ಯುದ್ಧಕ್ಕೆ ತಯಾರಾಗುತ್ತಿದೆಯಾ ಚೀನಾ : ಭಾರತೀಯ ಗಡಿ ಬಳಿ ಹೊಸ ವಾಯು ರಕ್ಷಣಾ ತಾಣ ನಿರ್ಮಿಸಿದೆ ಡ್ರ್ಯಾಗನ್ ರಾಷ್ಟ್ರ
Dragon Nation: 2020ರಲ್ಲಿ ಭಾರತ ಹಾಗೂ ಚೀನಾ ನಡುವೆ ಸಂಭವಿಸಿದ ಗಡಿ ಸಂಘರ್ಷದ ಸ್ಥಳದಿಂದ ಸುಮಾರು 110 ಕಿಲೋ ಮೀಟರ್ ದೂರದಲ್ಲಿರುವ ಟಿಬೆಟ್ನ ಪ್ಯಾಂಗೊಂಗ್ ಸರೋವರದ ಪೂರ್ವ ಭಾಗದ ದಡದಲ್ಲಿ ಚೀಮಾ ಹೊಸ ವಾಯು ರಕ್ಷಣಾ ಸಂಕೀರ್ಣ ನಿರ್ಮಿಸುತ್ತಿದ್ದು ಉಪಗ್ರಹದ ಚಿತ್ರಗಳು ವೈರಲ್ ಆಗಿದೆ. ಇಲ್ಲಿ ಕಮಾಂಡ್, ಕಂಟ್ರೋಲ್ ಕಟ್ಟಡ, ಬ್ಯಾರಕ್ಗಳು, ವಾಹನ ಶೆಡ್ಗಳು, ಯುದ್ಧ ಸಾಮಗ್ರಿ ಸಂಗ್ರಹಣೆ ಹಾಗೂ ರಾಡಾರ್ಗಳು ಸೇರಿವೆ.
ಓಪನ್ ಸೋರ್ಸ್ ಗುಪ್ತಚರ ಸಂಸ್ಥೆ ಡಿ ಎಟ್ರೆಸ್ಪಾ ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಗಡಿ ವಿವಾದಗಳು ತಣ್ಣಗಾದ ಬೆನ್ನಲ್ಲೇ ಭಾರತ ಹಾಗೂ ಚೀನಾ ಸ್ನೇಹ ಹಸ್ತ ಚಾಚಿದ್ದವು.
ಆದರೆ ಈ ಬೆನ್ನಲ್ಲೇ ಚೀನಾ ತನ್ನ ಗಡಿಭಾಗವನ್ನು ಬಲಪಡಿಸುತ್ತಿರುವುದನ್ನು ನೋಡುತ್ತಿದ್ದರೆ ಬೆನ್ನ ಹಿಂದೆ ಚೂರಿ ಹಾಕುವ ಕಾರ್ಯಕ್ಕೆ ಹುನ್ನಾರ ನಡೆಸಿದೆಯಾ ಎಂಬ ಅನುಮಾನ ಬಲವಾಗುತ್ತಿದೆ.
Also Read: Russia Coup: ರಷ್ಯಾ ಮತ್ತೆ ಛಿದ್ರ ಛಿದ್ರ? ಮತ್ತೊಂದು ದಂಗೆಯ ಭೀತಿಯಲ್ಲಿ ವ್ಲಾಡಿಮಿರ್ ಪುಟಿನ್
ಗುಪ್ತಚರ ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ ಚೀನಾವು ಗಡಿಯಲ್ಲಿ ದೀರ್ಘ-ಶ್ರೇಣಿಯ HQ-9 ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ (SAM) ವ್ಯವಸ್ಥೆಗಳನ್ನು ನಿರ್ಮಿಸಿಕೊಂಡಿದ್ದು ಇವುಗಳಿಗೆ ಮರೆಮಾಚುವಿಕೆ ಮತ್ತು ರಕ್ಷಣೆಯನ್ನು ಒದಗಿಸಬಹುದು ಎನ್ನಲಾಗಿದೆ.
ಇವುಗಳನ್ನು ಮೊಟ್ಟ ಮೊದಲ ಬಾರಿಗೆ ಅಮೆರಿಕ ಮೂಲದ ಭೂ-ಗುಪ್ತಚರ ಸಂಸ್ಥೆ ಆಲ್ಸೋರ್ಸ್ ಅನಾಲಿಸಿಸ್ನ ಸಂಶೋಧಕರು ಗುರುತಿಸಿದ್ದಾರೆ, ಅವರು ಗಾರ್ ಕೌಂಟಿಯಲ್ಲಿ ಈ ಸಂಕೀರ್ಣದ ಪ್ರತಿಕೃತಿಯನ್ನು ಗಮನಿಸಿದರು, ಇದು ವಾಸ್ತವಿಕ ನಿಯಂತ್ರಣ ರೇಖೆಯಿಂದ (LAC) ಸರಿಸುಮಾರು 65 ಕಿ.ಮೀ ದೂರದಲ್ಲಿದೆ, ಇದು ಭಾರತದ ಇತ್ತೀಚೆಗೆ ನವೀಕರಿಸಿದ ನ್ಯೋಮಾ ವಾಯುನೆಲೆಗೆ ನೇರವಾಗಿ ಎದುರಾಗಿರುತ್ತದೆ.
ಅಮೆರಿಕ ಮೂಲದ ಬಾಹ್ಯಾಕಾಶ ಗುಪ್ತಚರ ಕಂಪನಿ ವ್ಯಾಂಟರ್ ಒದಗಿಸಿರುವ ಚಿತ್ರಣಗಳ ಪ್ರಕಾರ ಕ್ಷಿಪಣಿ ಉಡಾವಣಾ ಕೊಲ್ಲಿಗಳ ರೀತಿ ಕಾಣುವ ವ್ಯವಸ್ಥೆಯ ಮೇಲೆ ಜಾರುವ ಛಾವಣಿಗಳನ್ನು ನಿರ್ಮಿಸಲಾಗಿದೆ, ಪ್ರತಿಯೊಂದೂ ಎರಡು ವಾಹನಗಳಿಗೆ ಸ್ಥಳಾವಕಾಶ ಕಲ್ಪಿಸುವಷ್ಟು ದೊಡ್ಡದಾಗಿದೆ ಎಂದು ತಿಳಿದುಬಂದಿದೆ.
Also Read : ಮತ್ತೊಂದು ಕಳಂಕ ಹೊತ್ತುಕೊಂಡ ಪಾಕಿಸ್ತಾನ : ವಿಶ್ವದ ಅತ್ಯಂತ ಕಲುಷಿತ ನಗರಿ ಎಂಬ ಹಣೆಪಟ್ಟಿ
ಗಡಿಯಲ್ಲಿ ಚೀನಾದ ಈ ನಡೆಯು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು ಭಾರತೀಯ ಸೇನೆಯು ಇವುಗಳನ್ನುಎದರಿಸಲು ಸಿದ್ಧವಾಗುತ್ತಿದೆ.



