ನಿಲ್ಲದ ಅಮೆರಿಕ-ಇರಾನ್ ಯುದ್ಧ: ಗಗನಕ್ಕೇರಿದ ಕಚ್ಛಾತೈಲ ದರ; ಭಾರತೀಯರಿಗೆ ಕಾದಿದೆ ಇಂಧನ ದರ ಏರಿಕೆ ಗಂಡಾಂತರ!
ಅಮೆರಿಕ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಸಂಘರ್ಷಗಳು ಜಾಗತಿಕ ಮಾರುಕಟ್ಟೆಯ ಮೇಲೆ ಮೇಲಿಂದ ಮೇಲೆ ಪೆಟ್ಟು ನೀಡುತ್ತಲೇ ಇದೆ.

ಅಮೆರಿಕ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಸಂಘರ್ಷಗಳು ಜಾಗತಿಕ ಮಾರುಕಟ್ಟೆಯ ಮೇಲೆ ಮೇಲಿಂದ ಮೇಲೆ ಪೆಟ್ಟು ನೀಡುತ್ತಲೇ ಇದೆ. ಎರಡೂ ದೇಶದ ನಡುವಿನ ಯುದ್ಧದ ಕಾರ್ಮೋಡ ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದ್ದು,ದಿನದಿಂದ ದಿನಕ್ಕೆ ಒಂದೊಂದೇ ದಿನಬಳಕೆ ವಸ್ತುವಿನ ಬೆಲೆ ಏರಿಕೆಯಾಗುತ್ತಿದ್ದು, ಆತಂಕ ಹೆಚ್ಚಿದೆ .
ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ಎಂಬಂತೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ಇದು ಭಾರತೀಯ ಆರ್ಥಿಕತೆಯ ಮೇಲೂ ಬಹುದೊಡ್ಡ ಪೆಟ್ಟು ನೀಡಲಿದ್ದು, ಶೀಘ್ರದಲ್ಲಿಯೇ ಪೆಟ್ರೋಲ್, ಡೀಸೆಲ್ ಸೇರಿದಂತೆ ಇಂಧನೋತ್ಪನ್ನಗಳ ಬೆಲೆ ಗಗನಕ್ಕೇರುವುದು ಪಕ್ಕಾ ಎಂದು ಆರ್ಥಿಕ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಧೂಮಪಾನಿಗಳಿಗೆ ಬಿಗ್ ಶಾಕ್: ಕೇಂದ್ರದ ಸುಂಕದ ಎಫೆಕ್ಟ್, ಸಿಗರೇಟ್ ಬೆಲೆ ಶೇ. 21ರಷ್ಟು ಭಾರಿ ಏರಿಕೆ!
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲದ ಪೂರೈಕೆಯಲ್ಲಿ ಉಂಟಾಗಿರುವ ಅಭಾವವೇ ಇದಕ್ಕೆ ಕಾರಣ ಎನ್ನಲಾಗಿದೆ. ಪ್ರಸ್ತುತ ಒಂದು ಬ್ಯಾರಲ್ ಕಚ್ಚಾ ತೈಲದ ದರ 110 ಡಾಲರ್ ತಲುಪಿದೆ. ಯುದ್ಧದ ತೀವ್ರತೆ ಹೆಚ್ಚಾದಷ್ಟೂ ತೈಲ ಉತ್ಪಾದನೆ ಮತ್ತು ಸಾಗಣೆಗೆ ಅಡಚಣೆಯಾಗಲಿದ್ದು, ಭವಿಷ್ಯದಲ್ಲಿ ಈ ದರ ಮತ್ತಷ್ಟು ಹೆಚ್ಚಾಗಬಹುದು ಎಂದು ಜಾಗತಿಕ ತೈಲ ಮಾರುಕಟ್ಟೆ ತಜ್ಞರು ಮಾಹಿತಿ ನೀಡಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಈ ಬದಲಾವಣೆಯ ನೇರ ಪರಿಣಾಮ ಭಾರತದ ಮೇಲೆ ಬೀರಲಿದೆ. ಭಾರತವು ಕಚ್ಚಾ ತೈಲದ ವಿಚಾರದಲ್ಲಿ ಶೇಕಡಾ 80ರಷ್ಟು ವಿದೇಶವನ್ನೇ ಅವಲಂಬಿಸಿದೆ. ಆದರೆ ಇದೀಗ ಜಾಗತಿಕ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲದ ದರ ಮಿತಿಮೀರಿರುವದರಿಂದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಶೀಘ್ರದಲ್ಲೇ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ : ಕುಂದಾಪುರ: ಹಳೇ ದ್ವೇಷ ಯುವಕನ ಮೇಲೆ ಸೋಡಾ ಬಾಟಲಿ, ಹೆಲ್ಮೆಟ್‌ನಿಂದ ಹಲ್ಲೆ
ಕೇವಲ ಪೆಟ್ರೋಲ್, ಡೀಸೆಲ್ ಮಾತ್ರವಲ್ಲ. ಸರಕು ಸಾಗಣೆಗಳ ವೆಚ್ಚ ಕೂಡ ಹೆಚ್ಚುವುದರಿಂದ, ಪ್ರತಿಯೊಂದು ವಸ್ತುವಿನ ದರವೂ ಹೆಚ್ಚಲಿದೆ. ಇದರಿಂದ ಜನಸಾಮಾನ್ಯರಿಗೆ ದಿನನಿತ್ಯದ ಜೀವನೇ ದುಬಾರಿ ಎನಿಸಲಿದೆ. ಅಮೆರಿಕ – ಇರಾನ್ ನಡುವಿನ ಯುದ್ಧದ ಕಾರ್ಮೋಡ ಕವಿಯದ ಹೊರತು ದೇಶದ ಜನತೆಗೆ ಸಂಕಷ್ಟವಂತೂ ತಪ್ಪಿದ್ದಲ್ಲ.



