Weight Gain Tips : ನೀವು ತುಂಬಾ ತೆಳ್ಳಗಿದ್ದೀರಾ; ಹಾಗಾದರೆ ಈ ಸೂಪರ್‌ ಫುಡ್‌ಗಳನ್ನು ತಿನ್ನಿ

ಕೆಲವರು ತಾವು ತುಂಬಾ ದಪ್ಪಗಿದ್ದೇವೆ ಎಂದು ಚಿಂತಿಸುತ್ತಾರೆ. ತೂಕ ಇಳಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ಇನ್ನು ಕೆಲವರು ತುಂಬಾ ತೆಳ್ಳಗಿದ್ದೇವೆ ಎಂದು ತೂಕ ಹೆಚ್ಚಿಸಿಕೊಳ್ಳಲು ಶ್ರಮಿಸುತ್ತಾರೆ (Weight Gain Tips). ಕಡಿಮೆ ತೂಕದಿಂದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಕಡಿಮೆ ಶಕ್ತಿ ಮತ್ತು ಪೋಷಕಾಂಶಗಳ ಕೊರತೆಯಿಂದ ಬಹು ಬೇಗನೆ ಆಯಾಸಗೊಳ್ಳುತ್ತಾರೆ. ಓದು, ಆಟ ಅಥವಾ ಕೆಲಸ ಎಲ್ಲದರಲ್ಲಿಯೂ ಆಸಕ್ತಿಯ ಕೊರತೆ ಅವರಲ್ಲಿ ಕಾಣಿಸುತ್ತದೆ. ಅದಕ್ಕಾಗಿ ಸರಿಯಾದ ತೂಕವನ್ನು ಹೊಂದುವುದು ಅತಿ ಅವಶ್ಯಕವಾಗಿದೆ. ಕೆಲವು ಆಹಾರಗಳು ತೂಕವನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯವನ್ನು ಕಾಪಾಡುತ್ತವೆ. ಅವುಗಳಲ್ಲಿ ಡೈರಿ ಉತ್ಪನ್ನಗಳು, ಬೆಲ್ಲ, ಶೇಂಗಾ, ಬಾದಾಮಿ ಮುಂತಾದವುಗಳು ಉತ್ತಮವಾಗಿದೆ.

ತುಪ್ಪ ಮತ್ತು ಬೆಲ್ಲವನ್ನು ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನವಿದೆ. ತುಪ್ಪ ಮತ್ತು ಬೆಲ್ಲವನ್ನು ಒಟ್ಟಿಗೆ ಸೇವಿಸುವುದರಿಂದ ದೇಹದ ತೂಕವು ಹೆಚ್ಚಾಗುತ್ತದೆ. ಬೆಲ್ಲದಲ್ಲಿ ಸಾಕಷ್ಟು ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿ ಗಳಿರುತ್ತವೆ. ಇವುಗಳು ಆರೋಗ್ಯಕ್ಕೆ ಉತ್ತಮವಾಗಿದೆ. ಇನ್ನು ತುಪ್ಪ ಇದರಲ್ಲಿ ವಿಟಮಿನ್‌ A, K ಮತ್ತು D ಗಳಿರುತ್ತವೆ. ಇವು ದೇಹಕ್ಕೆ ಬಹಳ ಪ್ರಯೋಜನವನ್ನು ನೀಡುತ್ತದೆ.

ದೇಹದ ತೂಕ ಹೆಚ್ಚಿಸಿಕೊಳ್ಳಲು ಸಹಾಯ ಮಾಡುವು ಆಹಾರಗಳು :

  • ಅನ್ನದ ಜೊತೆ ತುಪ್ಪ ಸೇರಿಸಿ ಊಟ ಮಾಡುವುದರಿಂದ ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳಬಹುದು.
  • ತುಪ್ಪ ಮತ್ತು ಬೆಲ್ಲವನ್ನು ಸೇರಿಸಿ ತಿನ್ನುವುದು ತೂಕ ಏರಿಕೆಗೆ ಸಹಕಾರಿಯಾಗಿದೆ.
  • ಹಾಲು ಒಂದು ಸಂಪೂರ್ಣ ಆಹಾರ. ಇದರಲ್ಲಿ ಕಾರ್ಬೋಹೈಡ್ರೇಟ್‌, ಪ್ರೋಟೀನ್‌ ಮತ್ತು ಫ್ಯಾಟ್‌ ಗಳು ಇರುವುದರಿಂದ ತೂಕ ಹೆಚ್ಚಿಸಿಕೊಳ್ಳಲು ಉತ್ತಮವಾಗಿದೆ.
  • ಪ್ರತಿದಿನ ಓಟ್ಸ್‌ ಸೇವನೆಯು ತೂಕ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.
  • ಶೇಂಗಾದಲ್ಲಿ ಪ್ರೋಟೀನ್‌ ಇರುವುದರಿಂದ ತೂಕ ಹೆಚ್ಚಾಗಲು ಉಪಯುಕ್ತವಾಗಿದೆ.
  • ಬಾದಾಮಿಯಲ್ಲಿ ಕ್ಯಾಲೋರಿ ಮತ್ತು ಫ್ಯಾಟ್‌ ಅಧಿಕವಾಗಿದೆ.

ಇದನ್ನೂ ಓದಿ : Banana Stem Recipe:ದೇಹದ ಹಲವು ಸಮಸ್ಯೆ ನಿವಾರಣೆ ಮಾಡುವ ಬಾಳೆ ದಿಂಡಿನ ದೋಸೆ

ಇದನ್ನೂ ಓದಿ : Winter And Sesame Seeds : ಚಳಿಗಾಲದಲ್ಲಿ ಎಳ್ಳನ್ನು ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…

ಇದನ್ನೂ ಓದಿ : Amla Murabba Recipe:ನೆಲ್ಲಿಕಾಯಿ ಮುರಬ್ಬ ತಿಂದ್ರೆ ಹೆಚ್ಚುತ್ತೆ ರೋಗ ನಿರೋಧಕ ಶಕ್ತಿ

(Weight Gain Tips these foods are helpful for increasing weight)

Comments are closed.