ಮತ್ತೊಂದು ಕಳಂಕ ಹೊತ್ತುಕೊಂಡ ಪಾಕಿಸ್ತಾನ : ವಿಶ್ವದ ಅತ್ಯಂತ ಕಲುಷಿತ ನಗರಿ ಎಂಬ ಹಣೆಪಟ್ಟಿ

Pakistan Air Pollution: ಅದ್ಯಾಕೋ ಗೊತ್ತಿಲ್ಲ.. ಪಾಕಿಸ್ತಾನ ತನ್ನ ಇತಿಹಾಸದಲ್ಲಿ ಒಳ್ಳೆಯ ಕೆಲಸಗಳಿಗಾಗಿ ಸುದ್ದಿಯಾಗೋದೇ ಇಲ್ಲ.. ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ರಾಜಧಾನಿ ಲಾಹೋರ್​​ ಇದೀಗ ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಸ್ಥಾನ ಪಡೆದುಕೊಂಡಿದೆ. ಮಾಲಿನ್ಯಕಾರಕ ಹೊಗೆಯು ಸಂಪೂರ್ಣ ನಗರವನ್ನೇ ಉಸಿರುಗಟ್ಟಿಸುವಂತೆ ಮಾಡಿದ್ದು 14 ಮಿಲಿಯನ್​ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ.

ಲಾಹೋರ್​ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 412 US ಎಂದು ದಾಖಲಾಗಿದ್ದು ಇದನ್ನು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. PM2.5 ಮಟ್ಟವು ವಿಶ್ವ ಆರೋಗ್ಯ ಸಂಸ್ಥೆಯ (WHO) ವಾರ್ಷಿಕ ಮಾರ್ಗಸೂಚಿ ಮೌಲ್ಯಕ್ಕಿಂತ 56.2 ರಷ್ಟು ಹೆಚ್ಚಾಗಿದೆ ಎಂದು ವಾಯು ಗುಣಮಟ್ಟ ಮೇಲ್ವಿಚಾರಣಾ ವೇದಿಕೆ IQAir ನ ದತ್ತಾಂಶವು ತೋರಿಸಿದೆ.

ಚಳಿಗಾಲದ ಆರಂಭದಲ್ಲಿ ಲಾಹೋರ್​ನಲ್ಲಿ ಕಳೆದ ಅನೇಕ ವರ್ಷಗಳಿಂದ ವಾಯು ಮಾಲಿನ್ಯ ಸಮಸ್ಯೆ ತಲೆದೋರುತ್ತದೆ. ಈ ಸಮಯದಲ್ಲಿ ಕಡಿಮೆ ತಾಪಮಾನ, ಕಡಿಮೆ ವೇಗದ ಗಾಳಿ ಮತ್ತು ವಾಹನಗಳು, ಕಾರ್ಖಾನೆಗಳಿಂದ ಮಾಲಿನ್ಯಕಾರಕ ಹೊಗೆ ಹೊರಸೂಸುವಿಕೆಯ ಪರಿಣಾಮವಾಗಿ ವಾಯು ಮಾಲಿನ್ಯ ಉಂಟಾಗುತ್ತದೆ.

Also Read: ಒಮಾನ್‌ನಲ್ಲಿ ವಿಜೃಂಭಣೆಯ 41ನೇ ವರ್ಷದ ಗಣೇಶೋತ್ಸವ

ಶುಕ್ರವಾರದಂದು ಲಾಹೋರ್​ನಲ್ಲಿ ವಾಯುಗುಣಮಟ್ಟ 362 ಎಕ್ಯೂಐ ದಾಖಲಾಗಿತ್ತು. ಇದನ್ನು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಪೂರ್ವ ಪಂಜಾಬ್​ ಭಾಗಗಳಲ್ಲಿ ಈ ಮಾಲಿನ್ಯವೂ ಇನ್ನೂ ಕೆಲದಿನಗಳ ಕಾಲ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ. ಎಲ್ಲೆಡೆ ದಟ್ಟ ಮಂಜು ಕವಿದ ವಾತಾವರಣವಿದ್ದು ಇದು ಉಸಿರಾಟಕ್ಕೆ ಯೋಗ್ಯವಲ್ಲ ಎಂದು ಪಾಕಿಸ್ತಾನ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ವಾಹನಗಳು ಮತ್ತು ಕಾರ್ಖಾನೆಗಳಿಂದ ಹೊರಸೂಸುವ ಹೊಗೆಯೇ ವಿಷಕಾರಿ ಹೊಗೆಗೆ ಪ್ರಮುಖ ಕಾರಣ ಎಂದು ಹವಾಮಾನ ಇಲಾಖೆ ಗುರುತಿಸಿದೆ. ಮಕ್ಕಳು, ವೃದ್ಧರು ಮತ್ತು ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಉಸಿರಾಟದ ಕಾಯಿಲೆಗಳಿಗೆ ತುತ್ತಾಗುವ ಅಪಾಯದಲ್ಲಿದ್ದಾರೆ ಎಂದು ಹವಾಮಾನ ಇಲಾಖೆ ಕಳವಳ ವ್ಯಕ್ತಪಡಿಸಿದೆ.

ಆದರೆ ಭಾರತೀಯರ ದೀಪಾವಳಿ ಸಂಭ್ರಮದಿಂದಲೇ ಇಲ್ಲಿ ಇಂತಹ ಪರಿಸ್ಥಿತಿ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Also Read: ಜಪಾನಿನ ಅತ್ಯಂತ ಹಿರಿಯ ಜೀವಂತ ವ್ಯಕ್ತಿ ಇವರೇ ನೋಡಿ ! ವಯಸ್ಸು ಕೇಳಿದ್ರೆ ಶಾಕ್ ಆಗ್ತೀರಿ !

ಪಂಜಾಬ್ ಪ್ರಾಂತೀಯ ಸರ್ಕಾರವು ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ನಿಭಾಯಿಸಲು ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿಷೇಧಿಸುವುದು, ಪ್ರಾಂತ್ಯದಾದ್ಯಂತ ಇಟ್ಟಿಗೆ ಗೂಡುಗಳನ್ನು ಸ್ಥಳಾಂತರಿಸುವುದು, ಮೀಸಲಾದ ‘ಸ್ಮಾಗ್ ವಾರ್ ರೂಮ್’ ಮತ್ತು ಪರಿಸರ ಉಲ್ಲಂಘನೆಗಳನ್ನು ವರದಿ ಮಾಡಲು ಜನರಿಗೆ ಸಹಾಯವಾಣಿ ಮುಂತಾದ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories