ವಿದೇಶದಲ್ಲಿ ಪುರುಷನ ಲೈಂಗಿಕ ದೌರ್ಜನ್ಯವೆಸಗಿ ಜೈಲುಪಾಲಾದ ಭಾರತೀಯ ವ್ಯಕ್ತಿ

sexually assault: ಸಿಂಗಾಪುರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ಆರೋಪದಲ್ಲಿ ಒಂದೂವರೆ ವರ್ಷಗಳ ಕಾಲ ಜೈಲುಶಿಕ್ಷೆಗೆ ಒಳಗಾಗಿದ್ದಾರೆ. ಜೂನ್​ ತಿಂಗಳಲ್ಲಿ 34 ವರ್ಷದ ಎಲಿಪಿ ಶಿವಾ ನಾಗು ಎಂಬಾತ ರ‍್ಯಾಫೆಲ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ.

ಈ ಘಟನೆ ನಡೆಯುತ್ತಿದ್ದಂತೆಯೇ ಆತನನ್ನು ಆಸ್ಪತ್ರೆಯ ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು ಕೋರ್ಟಿನಲ್ಲಿ ಆರೋಪಿಯು ತಾನು ರೋಗಿಗೆ ಸೋಂಕು ರಹಿತಗೊಳಿಸಲು ಬಯಸಿದ್ದೆ. ಲೈಂಗಿಕ ಕಿರುಕುಳ ನೀಡುವ ಉದ್ದೇಶ ತನ್ನದಾಗಿರಲಿಲ್ಲ ಎಂದು ವಾದಿಸಿದ್ದ ಎನ್ನಲಾಗಿದೆ.

ಸಂತ್ರಸ್ತ ವ್ಯಕ್ತಿಯು ಜೂನ್​ 18ರಂದು ನಾರ್ತ್ ಬ್ರಿಡ್ಜ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ತಾತನನ್ನು ಭೇಟಿ ಮಾಡಲು ಬಂದಿದ್ದರು ಎನ್ನಲಾಗಿದೆ.ಸಂಜೆ 7:30ರ ಸುಮಾರಿಗೆ ಸಂತ್ರಸ್ತ ವ್ಯಕ್ತಿಯು ತನ್ನ ತಾತ ಚಿಕಿತ್ಸೆ ಪಡೆಯುತ್ತಿದ್ದ ಕೋಣೆಯಲ್ಲಿದ್ದ ಶೌಚಾಲಯದ ಒಳಗೆ ತೆರಳಿದ್ದಾರೆ. ಅವರು ಶೌಚಾಲಯ ಬಳಸುತ್ತಿರುವುದನ್ನು ಆರೋಪಿ ಎಲಿಪೆ ಕದ್ದು ನೋಡಿದ್ದಾರೆ.

Also Read: ಪೊಲೀಸ್​ ಅಧಿಕಾರಿಯಿಂದ ಸರ್ಕಾರಿ ವೈದ್ಯೆ ಮೇಲೆ ನಿರಂತರ ಅತ್ಯಾ*ಚಾರ : ಅಂಗೈಯಲ್ಲಿ ಡೆತ್​ ನೋಟ್​ ಬರೆದು ಸಂತ್ರಸ್ತೆ ಸಾವು

ನಾನು ನಿನ್ನನ್ನು ಸೋಂಕು ರಹಿತಗೊಳಿಸುತ್ತೇನೆ ಎಂದು ಸಂತ್ರಸ್ತ ವ್ಯಕ್ತಿಗೆ ತಿಳಿಸಿ ಕೈಗೆ ಸೋಪನ್ನು ಹಚ್ಚಿಕೊಂಡು ಸಂತ್ರಸ್ತ ವ್ಯಕ್ತಿಯ ಖಾಸಗಿ ಅಂಗಾಗಳನ್ನು ಮುಟ್ಟುವ ಮೂಲಕ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ.

ಈ ಘಟನೆಯಿಂದ ಮಾನಸಿಕ ಆಘಾತಕ್ಕೆ ಒಳಗಾಗಿದ್ದ ಸಂತ್ರಸ್ತನು ಕೆಲ ಕಾಲ ನಿಂತ ಜಾಗದಿಂದ ಕದಲಿರಲಿಲ್ಲ. ಬಳಿಕ ತನ್ನ ತಾತ ಇದ್ದ ಹಾಸಿಗೆ ಬಳಿ ಮರಳಿ ಬಂದಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿ ಪರ ವಕೀಲರು ಕೋರ್ಟ್​ಗೆ ತಿಳಿಸಿದ್ದಾರೆ.

ವಾದ – ವಿವಾದ ಯಾವ ರೀತಿಯಲ್ಲಿ ನಡೆಯಿತು ಎಂಬುದರ ಸಂಪೂರ್ಣ ಮಾಹಿತಿಯನ್ನು ಕೋರ್ಟ್ ಬಹಿರಂಗಪಡಿಸಿಲ್ಲ. ಆದರೆ ಈ ಘಟನೆ ನಡೆದ 2 ದಿನಗಳ ಬಳಿಕ ಆರೋಪಿ ಎಲಿಪೆಯನ್ನು ಪೊಲೀಸರು ಬಂಧಿಸಿದ್ದರು.

ವಾದ – ವಿವಾದಗಳನ್ನು ಆಲಿಸಿದ ನ್ಯಾಯಾಲಯವು ಈ ಪ್ರಕರಣದಲ್ಲಿ ಎಲಿಪೆ ತಪ್ಪಿತಸ್ಥ ಎಂದು ಘೋಷಿಸಿ 1 ವರ್ಷ 2 ರತಿಂಗಳುಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಆಸ್ಪತ್ರೆ ಆಡಳಿತ ಮಂಡಳಿ ಕೂಡ ಆಸ್ಪತ್ರೆಗೆ ಭೇಟಿ ನೀಡಿದವರೊಂದಿಗೆ ಅನುಚಿತ ವರ್ತನೆ ಕಾರಣ ನೀಡಿ ಈತನನ್ನು ಆಸ್ಪತ್ರೆಯ ಸೇವೆಯಿಂದ ಅಮಾನತುಗೊಳಿಸಿ ನೋಟಿಸ್​ ನೀಡಿದೆ.

Also Read: ಶಾಲಾ ಸಮವಸ್ತ್ರದಲ್ಲೇ ಸಾರಾಯಿ ಅಂಗಡಿಗೆ ತೆರಳಿ ಮದ್ಯ ಖರೀದಿಸಿದ ವಿದ್ಯಾರ್ಥಿನಿಯರು..!

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories