ಒತ್ತಡದಿಂದ ಕಾರ್ಯ ನಿರ್ವಹಿಸಬೇಕಾಗಿ ಬರುತ್ತದೆ.

Also Read: ರಾತ್ರಿ ಹೊತ್ತು ಡಾರ್ಕ್ ಚಾಕಲೇಟ್​ ತಿನ್ನುವುದು ಆರೋಗ್ಯಕ್ಕೆ ಹಾನಿಕಾರವೇ : ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಮೂಳೆಗಳ ಸಾಮರ್ಥ್ಯ ಕುಗ್ಗುತ್ತದೆ : ಡಯಟ್​ ಸೋಡಾಗಳಲ್ಲಿ ಬಳಕೆ ಮಾಡುವ ಫೋಸ್ಪೋರಿಕ್ ಆ್ಯಸಿಡ್​ಗಳಿಂದ ಮೂಳೆಗಳ ಸಾಮರ್ಥ್ಯ ಕುಗ್ಗುತ್ತದೆ. ಇದರಿಂದ ಮೂಳೆ ಮುರಿತದ ಅಪಾಯ ಜಾಸ್ತಿ ಇರುತ್ತದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories